Asianet Suvarna News Asianet Suvarna News

ಪಂದ್ಯ ಸೋತರೂ ಅಭಿಮಾನಿಗಳ ಹೃದಯ ಗೆದ್ದ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್‌..!

* ಮೊದಲ ಟಿ20 ಪಂದ್ಯದಲ್ಲಿ ಹರ್ಲಿನ್‌ ಡಿಯೋಲ್‌ ಹಿಡಿದ ಕ್ಯಾಚ್ ವೈರಲ್‌

* ಬೌಂಡರಿ ಲೈನ್‌ನಲ್ಲಿ ಡೈವ್‌ ಮಾಡಿ ಕ್ಯಾಚ್ ಪಡೆದ ಡಿಯೋಲ್‌

* ಅದ್ಭುತ ಪ್ರದರ್ಶನದ ಹೊರತಾಗಿಯೂ ಮೊದಲ ಟಿ20 ಪಂದ್ಯ ಸೋತ ಭಾರತ ಮಹಿಳಾ ತಂಡ

Indian Women Cricketer Harleen Deol produces one of the best catches ever against England kvn
Author
Northampton, First Published Jul 10, 2021, 9:52 AM IST

ನಾರ್ಥಾಂಪ್ಟನ್‌(ಜು.10): ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಡೆಕ್ವರ್ಥ್‌ ಲೂಯಿಸ್ ನಿಯಮದನ್ವಯ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು 18 ರನ್‌ಗಳ ಗೆಲುವು ದಾಖಲಿಸಿದೆ. ಆದರೆ ಈ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರ್ಲಿನ್‌ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್‌ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಇಂಗ್ಲೆಂಡ್ ತಂಡದ ಪರ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಆ್ಯಮಿ ಎಲೆನ್‌ ಜೋನ್ಸ್‌ ಅರ್ಧಶತಕದತ್ತ ದಾಪುಗಾಲು ಇಡುತ್ತಿದ್ದರು. 19ನೇ ಓವರ್‌ನಲ್ಲಿ ಇಂಗ್ಲೆಂಡ್ ಕೇವಲ 4 ವಿಕೆಟ್ ಕಳೆದುಕೊಂಡು 166 ರನ್‌ ಬಾರಿಸಿತ್ತು. ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಆ್ಯಮಿ ಜೋನ್ಸ್‌ ಕೇವಲ 26 ಎಸೆತಗಳಲ್ಲಿ 43 ರನ್‌ ಚಚ್ಚಿದ್ದರು. ಈ ವೇಳೆ ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಆ್ಯಮಿ ಎಲೆನ್‌ ಜೋನ್ಸ್‌ ಲಾಂಗ್‌ ಆಫ್‌ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ವೈಡ್‌ ಲಾಂಗ್‌ ಆಫ್‌ನ ಬೌಂಡರಿ ಗೆರೆಯಲ್ಲಿ ನಿಂತಿದ್ದ ಹರ್ಲಿನ್ ಡಿಯೋಲ್‌ ಸಿಕ್ಸರ್‌ ತಡೆದು ಡೈವ್ ಮಾಡುವ ಮೂಲಕ ಅದ್ಭುತವಾದ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. 

ಟಿ20 ಸರಣಿಯಲ್ಲಿ ಇಂಗ್ಲೆಂಡ್‌ಗೆ ಶಾಕ್‌ ಕೊಡಲು ಹರ್ಮನ್‌ಪ್ರೀತ್ ಕೌರ್ ಪಡೆ ರೆಡಿ

ಹರ್ಲಿನ್‌ ಡಿಯೋಲ್‌ ಹಿಡಿದ ಕ್ಯಾಚ್‌ ಕೇವಲ ಭಾರತೀಯ ಅಭಿಮಾನಿಗಳು ಮಾತ್ರವಲ್ಲ, ಇಂಗ್ಲೆಂಡ್ ಕ್ರಿಕೆಟಿಗರ ಮೆಚ್ಚುಗೆಗೂ ಪಾತ್ರವಾಗಿದೆ.

 
ಭಾರತ ಮಹಿಳಾ ಕ್ರಿಕೆಟ್ ತಂಡದ ಅದ್ಭುತ ಕ್ಷೇತ್ರರಕ್ಷಣೆಯ ಪ್ರದರ್ಶನದ ಹೊರತಾಗಿಯೂ, ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ತಂಡವು ಡೆಕ್ವರ್ಥ್ ಲೂಯಿಸ್ ನಿಯಮದಂತೆ 18 ರನ್‌ಗಳ ಗೆಲುವು ದಾಖಲಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಮಹಿಳಾ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 177 ರನ್‌ ಬಾರಿಸಿತ್ತು. ಇನ್ನು ಕಠಿಣ ಗುರಿ ಬೆನ್ನತ್ತಿದ ಭಾರತ 8.3 ಓವರ್‌ಗೆ 3 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಫಲಿತಾಂಶಕ್ಕೆ ಡೆಕ್ವರ್ಥ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು.

Follow Us:
Download App:
  • android
  • ios