ಭಾರತೀಯ ಕ್ರಿಕೆಟರ್ಸ್ಗೆ ಪಾಂಟಿಂಗ್ ಅಡ್ಡಗಾಲು, ತ್ರಿಮೂರ್ತಿಗಳಿಗೆ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗ್ತಿಲ್ಲ..!
ರಿಕಿ ಪಾಂಟಿಂಗ್ ದಾಖಲೆ ಬ್ರೇಕ್ ಮಾಡಲು ಹೆಣಗಾಡುತ್ತಿರುವ ಭಾರತೀಯ ಕ್ರಿಕೆಟರ್ಸ್
ಪಾಂಟಿಂಗ್ ದಾಖಲೆ ಮುರಿಯಲು ಧೋನಿ ಸಹ ವಿಫಲ
ಪಂಟರ್ ದಾಖಲೆ ಮುರಿಯಲು ಕೊಹ್ಲಿ-ರೋಹಿತ್‌ಗೂ ಸಾಧ್ಯವಾಗುತ್ತಿಲ್ಲ
ಬೆಂಗಳೂರು(ಜು.26): ರಿಕಿ ಪಾಂಟಿಂಗ್. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್. ಪಂಟರ್ ಎಂದೇ ಫೇಮಸ್. ಮೂರು ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯ. ಎರಡು ವರ್ಲ್ಡ್ಕಪ್ ಗೆಲ್ಲಿಸಿಕೊಟ್ಟ ನಾಯಕ. 3ನೇ ಕ್ರಮಾಂಕದಲ್ಲಿ ಪಾಂಟಿಂಗ್ ಆಡಿದಷ್ಟು ಪಂದ್ಯಗಳನ್ನಾಗಲಿ, ಅವರು ಗಳಿಸಿದಷ್ಟು ರನ್ಗಳನ್ನು ಯಾರೂ ಗಳಿಸಿಲ್ಲ. ಈಗಲೂ ಅನೇಕ ರೆಕಾರ್ಡ್ಗಳು ಪಂಟರ್ ಹೆಸರಿನಲ್ಲಿವೆ. ಈಗ ಇದೇ ಪಾಂಟಿಂಗ್, ತಮ್ಮ ದಾಖಲೆಗಳನ್ನ ಮುರಿಯುವ ಹೊಸ್ತಿಲಲ್ಲಿರುವ ಭಾರತೀಯ ಆಟಗಾರರಿಗೆ ಅಡ್ಡಗಾಲು ಹಾಕ್ತಿದ್ದಾರೆ. ಹೌದು, ಇದುವರೆಗೂ ಪಾಂಟಿಂಗ್ ಅವರ ಕೆಲ ದಾಖಲೆಗಳನ್ನು ಭಾರತೀಯರಿಂದ ಮುರಿಯಲು ಸಾಧ್ಯವಾಗಿಲ್ಲ. ಇದೇ ಕಿಂಗ್ ಕೊಹ್ಲಿ ಶತಕ ಹೊಡೆಯದಿರಲು ಕಾರಣವಾಗಿದ್ಯಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ.
ಪಂಟರ್ ರೆಕಾರ್ಡ್ ಬ್ರೇಕ್ ಮಾಡದೆ ಧೋನಿ ನಿವೃತ್ತಿ:
ರಿಕಿ ಪಾಂಟಿಂಗ್ 4 ಐಸಿಸಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದಾರೆ. ವಿಶ್ವದ ಯಾವೊಬ್ಬ ಆಟಗಾರನೂ 4 ಐಸಿಸಿ ಟ್ರೋಫಿ ಗೆದ್ದಿಲ್ಲ. ಅಲ್ಲಿಗೆ ಪಂಟರ್ ವಿಶ್ವದಾಖಲೆ ಮಾಡಿದ್ದಾರೆ. ಆ ರೆಕಾರ್ಡ್ ಬ್ರೇಕ್ ಮಾಡೋ ಅವಕಾಶ ಎಂಎಸ್ ಧೋನಿಗೆ ಇತ್ತಾದ್ರೂ ಅವರು ಗೆದ್ದಿದ್ದು ಮೂರು ಐಸಿಸಿ ಟ್ರೋಫಿಗಳನ್ನಷ್ಟೇ. ಎಷ್ಟೇ ಪ್ರಯತ್ನ ಪಟ್ಟರೂ ರಿಕಿ ದಾಖಲೆ ಮುರಿಯಲಾಗದೆ ಧೋನಿ ನಿವೃತ್ತಿ ಘೋಷಿಸಿದ್ರು.
ನಾಯಕನಾಗಿ ಪಂಟರ್ಗೆ 28 ಪಂದ್ಯಶ್ರೇಷ್ಠ ಪ್ರಶಸ್ತಿ. ನಾಯಕನಾಗಿ ಕೊಹ್ಲಿಗೆ 27 ಪಂದ್ಯ ಶ್ರೇಷ್ಠ ಪ್ರಶಸ್ತಿ:
ನಾಯಕನಾಗಿ 28 ಪಂದ್ಯಗಳಲ್ಲಿ ರಿಕಿ ಪಾಂಟಿಂಗ್ ಪಂದ್ಯ ಶ್ರೇಷ್ಠರಾಗಿದ್ದರೆ, ವಿರಾಟ್ ಕೊಹ್ಲಿ 27 ಮ್ಯಾಚ್ನಲ್ಲಿ ಪಂದ್ಯ ಶ್ರೇಷ್ಠರಾಗಿದ್ದಾರೆ. ರಿಕಿ ಪಾಂಟಿಂಗ್ ರೆಕಾರ್ಡ್ ಬ್ರೇಕ್ ಮಾಡುವ ಮೊದಲೇ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿಬಿಟ್ಟರು.
ಆಸೀಸ್ಗೆ ಸತತ 20 ಪಂದ್ಯ ಗೆಲ್ಲಿಸಿಕೊಟ್ಟಿರುವ ಪಾಂಟಿಂಗ್. ನಾಯಕನಾಗಿ ರೋಹಿತ್ ಜಯದ ಓಟ 19ಕ್ಕೆ ಸ್ಟಾಪ್:
ಆಸ್ಟ್ರೇಲಿಯಾ ತಂಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ರಿಕಿ ಪಾಂಟಿಂಗ್, ಸತತ 20 ಪಂದ್ಯಗಳನ್ನ ಗೆಲ್ಲಿಸಿಕೊಟ್ಟು ವಿಶ್ವದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ 19 ಪಂದ್ಯ ಗೆದ್ದಿತ್ತು. ಇನ್ನೆರಡು ಪಂದ್ಯ ಗೆದ್ದಿದ್ದರೆ, ಪಂಟರ್ ರೆಕಾರ್ಡ್ ಬ್ರೇಕ್ ಮಾಡುತ್ತಿದ್ದರು ರೋಹಿತ್. ಆದ್ರೆ ಭಾರತ, ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯ ಸೋಲುವ ಮೂಲಕ ಪಾಂಟಿಂಗ್ ದಾಖಲೆ ಹಾಗೆ ಉಳಿದುಕೊಂಡಿದೆ.
ರಿಷಭ್ ಪಂತ್ರಿಂದ ಆಸ್ಟ್ರೇಲಿಯಾಗೆ ಸಾವಿರಾರು ಕೋಟಿ ಲಾಭ...?
ರಿಕಿ ಪಾಂಟಿಂಗ್ 30 ಏಕದಿನ ಶತಕ. 29ಕ್ಕೆ ಸ್ಟಾಪ್ ಆಗಿದೆ ರೋಹಿತ್ ಒನ್ಡೇ ಸೆಂಚುರಿ:
ಪಾಂಟಿಂಗ್ ಏಕದಿನ ಕ್ರಿಕೆಟ್ನಲ್ಲಿ 30 ಶತಕ ಬಾರಿಸಿದ್ದಾರೆ. ರೋಹಿತ್ ಶರ್ಮಾ 29 ಸೆಂಚುರಿ ಬಾರಿಸಿದ್ದು, ಪಂಟರ್ ರೆಕಾರ್ಡ್ ಬ್ರೇಕ್ ಮಾಡಲು ಇನ್ನೆರಡು ಶತಕ ಹೊಡೆಯಬೇಕು. ಆದ್ರೆ 2019ರಿಂದ ರೋಹಿತ್, ಒನ್ಡೇ ಕ್ರಿಕೆಟ್ನಲ್ಲಿ ಹಿಟ್‌ಮ್ಯಾನ್ ಸೆಂಚುರಿ ಹೊಡೆದಿಲ್ಲ. ಹೊಡೆಯದೆಯೇ ನಿವೃತ್ತಿ ಹೊಂದಿಬಿಡ್ತಾರಾ ಅನ್ನೋ ಅನುಮಾನ ಶುರುವಾಗಿಬಿಟ್ಟಿದೆ.
ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ ಪಾಂಟಿಂಗ್ 71 ಶತಕ, 70 ಶತಕಕ್ಕೆ ಸ್ಟಾಪ್ ಆಗಿದೆ ಕೊಹ್ಲಿ ಶತಕದ ಓಟ:
ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ ಪಾಂಟಿಂಗ್ ಬರೋಬ್ಬರಿ 71 ಶತಕ ಬಾರಿಸಿದ್ದಾರೆ. ಈ ದಾಖಲೆ ಮುರಿಯಲು ಕಿಂಗ್ ಕೊಹ್ಲಿ ಇನ್ನೆರಡು ಶತಕ ಹೊಡೆಯಬೇಕು. ಆದ್ರೆ ಎರಡುವರೆ ವರ್ಷದಿಂದ ಕೊಹ್ಲಿ ಶತಕ ಹೊಡೆದೇ ಇಲ್ಲ. ಕೊಹ್ಲಿಗೆ ಪಂಟರ್ ಅಡ್ಡಗೊಡೆಯಾಗಿ ನಿಂತುಬಿಟ್ಟಿದ್ದಾರೆ. ಇದನ್ನ ನೋಡಿ, ಎಲ್ಲರೂ ಪಾಟಿಂಗ್ ಭಾರತೀಯರಿಗೆ ಅಡ್ಡಗಾಲು ಹಾಕ್ತಿದ್ದಾರೆ ಅಂತ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.