WI vs Ind: ವಿಂಡೀಸ್ ವಿರುದ್ಧದ 3ನೇ ಪಂದ್ಯ ಗೆದ್ದ ಭಾರತ, ಸರಣಿಯಲ್ಲಿ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ
ಬಾಸೆಟೆರೆ ವಾರ್ನರ್ ಪಾರ್ಕ್‌ನಲ್ಲಿ ನಡೆದ ಆತಿಥೇಯ ವೆಸ್ಟ್‌ಇಂಡೀಸ್ ಹಾಗೂ ಭಾರತ ನಡುವನ ಮೂರನೇ ಟಿ-ಟ್ವಿಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ ಭಾರಿಸಿದೆ.
ಬಾಸೆಟೆರೆ(ಆ.03): ಬಾಸೆಟೆರೆ ವಾರ್ನರ್ ಪಾರ್ಕ್‌ನಲ್ಲಿ ನಡೆದ ಆತಿಥೇಯ ವೆಸ್ಟ್‌ಇಂಡೀಸ್ ಹಾಗೂ ಭಾರತ ನಡುವನ ಮೂರನೇ ಟಿ-ಟ್ವಿಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ ಭಾರಿಸಿದೆ. ಈ ಮೂಲಕ ಐದು ಟಿ-ಟ್ವಿಂಟಿ ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡದ ಕೆ ಮೇಯರ್ಸ್ ಆಕರ್ಷಕ(73)ರನ್ ಗಳಿಸಿ ಭುವನೇಶ್ವರ್‌ಗೆ ಬಲಿಯಾದರು. ಬ್ರಾಂಡನ್ ಕಿಂಗ್(20), ಪೂರನ್(22), ರೋವ್ಮನ್ ಪೊವೆಲ್(23) ಹಾಗೂ ಹೆಟ್ಮೆಯರ್(20) ರನ್ ಸಿಡಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗುರಿ ನೀಡಿತ್ತು.
ಭಾರತದ ಪರ ಭುವನೇಶ್ವರ್ ಕುಮಾರ್(2), ಹಾರ್ದಿಕ್ ಪಾಂಡ್ಯ(2) ಹಾಗೂ ಅರ್ಶದೀಪ್ ಸಿಂಗ್(1) ವಿಕೆಟ್ ಪಡೆದು ಸಂಭಮ್ರಿಸಿದ್ದರು.
ಈ ಗುರಿ ಬೆನ್ನತ್ತಿದ ಭಾರತದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ(11) ಗಾಯಗೊಂಡು ಪೆವಿಲಿಯನ್ ಸೇರಿಕೊಂಡರು. ಸೂರ್ಯಕುಮಾರ್ ಯಾದವ್ ಆಕರ್ಷಕ (76) ರನ್ ಗಳಿಸಿ ಔಟಾದರು. ಇನ್ನು ಶ್ರೇಯಸ್ ಅಯ್ಯರ್(24), ಹಾರ್ದಿಕ್ ಪಾಂಡ್ಯ ಹಾಗೂ ರಿಶಭ್ ಪಂತ್(33) ಹಾಗೂ ದೀಪಕ್ ಹೂಡಾ(10) ಗಳಿಸುವ ಮೂಲಕ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
Asia Cup 2022 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಪಾಕ್ ಎದುರಾಳಿ..!
ವಿಂಡೀಸ್ ತಂಡದ ಪರ ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್ ಹಾಗೂ ಅಕೇಲ್ ಹೊಸೈನ್ ತಲಾ ಒಂದು ವಿಕೆಟ್ ಪಡೆದರು. ನಾಲ್ಕನೇ ಪಂದ್ಯ ಆ.6 ರಂದು ಫ್ಲೋರಿಡಾದಲ್ಲಿ ನಡೆಯಲಿದೆ.