ಕ್ರೈಸ್ಟ್‌ಚರ್ಚ್(ಮಾ.01): ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ವಿಶ್ವಕ್ರಿಕೆಟ್‌ನ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನ್ನುವ ವಿಚಾರದಲ್ಲಿ ಎರಡು ಮಾತಿಲ್ಲ. ಜಡೇಜಾ ಮೈದಾನದಲ್ಲಿದ್ದರೆ ಚಿರತೆಯಂತೆ ಜಿಗಿದು ಕ್ಯಾಚ್ ಹಿಡಿಯುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. 

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಜಡ್ಡು ಅಂತಹದ್ದೇ ಒಂದು ಸ್ಟನ್ನಿಂಗ್ ಕ್ಯಾಚ್ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಿಡಿದ ಕ್ಯಾಚ್ ಸ್ವತಃ ಬ್ಯಾಟ್ಸ್‌ಮನ್ ನೀಲ್ ವ್ಯಾಗ್ನರ್ ತಬ್ಬಿಬ್ಬಾಗುವಂತೆ ಮಾಡಿದರು. 

2ನೇ ಟೆಸ್ಟ್: ಮತ್ತೊಂದು ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ

ಒಂದು ಹಂತದಲ್ಲಿ ಕೈಲ್ ಜಾಮಿಸನ್ ಹಾಗೂ ನೀಲ್ ವ್ಯಾಗ್ನರ್ ಅರ್ಧಶತಕದ ಜತೆಯಾಟವಾಡುವ ಭಾರತದ ಪಾಲಿಗೆ ಕಂಠಕವಾಗಿ ಪರಿಣಮಿಸಿದ್ದರು. ಈ ವೇಳೆ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಸ್ಕ್ವೇರ್‌ಲೆಗ್‌ನತ್ತ ಬಾರಿಸಿದ ಚೆಂಡನ್ನು ಜಡೇಜಾ ಅದ್ಭುತವಾಗಿ ಕ್ಯಾಚ್ ಹಿಡಿಯುವಲ್ಲಿ  ಯಶಸ್ವಿಯಾದರು.

ಹೀಗಿತ್ತು ನೋಡಿ ಆ ಕ್ಯಾಚ್:

ಜಡೇಜಾ ಕ್ಯಾಚ್ ನೋಡಿದ ನೆಟ್ಟಿಗರು, ಜಡ್ಡು ವಿಶ್ವದ ಶ್ರೇಷ್ಠ ಫೀಲ್ಡರ್ ಎಂದು ಕೊಂಡಾಡಿದ್ದಾರೆ.