ಇಂದೋರ್(ನ.13): ಬಾಂಗ್ಲಾದೇಶ ವಿರುದ್ದದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಲು ತುದಿಗಾಲಲ್ಲಿ ನಿಂತಿದೆ. ಇಂದೋರ್‌ನಲ್ಲಿ ನವೆಂಬರ್ 14ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳುತ್ತಿದೆ. ಟಿ20 ಸರಣಿಯಿಂದ ವಿಶ್ರಾಂತಿ ಪಡೆದ್ದ ನಾಯಕ ವಿರಾಟ್ ಕೊಹ್ಲಿ ತಂಡ ಸೇರಿಕೊಂಡಿದ್ದಾರೆ. 

ಇದನ್ನೂ ಓದಿ: ಪಿಂಕ್ ಬಾಲ್‌ನಲ್ಲಿ ಟೀಂ ಇಂಡಿಯಾ ಪ್ರಾಕ್ಟೀಸ್!

ಮೊದಲ ಟೆಸ್ಟ್ ಪಂದ್ಯಕ್ಕೆ ಯಾರಿಗೆಲ್ಲಾ ಸ್ಥಾನ ಸಿಗಲಿದೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದ ತಂಡಕ್ಕೂ ಬಾಂಗ್ಲಾ ವಿರುದ್ಧ ಕಣಕ್ಕಿಲಿಯಲಿರುವ ತಂಡಕ್ಕಿರುವ ಬದಲಾವಣೆಗಳೇನು? ಈ ಕುರಿತು ಸುವರ್ಣನ್ಯೂಸ್.ಕಾಂ ಸಂಭವನೀಯ ತಂಡವನ್ನು ಪ್ರಕಟಿಸುತ್ತಿದೆ.

ಇದನ್ನೂ ಓದಿ: ಕೊಹ್ಲಿಗೆ ಮುಂದೈತೆ ತಲೆನೋವು; ರೋಹಿತ್ ಹೇಳಿಕೆಗೆ ಆಯ್ಕೆ ಸಮಿತಿ ಕಂಗಾಲು!

ಭಾರತ ಸಂಭವನೀಯ ತಂಡ: 
ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ(ನಾಯಕ),  ಚೇತೇಶ್ವರ್ ಪೂಜಾರ, ವೃದ್ಧಿಮಾನ್ ಸಾಹ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್

ಬಾಂಗ್ಲಾದೇಶ ಸಂಭವನೀಯ ತಂಡ:
ಲಿಟ್ಟನ್ ದಾಸ್, ಇಮ್ರುಲ್ ಕೈಸ್, ಮೊಮಿನಲ್ ಹಕ್, ಮುಶ್ಫಿಕರ್ ರಹೀಮ್, ಮೊಹಮ್ಮದುಲ್ಲಾ, ಮೊಸಾದೆಕ್ ಹುಸೈನ್, ಸೈಪ್ ಹಸನ್, ಮೆಹದಿ ಹಸನ್, ಎಬದತ್ ಹುಸೈನ್, ಅಲ್ ಅಮಿನ್ ಹುಸೈನ್, ಮುಸ್ತಾಫಿಜುರ್ ರೆಹಮಾನ್