2018ರ ನಿದಾಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಆಟಗಾರರು, ಶ್ರೀಲಂಕಾ ವಿರುದ್ಧ ಗೆದ್ದ ಮೇಲೆ ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡಿದ್ರು. ಬಾಂಗ್ಲಾ ಆಟಗಾರರ ವಿಕೃತ ಆನಂದ ಕಂಡು ಕ್ರಿಕೆಟ್ ಫ್ಯಾನ್ಸ್ ಕೆಂಡಕಾರಿದ್ರು. ಇನ್ನು ಬಾಂಗ್ಲಾದೇಶ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ರ ಆನ್‌ಫೀಲ್ಡ್‌ನ ಕಾಂಟ್ರವರ್ಸಿಗಳು ಒಂದೆರೆಡಲ್ಲ. ಈಗ ಈ ಕೆಟ್ಟ ಚಾಳಿ ಬಾಂಗ್ಲಾದೇಶದ ಜೂನಿಯರ್ ಆಟಗಾರರಿಗೆ ಬಂದಿದೆ.
ಬೆಂಗಳೂರು(ಜ.21): ಕ್ರಿಕೆಟ್ ಜಗತ್ತಿನಲ್ಲಿ WORST ಟೀಂ ಯಾವ್ದಾದ್ರೂ ಇದ್ರೆ ಅದು ಬಾಂಗ್ಲಾದೇಶ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬಾಂಗ್ಲಾ ಆಟಗಾರರಿಗೆ ಆನ್‌ಫೀಲ್ಡ್‌ನಲ್ಲಿ ಹೇಗಿರಬೇಕು..? ಆಟಕ್ಕೆ ಹೇಗೆ ಗೌರವ ಕೊಡಬೇಕು ಅನ್ನೋದೆ ಗೊತ್ತಿಲ್ಲ. ಸುಖಾಸುಮ್ಮನೆ ಕಾಲು ಕೆರೆದುಕೊಂಡು ಎದುರಾಳಿ ಆಟಗಾರರ ಜೊತೆ ಜಗಳವಾಡೋದೇ ಬಾಂಗ್ಲಾ ಆಟಗಾರರ ಚಾಳಿಯಾಗಿದೆ.
2018ರ ನಿದಾಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಆಟಗಾರರು, ಶ್ರೀಲಂಕಾ ವಿರುದ್ಧ ಗೆದ್ದ ಮೇಲೆ ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡಿದ್ರು. ಬಾಂಗ್ಲಾ ಆಟಗಾರರ ವಿಕೃತ ಆನಂದ ಕಂಡು ಕ್ರಿಕೆಟ್ ಫ್ಯಾನ್ಸ್ ಕೆಂಡಕಾರಿದ್ರು. ಇನ್ನು ಬಾಂಗ್ಲಾದೇಶ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ರ ಆನ್‌ಫೀಲ್ಡ್‌ನ ಕಾಂಟ್ರವರ್ಸಿಗಳು ಒಂದೆರೆಡಲ್ಲ. ಈಗ ಈ ಕೆಟ್ಟ ಚಾಳಿ ಬಾಂಗ್ಲಾದೇಶದ ಜೂನಿಯರ್ ಆಟಗಾರರಿಗೆ ಬಂದಿದೆ.
ಯೆಸ್, ಬಾಂಗ್ಲಾದೇಶದ ಅಂಡರ್ 19 ಆಟಗಾರರು ಅದೇ ತಮ್ಮ ಸೀನಿಯರ್‌ಗಳ ಚಾಳಿಯನ್ನು ಮುಂದುವರಿಸಿದ್ದಾರೆ. ಅಂಡರ್ 19 ವಿಶ್ವಕಪ್ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಆಟಗಾರರು ತಮ್ಮ ಥರ್ಡ್‌ಕ್ಲಾಸ್ ಮೆಂಟಾಲಿಟಿ ಪ್ರದರ್ಶನ ಮಾಡಿದ್ದಾರೆ. ಬೇಕು ಅಂತಲೇ ಭಾರತದ ಆಟಗಾರರನ್ನು ಕೆಣಕಿದ್ದಾರೆ.
ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ, 25ನೇ ಓವರ್‌ನಲ್ಲಿ ಆದರ್ಶ್ ಸಿಂಗ್ ಮತ್ತು ಉದಯ್ ಸಹರನ್ ಬ್ಯಾಟಿಂಗ್ ಮಾಡ್ತಿದ್ರು. ಈ ಇಬ್ಬರು ಅದ್ಬುತ ಬ್ಯಾಟಿಂಗ್ ಮೂಲಕ ಬಾಂಗ್ಲಾ ಬೌಲಿಂಗ್ ದಾಲಿಯನ್ನ ಸಮರ್ಥವಾಗಿ ಎದುರಿಸಿದ್ರು. ಇದ್ರಿಂದ ಹತಾಶರಾದ ಬಾಂಗ್ಲಾ ಬೌಲರ್ ಆರಿಫುಲ್ ಇಸ್ಲಾಂ, ಭಾರತದ ನಾಯಕ ಉದಯ್ ಮೇಲೆ ಮುಗಿಬಿದ್ರು. ಸಾಲದ್ದಕ್ಕೆ ಮತ್ತಿಬ್ಬರು ಅರಿಫುಲ್ಗೆ ಸಾಥ್ ನೀಡಿದ್ರು. ನಂತರ ಅಂಪೈರ್ ಮೂವರಿಗೆ ಬುದ್ಧಿ ಹೇಳಿದ್ರು. ಇದೊಂದೆ ಘಟನೆಯಷ್ಟೇ ಅಲ್ಲ, ಪಂದ್ಯದುದ್ದಕ್ಕೂ ಬಾಂಗ್ಲಾ ಆಟಗಾರರು ಅಸಭ್ಯ ರೀತಿಯಲ್ಲಿ ವರ್ತಿಸಿದ್ರು.
ವಿಶ್ವಕಪ್ ಸಮರದಲ್ಲಿ ಭಾರತ ಶುಭಾರಂಭ..!
ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬಾವುಟ ಹಾರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕ್ಯಾಪ್ಟನ್ ಉದಯ್ ಸಹರನ್ ಮತ್ತು ಆದರ್ಶ್ ಸಿಂಗ್ರ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತು. ಈ ಗುರಿಯನ್ನ ಬೆನ್ನಟ್ಟಲಾಗದೇ ಬಾಂಗ್ಲಾ ಪಡೆ ಸೋಲು ಕಂಡಿತು. ಈ ಗೆಲುವಿನೊಂದಿಗೆ ವಿಶ್ವಕಪ್ ಸಮರದಲ್ಲಿ ಭಾರತ ಶುಭಾರಂಭ ಮಾಡಿದೆ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್