* ಮೊಹಾಲಿ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದ ಟೀಂ ಇಂಡಿಯಾ* ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿದ ಆಟಗಾರರು* ಅಪ್ಪಟ ಅಭಿಮಾನಿಗೆ ಸ್ಪೆಷಲ್ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ಮೊಹಾಲಿ(ಮಾ.07): ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವೆ ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವು ವಿರಾಟ್ ಕೊಹ್ಲಿ (Virat Kohli) ಪಾಲಿನ 100ನೇ ಟೆಸ್ಟ್ ಪಂದ್ಯವಾಗಿತ್ತು. ಈ ಪಂದ್ಯವನ್ನು ಭಾರತ ಕ್ರಿಕೆಟ್‌ ತಂಡವು (Indian Cricket Team) ಇನಿಂಗ್ಸ್‌ ಹಾಗೂ 222 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಮಾಜಿ ನಾಯಕನಿಗೆ ಈ ಪಂದ್ಯ ಮತ್ತಷ್ಟು ಸ್ಮರಣೀಯವನ್ನಾಗಿಸಿದರು. ಇದೀಗ ಕಿಂಗ್ ಕೊಹ್ಲಿ, ಟೆಸ್ಟ್ ಪಂದ್ಯ ಮುಕ್ತಾಯದ ಬಳಿಕ ವಿಕಲಚೇತನ ಅಭಿಮಾನಿಗೆ ವಿಶೇಷ ಗಿಫ್ಟ್ ನೀಡುವ ಮತ್ತೊಮ್ಮೆ ಹೃದಯವೈಶಾಲ್ಯತೆ ಮೆರೆದಿದ್ದಾರೆ.

ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 45 ರನ್ ಬಾರಿಸಿ ಲಸಿತ್ ಎಂಬಲ್ಡಿನಿಯಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿದರು. ವಿರಾಟ್ ಕೊಹ್ಲಿ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಆದರೆ ಮೈದಾನದಾಚೆ ವಿರಾಟ್ ಕೊಹ್ಲಿ ತೋರಿದ ಒಂದು ಗುಣ ಇದೀಗ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ

ಹೌದು, ಶ್ರೀಲಂಕಾ ವಿರುದ್ದದ ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ, ತಾವು ಬಳಸಿದ್ದ ಜೆರ್ಸಿಯೊಂದನ್ನು ತಮ್ಮ ವಿಕಲಚೇತನ ಅಪ್ಪಟ ಅಭಿಮಾನಿ ಧರ್ಮವೀರ್ ಪಾಲ್‌ಗೆ ಗಿಫ್ಟ್‌ ಆಗಿ ನೀಡಿದ್ದಾರೆ. ಧರ್ಮವೀರ್ ಪಾಲ್‌ ಒಂದು ರೀತಿ ಅನಧಿಕೃತ ಟೀಂ ಇಂಡಿಯಾ ಹನ್ನೆರಡನೇ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಭಾರತದಾದ್ಯಂತ ಹಾಗೂ ಜಗತ್ತಿನಾದ್ಯಂತ ನಡೆಯಲಿರುವ ಭಾರತದ ಪಂದ್ಯಗಳನ್ನು ವೀಕ್ಷಿಸಲು ಧರ್ಮವೀರ್ ಪಾಲ್‌ ಸದಾ ಪ್ರವಾಸ ಮಾಡುತ್ತಲೇ ಇರುತ್ತಾರೆ. ಮೊಹಾಲಿ ಟೆಸ್ಟ್ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಬಸ್ ಜತೆಗೆ ಹೋಟೆಲ್‌ಗೆ ತೆರಳುವ ಮುನ್ನ ವಿರಾಟ್ ಕೊಹ್ಲಿ, ತಮ್ಮ ಅಭಿಮಾನಿ ಬಳಿ ಬಂದು ಜೆರ್ಸಿ ಗಿಫ್ಟ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Scroll to load tweet…

ನನ್ನ ಪಾಲಿಗೆ ರವಿಚಂದ್ರನ್ ಅಶ್ವಿನ್ ಸಾರ್ವಕಾಲಿಕ ದಿಗ್ಗಜ ಆಟಗಾರರನೆಂದ ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ 100ನೇ ಟೆಸ್ಟ್‌ನಲ್ಲಿ ಯುವರಾಜನಂತೆ ಮೆರೆದಾಡಿದ ರವೀಂದ್ರ ಜಡೇಜಾ

ಮೊಹಾಲಿ ಟೆಸ್ಟ್ (Mohali Test) ಪಂದ್ಯವು ವಿರಾಟ್ ಕೊಹ್ಲಿಯವರ ಕಾರಣಕ್ಕಾಗಿಯೇ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿತ್ತು. ಬಿಸಿಸಿಐ (BCCI) ಮೊದಲಿಗೆ ಮೊಹಾಲಿ ಟೆಸ್ಟ್ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ಆಯೋಜಿಸಲು ಚಿಂತನೆ ನಡೆಸಿತ್ತು. ಆದರೆ ಅಭಿಮಾನಿ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಬೇಕು ಎಂದು ಬಿಸಿಸಿಐ ಬಳಿ ಮನವಿ ಮಾಡಿಕೊಂಡಿದ್ದರು. ಟ್ವಿಟರ್‌ನಲ್ಲಿ ಅಭಿಮಾನಿಗಳು ಕ್ಯಾಂಪೇನ್ ಕೂಡಾ ನಡೆಸಿದ್ದರು. ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡಾ ಪ್ರೇಕ್ಷಕರ ಪ್ರವೇಶಕ್ಕೆ ಬಿಸಿಸಿಐ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು. ಪರಿಣಾಮ ಕೊನೆಯ ಕೆಲದಿನಗಳು ಬಾಕಿ ಇದ್ದಾಗ ಪ್ರತಿದಿನ 50% ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಬಿಸಿಸಿಐ ಅವಕಾಶ ಮಾಡಿಕೊಟ್ಟಿತ್ತು.

ವಿರಾಟ್ ಕೊಹ್ಲಿಯಾಟವನ್ನು ಕಣ್ತುಂಬಿಕೊಳ್ಳಬೇಕು ಎಂದು ಮೈದಾನಕ್ಕೆ ಬಂದಿದ್ದ ಅಭಿಮಾನಿಗಳಿಗೆ ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನದ ಮೂಲಕ ನೆರೆದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು. ಬ್ಯಾಟಿಂಗ್‌ನಲ್ಲಿ ಅಜೇಯ 175 ರನ್ ಬಾರಿಸಿದ್ದ ಜಡೇಜಾ, ಬೌಲಿಂಗ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 5 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಇದೇ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್, ಕಪಿಲ್ ದೇವ್(434) ಅವರ ಹೆಸರಿನಲ್ಲಿದ್ದ ವಿಕೆಟ್ ದಾಖಲೆಯನ್ನು ಹಿಂದಿಕ್ಕಿ ಭಾರತ ಪರ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.