Asianet Suvarna News

#INDvSL;ಚಹಾಲ್ ಮ್ಯಾಜಿಕ್, ಶ್ರೀಲಂಕಾ ಆರಂಭಿಕರ ಜೊತೆಯಾಟಕ್ಕೆ ಬ್ರೇಕ್!

  • ಭಾರತದ ವಿರುದ್ಧ ದಿಟ್ಟ ಆರಂಭ ನೀಡಿದ ಶ್ರೀಲಂಕಾ
  • ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ಹಾಕಿದ ಚಹಾಲ್
  • ಲಂಕಾದ ಮೊದಲ ವಿಕೆಟ್ ಪತನ
IND vs SL odi Yuzvendra Chahal gets Avishka Fernando wicket off his first ball ckm
Author
Bengaluru, First Published Jul 18, 2021, 4:05 PM IST
  • Facebook
  • Twitter
  • Whatsapp

ಕೊಲೊಂಬೊ(ಜು.18):  ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಆರಂಭದಲ್ಲೇ ತೀವ್ರ ರೋಚಕತೆ ಪಡೆಯುತ್ತಿದೆ. ಭಾರತ ವಿರುದ್ಧ ಟಾಸ್ ಗೆದ್ದ ಬ್ಯಾಟಿಂಗ್ ಇಳಿದ ಶ್ರೀಲಂಕಾ, ಉತ್ತಮ ಆರಂಭ ಪಡೆದಿತ್ತು. ಆವಿಶ್ಕಾ ಫರ್ನಾಂಡೋ ಹಾಗೂ ಮಿನೋದ್ ಬಾನುಕಾ 49 ರನ್‌ಗಳ ಜೊತೆಯಾಟ ನೀಡಿದ್ದರು. ಇವರಿಬ್ಬರ ಜೊತೆಯಾಟಕ್ಕೆ ಯಜುವೇಂದ್ರ ಚಹಾಲ್ ಬ್ರೇಕ್ ಹಾಕಿದ್ದಾರೆ.

ಹುಟ್ಟು ಹಬ್ಬ ದಿನವೇ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಭಾರತದ 2ನೇ ಕ್ರಿಕೆಟಿಗ ಇಶಾನ್ ಕಿಶಾನ್!

32 ರನ್ ಸಿಡಿಸಿ ಅಪಾಯದ ಮುನ್ಸೂಚನೆ ನೀಡಿದ್ದ ಆವಿಶ್ಕಾ ಫರ್ನಾಂಡೋ ಆಟಕ್ಕೆ ಚಹಾಲ್ ಪೂರ್ಣವಿರಾಮ ಹಾಕಿದರು. ಚಹಾಲ್ ಎಲೆತದಲ್ಲಿ ಮನೀಶ್ ಪಾಂಡೆಗೆ ಕ್ಯಾಚ್ ನೀಡಿದ ಆವಿಶ್ಕಾ ನಿರಾಸೆಯೊಂದಿಗೆ ಪೆವಿಲಿಯನ್ ಸೇರಿಕೊಂಡರು.  ಚಹಾಲ್ ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿ ಮಿಂಚಿದರು.

 

ಈ ಪಂದ್ಯದಲ್ಲಿ ಯಚುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಜೊತೆಯಾಗಿ ಕಣಕ್ಕಿಳಿದಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಈ ಜೋಡಿ ಜೊತೆಯಾಗಿ ಕಣಕ್ಕಿಳಿದಿತ್ತು. ಬಳಿಕ ಕುಲ್ದೀಪ್ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇದೀಗ 2 ವರ್ಷಗಳ ಬಳಿಕ ಮತ್ತೆ ಕುಲ್ಚಾ ಜೋಡಿ ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ ಮ್ಯಾಜಿಕ್ ಆರಂಭಿಸಿದೆ.
 

Follow Us:
Download App:
  • android
  • ios