Asianet Suvarna News Asianet Suvarna News

India Tour of South Africa: 44 ದಿನಗಳ ಬಯೋ ಬಬಲ್‌ಗೆ ಸಜ್ಜಾದ ಟೀಂ ಇಂಡಿಯಾ..!

* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭ

* ಡಿಸೆಂಬರ್ 16ರಂದ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಳ್ಳಲಿರುವ ಭಾರತ

* 44 ದಿನಗಳ ಕಾಲ ಬಯೋ ಬಬಲ್‌ನಲ್ಲಿರಲಿದ್ದಾರೆ ಟೀಂ ಇಂಡಿಯಾ ಆಟಗಾರ

Ind vs SA Team India to leave for South Africa on December 16 to spend 44 days in bio bubble kvn
Author
Bengaluru, First Published Dec 10, 2021, 6:22 PM IST

ಮುಂಬೈ(ಡಿ.10): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಭಾರತ ತಂಡದ ಆಟಗಾರರು ಡಿಸೆಂಬರ್ 12ರಂದು ಮುಂಬೈಗೆ ಬಂದಿಳಿಯಲಿದ್ದು, ನಾಲ್ಕು ದಿನಗಳ ಕ್ವಾರಂಟೈನ್ ಮುಗಿಸಿ ಡಿಸೆಂಬರ್ 16ರಂದು ಹರಿಣಗಳ ನಾಡಿಗೆ ಟೀಂ ಇಂಡಿಯಾ (Team India) ವಿಮಾನವನ್ನೇರಲಿದೆ

ಅಲ್ಲಿಂದ ಟೀಂ ಇಂಡಿಯಾ ಟೆಸ್ಟ್‌ ಸರಣಿ ಮುಗಿಯುವವರೆಗೆ ಅಂದರೆ ಜನವರಿ 15ರ ವರೆಗೆ ಭಾರತ ತಂಡವು ಬಯೋ ಬಬಲ್‌ನೊಳಗೆ (bio bubble) ಇರಲಿದೆ. ಇನ್ನು ಏಕದಿನ ಸರಣಿಗೆ ಆಯ್ಕೆಯಾದ ಆಟಗಾರರು ಇನ್ನು ಹೆಚ್ಚುವರಿಯಾಗಿ 8 ದಿನಗಳ ಕಾಲ ಬಯೋ ಬಬಲ್‌ನೊಳಗೆ ಇರಲಿದ್ದಾರೆ. ಅಂದರೆ ಒಟ್ಟಾರೆ 44 ದಿನಗಳ ಕಾಲ ಟೀಂ ಇಂಡಿಯಾ ಆಟಗಾರರು ಬಯೋ ಬಬಲ್‌ನೊಳಗೆ ಇರಲಿದ್ದಾರೆ.

ಬಿಸಿಸಿಐ (BCCI) ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ 18 ಆಟಗಾರರನ್ನೊಳಗೊಂಡ ಭಾರತ ತಂಡವನ್ನು (Indian Cricket Team) ಪ್ರಕಟಿಸಿದೆ. ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯವು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ. ಇನ್ನು ಏಕದಿನ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸದಿದ್ದರೂ ಸಹಾ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಅವರನ್ನು ನೇಮಕ ಮಾಡಿದೆ. 

ದಕ್ಷಿಣ ಆಫ್ರಿಕಾದ ಕೆಲವು ಭಾಗಗಳಲ್ಲಿ ಕೋವಿಡ್ ರೂಪಾಂತರಿ ತಳಿಯಾದ ಒಮಿಕ್ರಾನ್‌ ಭೀತಿ (Omicron Variant Threat) ಎದುರಾಗಿದ್ದು, ಆಟಗಾರರು ಕಡ್ಡಾಯವಾಗಿ ಬಯೋ ಬಬಲ್‌ನೊಳಗೆ ಇರಬೇಕಿದೆ. ಕೋವಿಡ್ ರೂಪಾಂತರಿ ತಳಿ ಭೀತಿಯಿಂದ ದಕ್ಷಿಣ ಆಫ್ರಿಕಾ ಹಾಗೂ ನೆದರ್‌ಲ್ಯಾಂಡ್‌ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ದಿಢೀರ್ ಸ್ಥಗಿತಗೊಳಿಸಲಾಗಿತ್ತು. 

India Tour of South Africa: ಅಜಿಂಕ್ಯ ರಹಾನೆ ಆಯ್ಕೆಯನ್ನು ಸಮರ್ಥಿಸಿಕೊಂಡ ಎಂಸ್‌ಕೆ ಪ್ರಸಾದ್‌

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಎಲ್ಲವೂ ಅಂದುಕೊಂಡಂತೆ ಸಾಗಿದ್ದರೇ ಭಾರತ ತಂಡವು ಡಿಸೆಂಬರ್ 09ರಲ್ಲೇ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿತ್ತು. ಇದೀಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26-30ರವರೆಗೆ ಸೆಂಚುರಿಯನ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಜನವರಿ 3 ರಿಂದ 7ರವರೆಗೆ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಇನ್ನು ಮೂರನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯವು ಜನವರಿ 11 ರಿಂದ 15ರವರೆಗೆ ಕೇಪ್‌ಟೌನ್‌ನಲ್ಲಿ ನಡೆಯಲಿದೆ.

ಭಾರತ ತಂಡವು ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಆದರೆ ಇದೀಗ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ರೆಡ್ ಬಾಲ್ ಸರಣಿಯಲ್ಲಿ ಹರಿಣಗಳ ಭೇಟೆಯಾಡಲು ಎದುರು ನೋಡುತ್ತಿದೆ.

Rohit Sharma Tweet Viral ದಶಕದ ಹಿಂದಿನ ಹಿಟ್‌ ಮ್ಯಾನ್‌ ಶಪಥ ವೈರಲ್..!

ಮೂರು ಪಂದ್ಯಗಳ ಟೆಸ್ಟ್‌ ಸರಣಿ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಜನವರಿ 19  ಹಾಗೂ 21ರಂದು ಪಾರ್ಲ್‌ನಲ್ಲಿ ಮೊದಲೆರಡು ಏಕದಿನ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಜನವರಿ 23ರಂದು ಕೇಪ್‌ ಟೌನ್‌ನಲ್ಲಿ ಕೊನೆಯ ಏಕದಿನ ಪಂದ್ಯ ಜರುಗಲಿದೆ. ಇನ್ನು ನಾಲ್ಕು ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೊನೆಯಲ್ಲಿ ತೀರ್ಮಾನಿಸಲಿದೆ.

Follow Us:
Download App:
  • android
  • ios