ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಪಂದ್ಯ ಮೊದಲೆರೆಡು ಪಂದ್ಯದಲ್ಲಿ ಮುಗ್ಗರಿಸಿದ ಭಾರತ

ವಿಶಾಖಪಟ್ಟಣಂ(ಜೂ.14): ಸೌತ್ ಆಫ್ರಿಕಾ ವಿರುದ್ಧದ ಮೊದಲೆರಡು ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾಗೆ ಇಂದು ಅಗ್ನಿಪರೀಕ್ಷೆ. ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಸೌತ್ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಹಾಗೂ ಸೌತ್ ಆಫ್ರಿಕಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ

ಟೀಂ ಇಂಡಿಯಾ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್(ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಆವೇಶ್ ಖಾನ್

ಸೌತ್ ಆಫ್ರಿಕಾ ಪ್ಲೇಯಿಂಗ್ 11
ತೆಂಬಾ ಬವುಮಾ(ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೇನ್ ಪೆಟ್ರೋರಿಯಸ್, ರಸಿ ವಾಂಡರ್ ಡೆಸನ್, ಹೆನ್ರಿಚ್ ಕಾಲ್ಸೇನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಾಗಿಸೋ ರಬಾಡಾ, ಕೇಶವ್ ಮಹಾರಾಜ್, ತಬ್ರೈಸ್ ಶಮ್ಸಿ, ಅನ್ರಿಚ್ ನೋರ್ಜೆ

ರಿಷಬ್ ಪಂತ್ ನಾಯಕತ್ವದ ಟೀಂ ಇಂಡಿಯಾ ಆರಂಭಿಕ ಎರಡು ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಪಂದ್ಯಗಳ ಸರಣಿಯಲ್ಲಿ ಭಾರತ 0-2 ಹಿನ್ನಡೆಯಲ್ಲಿದೆ. 3ನೇ ಪಂದ್ಯ ಸರಣಿ ವಶಪಡಿಸಿಕೊಳ್ಳಲು ಸೌತ್ ಆಫ್ರಿಕಾ ಸಜ್ಜಾಗಿದ್ದರೆ, ಇತ್ತ ಟೀಂ ಇಂಡಿಯಾ ಸರಣಿ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ಸತತ 12 ಟಿ20 ಪಂದ್ಯಗಳ ಗೆಲುವಿನೊಂದಿಗೆ ಸರಣಿಗೆ ಕಾಲಿಟ್ಟಿದ್ದ ರಿಷಬ್‌ ಪಂತ್‌ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ವಿಶ್ವದಾಖಲೆ ಬರೆಯುವ ಅವಕಾಶ ಕಳೆದುಕೊಂಡಿತ್ತು. ಆ ಪಂದ್ಯದಲ್ಲಿ ಬೌಲರ್‌ಗಳು ಕಳಪೆ ಪ್ರದರ್ಶನ ತೋರಿದ್ದರೆ, 2ನೇ ಪಂದ್ಯ ಬ್ಯಾಟರ್‌ಗಳ ವೈಫಲ್ಯದಿಂದ ಸೋಲುವಂತಾಗಿತ್ತು. ಇದೇ ಮೊದಲ ಬಾರಿ ನಾಯಕತ್ವ ವಹಿಸಿರುವ ಪಂತ್‌ಗೆ ಎರಡು ಸೋಲುಗಳು ಒತ್ತಡಕ್ಕೆ ಸಿಲುಕುವಂತೆ ಮಾಡಿದ್ದು, ಮೂರನೇ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದೆ.

ಆರಂಭಿಕ ಋುತುರಾಜ್‌ ಗಾಯಕ್ವಾಡ್‌ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದು, ಶ್ರೇಯಸ್‌ ಅಯ್ಯರ್‌ ನಿಧಾನ ಆಟ ತಂಡಕ್ಕೆ ಮುಳುವಾಗುತ್ತಿದೆ. ನಾಯಕನಾಗಿ ಒತ್ತಡಕ್ಕೆ ಸಿಲುಕಿದಂತೆ ಆಡುತ್ತಿರುವ ಪಂತ್‌ 2 ಪಂದ್ಯಗಳಲ್ಲಿ 29 ಮತ್ತು 5 ರನ್‌ ಮಾತ್ರ ಗಳಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರೂ, ಎರಡೂ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದಾರೆ. ಇನ್ನು ದಿನೇಶ್‌ ಕಾರ್ತಿಕ್‌ ಐಪಿಎಲ್‌ನಲ್ಲಿ ಪ್ರದರ್ಶಿಸಿದ್ದ ಸ್ಫೋಟಕ ಲಯಕ್ಕೆ ಇನ್ನಷ್ಟೇ ಮರಳಬೇಕಿದೆ. ಅಕ್ಷರ್‌ ಪಟೇಲ್‌ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ಇನ್ನಷ್ಟೇ ಲಯ ಕಂಡುಕೊಳ್ಳಬೇಕಿದೆ.