ಕಿವೀಸ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆತಂಡ ಕೂಡಿಕೊಂಡ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ಕಿವೀಸ್ ತಂಡವನ್ನು ಮುನ್ನಡೆಸಲಿರುವ ಟಾಮ್ ಲೇಥಮ್

ಹೈದರಾಬಾದ್‌(ಜ.18): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳು ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಲು ಎದುರು ನೋಡುತ್ತಿದೆ.

ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಭಾರತ ತಂಡದಿಂದ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದಾರೆ. ಲಂಕಾ ಎದುರಿನ ಸರಣಿಯ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕೆ ಎಲ್ ರಾಹುಲ್, ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್, ಈ ಸರಣಿಗೆ ಅಲಭ್ಯರಾಗಿದ್ದು, ಇವರ ಬದಲಿಗೆ ಇಶಾನ್ ಕಿಶನ್, ಶಾರ್ದೂಲ್ ಠಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ತಂಡ ಕೂಡಿಕೊಂಡಿದ್ದಾರೆ.

ಇಂದಿನಿಂದ ಭಾರತಕ್ಕೆ ಕಿವೀಸ್‌ ಚಾಲೆಂಜ್‌; ಶುಭಾರಂಭದ ವಿಶ್ವಾಸದಲ್ಲಿ ಟೀಂ ಇಂಡಿಯಾ

ಇನ್ನು ಕೇನ್ ವಿಲಿಯಮ್ಸನ್ ಹಾಗೂ ಟಿಮ್ ಸೌಥಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲೇಥಮ್‌ ನಾಯಕರಾಗಿ ಕಿವೀಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನ ನೆಲದಲ್ಲಿ ಏಕದಿನ ಸರಣಿ ಗೆದ್ದು ಬೀಗಿದ್ದ ನ್ಯೂಜಿಲೆಂಡ್ ತಂಡವು, ಇದೀಗ ಭಾರತದ ನೆಲದಲ್ಲೂ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಪ್ರವಾಸ ಕೈಗೊಂಡ ತಂಡಗಳ ಪೈಕಿ ಹೆಚ್ಚು ಸ್ಪರ್ಧಾತ್ಮಕ ಪಂದ್ಯಗಳಿಗೆ ಸಾಕ್ಷಿಯಾದ ತಂಡಗಳಲ್ಲಿ ನ್ಯೂಜಿಲೆಂಡ್‌ ಸಹ ಒಂದು. 2016, 2017ರ ಸರಣಿಗಳ ಫಲಿತಾಂಶ ಕೊನೆ ಪಂದ್ಯಗಳಲ್ಲಿ ನಿರ್ಧಾರವಾಗಿತ್ತು. ಕಿವೀಸ್‌, ಪಾಕಿಸ್ತಾನದಲ್ಲಿ 2-1ರ ಸರಣಿ ಜಯದೊಂದಿಗೆ ಭಾರತಕ್ಕೆ ಆಗಮಿಸಿದೆ ಎನ್ನುವುದನ್ನೂ ಮರೆಯುವ ಹಾಗಿಲ್ಲ.

Scroll to load tweet…

ತಾರಾ ಆಟಗಾರರ ಗೈರು: ಭಾರತ ಎದುರಿನ ಸರಣಿಯಿಂದ ನ್ಯೂಜಿಲೆಂಡ್ ತಂಡದ ತಾರಾ ಆಟಗಾರರಾದ ಕೇನ್ ವಿಲಿಯಮ್ಸನ್‌, ಟ್ರೆಂಟ್ ಬೌಲ್ಟ್‌, ಇಶ್ ಸೋಧಿ ಹಾಗೂ ಟಿಮ್‌ ಸೌಥಿ ಅವರ ಬಲವಿಲ್ಲದೇ ಕಣಕ್ಕಿಳಿದಿದೆ. ಹೀಗಾಗಿ ಈ ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡವು ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ.

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಇಶಾನ್ ಕಿಶನ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌.

ನ್ಯೂಜಿಲೆಂಡ್‌: ಫಿನ್ ಆ್ಯಲೆನ್‌, ಡೆವೊನ್ ಕಾನ್‌ವೇ, ಹೆನ್ರಿ ನಿಕೋಲ್ಸ್‌, ಡೇರಲ್ ಮಿಚೆಲ್‌, ಟಾಮ್ ಲೇಥಮ್‌(ನಾಯಕ), ಗ್ಲೆನ್ ಫಿಲಿಫ್ಸ್‌, ಮಿಚೆಲ್ ಬ್ರೇಸ್‌ವೆಲ್‌, ಮಿಚೆಲ್‌ ಸ್ಯಾಂಟ್ನರ್‌, ಹೆನ್ರಿ ಶಿಫ್ಲೆ, ಲಾಕಿ ಫಗ್ರ್ಯೂಸನ್‌, ಬ್ಲೈರ್ ಟಿಕ್ನರ್

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಏಕದಿನ ಸರಣಿ ವೇಳಾಪಟ್ಟಿ

ಮೊದಲ ಏಕದಿನ: ಜನವರಿ 18 - ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಮೈದಾನ, ಹೈದರಾಬಾದ್
ಎರಡನೇ ಏಕದಿನ: ಜನವರಿ 21 - ನಯಾ ರಾಯ್ಪುರ ಅಂತಾರಾಷ್ಟ್ರೀಯ ಮೈದಾನ, ರಾಯ್ಪುರ
ಮೂರನೇ ಏಕದಿನ: ಜನವರಿ 24 - ಹೋಳ್ಕರ್ ಸ್ಟೇಡಿಯಂ, ಇಂಡೋರ್