Asianet Suvarna News Asianet Suvarna News

Ind vs NZ Kanpur Test: ಕಿವೀಸ್‌ನ ಎರಡು ವಿಕೆಟ್ ಪತನ..!

* ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್

* ಭಾರತಕ್ಕೆ ತಿರುಗೇಟು ನೀಡುವತ್ತ ಕಿವೀಸ್ ದಿಟ್ಟ ಹೆಜ್ಜೆ

* ಮೂರನೇ ದಿನದಾಟದಲ್ಲಿ 2 ವಿಕೆಟ್ ಕಬಳಿಸಿದ ಭಾರತ

Ind vs NZ Kanpur Test Umesh Yadav Strikes New Zealand Lose Kane Williamson At Stroke Of Lunch on Day 3 kvn
Author
Bengaluru, First Published Nov 27, 2021, 11:54 AM IST

ಕಾನ್ಪುರ(ನ.27): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಲಂಚ್‌ ಬ್ರೇಕ್‌ ವೇಳೆಗೆ ಕಿವೀಸ್‌ ತಂಡದ ಎರಡು ವಿಕೆಟ್ ಕಬಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದರೊಂದಿಗೆ ನ್ಯೂಜಿಲೆಂಡ್ ತಂಡವು 2 ವಿಕೆಟ್ ಕಳೆದುಕೊಂಡು 197 ರನ್‌ ಬಾರಿಸಿದ್ದು, ಇನ್ನೂ 148 ರನ್‌ಗಳ ಹಿನ್ನೆಡೆಯಲ್ಲಿದೆ.

ಹೌದು, ಇಲ್ಲಿನ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ (Green Park Stadium) ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡುವತ್ತ ನ್ಯೂಜಿಲೆಂಡ್ ತಂಡವು ದಿಟ್ಟ ಹೆಜ್ಜೆಯಿಟ್ಟಿದೆ. ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 129 ರನ್‌ ಗಳಿಸಿದ್ದ ನ್ಯೂಜಿಲೆಂಡ್ ತಂಡವು ಮೂರನೇ ದಿನದಾಟದಲ್ಲಿ ತನ್ನ ಖಾತೆಗೆ 22 ರನ್‌ ಜೋಡಿಸಿತು. ಮೊದಲ ವಿಕೆಟ್‌ಗೆ ವಿಲ್ ಯಂಗ್ (Will Young) ಹಾಗೂ ಟಾಮ್ ಲೇಥಮ್ (Tom Latham) ಜೋಡಿ 151 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಬೇರ್ಪಡಿಸಲು ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ (Ravichandran Ashwin) ಕೊನೆಗೂ ಯಶಸ್ವಿಯಾದರು. ಅಶ್ವಿನ್‌ ಬೌಲಿಂಗ್‌ನಲ್ಲಿ ವಿಲ್‌ ಯಂಗ್ ಬ್ಯಾಟ್ ಸವರಿದ ಚೆಂಡನ್ನು ಚುರುಕಾಗಿ ಕ್ಯಾಚ್ ಪಡೆಯುವಲ್ಲಿ ಕೆ.ಎಲ್‌ ಭರತ್ ಯಶಸ್ವಿಯಾದರು. ವೃದ್ದಿಮಾನ ಸಾಹ ಗಾಯದ ಸಮಸ್ಯೆ ಎದುರಿಸುತ್ತಿದ್ದರಿಂದ ಕೆ.ಎಸ್. ಭರತ್ (KS Bharat) ವಿಕೆಟ್‌ ಕೀಪರ್ ಆಗಿ ಮೂರನೇ ದಿನದಾಟದಲ್ಲಿ ಕಣಕ್ಕಿಳಿದಿದ್ದರು. ವಿಲ್‌ ಯಂಗ್ 214 ಎಸೆತಗಳನ್ನು ಎದುರಿಸಿ 15 ಬೌಂಡರಿ ಸಹಿತ 89 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ನೆಲಕಚ್ಚಿ ಆಡುತ್ತಿರುವ ಟಾಮ್ ಲೇಥಮ್‌: ಕಿವೀಸ್ ತಂಡದ ಮತ್ತೋರ್ವ ಆರಂಭಿಕ ಬ್ಯಾಟರ್‌ ಟಾಮ್ ಲೇಥಮ್ ಅತ್ಯಂತ ಎಚ್ಚರಿಕೆಯಿಂದ ಭಾರತೀಯ ಬೌಲರ್‌ಗಳನ್ನು ಎದುರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಒಮ್ಮೆ ಅಶ್ವಿನ್ ಎಲ್‌ಬಿ ಮಾಡಿದ್ದರೂ ಸಹಾ ಅಂಪೈರ್ ಔಟ್ ನೀಡಲಿಲ್ಲ. ಇದರ ಜೀವದಾನ ಪಡೆದಿರುವ ಲೇಥಮ್ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಸದ್ಯ ಟಾಮ್ ಲೇಥಮ್‌ 239 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 82 ರನ್‌ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

Ind vs NZ Kanpur Test: ಭಾರತಕ್ಕೆ ತಿರುಗೇಟು ನೀಡುವತ್ತ ಕಿವೀಸ್ ದಿಟ್ಟ ಹೆಜ್ಜೆ..!

ವಿಲಿಯಮ್ಸನ್ ಬಲಿಪಡೆದ ಉಮೇಶ್ ಯಾದವ್‌: ಮೂರನೇ ದಿನದಾಟದ ಮೊದಲ ಸೆಷನ್‌ನ ಕೊನೆಯಲ್ಲಿ ವೇಗಿ ಉಮೇಶ್ ಯಾದವ್ (Umesh Yadav) ಭಾರತಕ್ಕೆ ಮತ್ತೊಂದು ಯಶಸ್ಸು ದಕ್ಕಿಸಿಕೊಡುವಲ್ಲಿ ಯಶಸ್ವಿಯಾದರು. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ (Kane Williamson) 64 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 18 ರನ್ ಬಾರಿಸಿ ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. 

ಇನ್ನೂ 148 ರನ್‌ಗಳ ಹಿನ್ನೆಡೆಯಲ್ಲಿದೆ ನ್ಯೂಜಿಲೆಂಡ್: ಕಾನ್ಪುರ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ(Team India), ಶ್ರೇಯಸ್ ಅಯ್ಯರ್ (Shreyas Iyer) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 345 ರನ್‌ ಬಾರಿಸಿ ಸರ್ವಪತನ ಕಂಡಿದೆ. ಇದೀಗ ಕಿವೀಸ್‌ ತಂಡವು ಆತಿಥೇಯರಿಗೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಲೇಥಮ್ ಹಾಗೂ ರಾಸ್ ಟೇಲರ್ ಅವರನ್ನು ಆದಷ್ಟು ಬೇಗ ವಿಕೆಟ್‌ ಕಬಳಿಸಿದರೇ ನ್ಯೂಜಿಲೆಂಡ್ ತಂಡದ ಮೇಲೆ ಭಾರತ ತಂಡವು ಒತ್ತಡ ಹೇರಬಹುದಾಗಿದೆ.

ಸಂಕ್ಷಿಪ್ತ ಸ್ಕೋರ್

ಭಾರತ: 345/10

ಶ್ರೇಯಸ್ ಅಯ್ಯರ್: 105

ಟಿಮ್ ಸೌಥಿ: 69/5

ನ್ಯೂಜಿಲೆಂಡ್: 197/2

ವಿಲ್ ಯಂಗ್: 89

ಉಮೇಶ್ ಯಾದವ್: 30/1

(* ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ)

Follow Us:
Download App:
  • android
  • ios