ಚೆನ್ನೈ(ಫೆ.15): ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನ ಭಾರತದ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ಚಹಾ ವಿರಾಮದ ವೇಳೆ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 221 ರನ್ ಸಿಡಿಸಿದೆ. ಈ ಮೂಲಕ ಟೀಂ ಇಂಡಿಯಾ 416 ರನ್ ಮುನ್ನಡೆ ಪಡೆದುಕೊಂಡಿದೆ.

ಚೆನ್ನೈ ಟೆಸ್ಟ್: ಕೈ ಜಾರಿದ ಬ್ಯಾಟ್‌, ಪೂಜಾರ ರನೌಟ್‌; ವಿಡಿಯೋ ವೈರಲ್.

ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿದ್ದ ಟೀಂ ಇಂಡಿಯಾ 2ನೇ ದಿನವೇ 2ನೇ ಇನ್ನಿಂಗ್ಸ್ ಆರಂಭಿಸಿತು. 3ನೇ ದಿನ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ‌್‌ಗಳನ್ನು ಕಳೆದುಕೊಂಡಿತು. ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜರ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ನಾಯಕ ವಿರಾಟ್ ಕೊಹ್ಲಿ 68 ರನ್ ಸಿಡಿಸಿ ಔಟಾದರು. 

ಇನ್ನು ರಿಷಬ್ ಪಂತ್, ಅಜಿಂಕ್ಯ ರಹಾನೆ, ಅಕ್ಸರ್ ಪಟೇಲ್ ಅಬ್ಬರಿಸಲಿಲ್ಲ. ಆದರೆ ಆರ್ ಅಶ್ವಿನ್ ದಿಟ್ಟ ಹೋರಾಟದಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಆರ್ ಅಶ್ವಿನ್ ಅಜೇಯ 68 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊಯಿನ್ ಆಲಿ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸ್ಪಿನ್ ಅಸ್ತ್ರ ಹೆಚ್ಚು ಪರಿಣಾಮಕಾರಿಯಾಗಿದೆ. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ರನ್ ಚೇಸ್ ಅತ್ಯಂತ ಕಠಿಣವಾಗಲಿದೆ.