ಅಹಮ್ಮದಾಬಾದ್(ಫೆ.24): ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಇದೀಗ ಅಹಮ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣ ಪಾತ್ರವಾಗಿದೆ. ನವೀಕೃತ ಗೊಂಡಿರುವ ಈ ಮೊಟೆರಾ ಕ್ರೀಡಾಂಗಣದಲ್ಲಿ ಇದೀಗ ಮೊದಲ ಟಾಸ್ ಗೆದ್ದ ಹೆಗ್ಗಳಿಕೆ ಇಂಗ್ಲೆಂಡ್ ಪಾಲಾಗಿದೆ. ಭಾರತದ ವಿರುದ್ಧದ 3ನೇ ಹಾಗೂ ಮಹತ್ವದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಮೊಟೇರಾ, ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂನ ಒಂದು ಝಲಕ್‌..!.

ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇದಾಗಿದ್ದು, ಅಗ್ನಿಪರೀಕ್ಷೆಗೆ ಉಭಯ ತಂಡಗಳು ಸಜ್ಜಾಗಿದೆ. ಆರಂಭಿಕ 2 ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಗೆಲುವು ಸಾಧಿಸಿದೆ. ಹೀಗಾಗಿ ಮೊಟೆರಾ ಕ್ರೀಡಾಂಗಣದಲ್ಲಿ ಅದೇ ಇತಿಹಾಸ ಮರುಕಳಿಸುತ್ತಾ ಅನ್ನೋ ಕುುತೂಹ ಮನೆ ಮಾಡಿದೆ.

ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ಸಿರಾಜ್ ಬದಲು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಆಗಮಿಸಿದ್ದಾರೆ. ಕುಲ್ದೀಪ್ ಯಾದವ್ ಬದಲು ವಾಶಿಂಗ್ಟನ್ ಸುಂದರ್ ತಂಡ ಸೇರಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾಣ ಮಾಡಲಾಗಿದೆ. ಆ್ಯಂಡರ್ಸನ್, ಆರ್ಚರ್, ಬೈರ್‌ಸ್ಟೋ ಹಾಗೂ ಕ್ರಾವ್ಲಿ ತಂಡ ಸೇರಿಕೊಂಡಿದ್ದಾರೆ.