ಪುಣೆ(ಮಾ.25): ಇಂಗ್ಲೆಂಡ್ ತಂಡಕ್ಕೆ ಏಕದಿನ ಸರಣಿಯಲ್ಲಿ ಆರಂಭದಲ್ಲೇ ಹಿನ್ನಡೆಯಾಗಿದೆ. ಮೊದಲ ಪಂದ್ಯ ಸೋತಿರುವ ಇಂಗ್ಲೆಂಡ್ ತಂಡಕ್ಕೆ ಇದೀಗ ಇಂಜುರಿ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕೈಬೆರಳಿನ ಗಾಯದಿಂದ ಬಳಲುತ್ತಿರುವ ನಾಯಕ ಇಯಾನ್ ಮಾರ್ಗನ್ ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.

ಕೈಬೆರಳಿನ ಗಾಯ ಹೆಚ್ಚಾಗಿರುವ ಕಾರಣ ಮಾರ್ಗನ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಮುಂದಿನ 2 ಏಕದಿನ ಪಂದ್ಯದಲ್ಲಿ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಮುನ್ನೆಡಸಲಿದ್ದಾರೆ. ಮಾರ್ಗನ್ ತಂಡದಿಂದ ಹೊರಬಿದ್ದಿರುವ ಕಾರಣ ಲಿಯಾಮ್ ಲಿವಿಂಗ್‌ಸ್ಟೋನ್ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ.

2ನೇ ಏಕದಿನ ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ ವೇಳೆ ಇಯಾನ್ ಮಾರ್ಗನ್ ಫಿಟ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇದೇ ವೇಳೆ ಮಾರ್ಗನ್ ಹೆಬ್ಬೆರಳಿನ ಗಾಯ ಕೂಡ ಉಲ್ಬಣಗೊಂಡಿದೆ.