Asianet Suvarna News Asianet Suvarna News

Ind vs Ban ಇಂದು ಭಾರತ-ಬಾಂಗ್ಲಾದೇಶ ಮೊದಲ ಏಕದಿನ ಕದನ, ಶುಭಾರಂಭದ ನಿರೀಕ್ಷೆಯಲ್ಲಿ ರೋಹಿತ್ ಪಡೆ

ಭಾರತ-ಬಾಂಗ್ಲಾದೇಶ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ
ಢಾಕಾದಲ್ಲಿ ನಡೆಯಲಿದೆ ಮೊದಲ ಏಕದಿನ ಪಂದ್ಯ
ಸರಣಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ಟೀಂ ಇಂಡಿಯಾ

Ind vs Ban Rohit Sharma led Team India take on Bangladesh in Dhaka kvn
Author
First Published Dec 4, 2022, 10:48 AM IST

ಮೀರ್‌ಪುರ್‌(ಡಿ.04): ನ್ಯೂಜಿಲೆಂಡ್‌ನಲ್ಲಿ ಮಳೆ ಬಾಧಿತ ಸರಣಿಯನ್ನು ಸೋತ ಭಾರತ ತಂಡಕ್ಕೆ ಈಗ ಬಾಂಗ್ಲಾದೇಶದ ಸವಾಲು ಎದುರಾಗಲಿದೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ನಡೆಯಲಿದ್ದು, ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌ ತಂಡಕ್ಕೆ ವಾಪಸಾಗಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.

7 ವರ್ಷಗಳ ಬಳಿಕ ಭಾರತ ತಂಡ ಬಾಂಗ್ಲಾದೇಶದಲ್ಲಿ ಏಕದಿನ ಸರಣಿಯನ್ನಾಡಲಿದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿರುವ ಟೀಂ ಇಂಡಿಯಾಗೆ ಪ್ರತಿ ಕ್ರಮಾಂಕ, ಜವಾಬ್ದಾರಿಗೂ ಸೂಕ್ತ ಆಟಗಾರರನ್ನು ಗುರುತಿಸಲು ಈ ಸರಣಿ ನೆರವಾಗಲಿದೆ. ವೇಗಿ ಮೊಹಮದ್‌ ಶಮಿ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದು ಅವರ ಬದಲಿಗೆ ಉಮ್ರಾನ್‌ ಮಲಿಕ್‌ ತಂಡ ಸೇರಿದ್ದಾರೆ. ಆದರೆ ಆಡುವ ಹನ್ನೊಂದರಲ್ಲಿ ಉಮ್ರಾನ್‌ಗೆ ಸ್ಥಾನ ಸಿಗುವ ಬಗ್ಗೆ ಅನುಮಾನವಿದೆ. 2016ರ ಬಳಿಕ ತವರಿನಲ್ಲಿ ಏಕದಿನ ಸರಣಿ ಸೋಲದ ಬಾಂಗ್ಲಾ ವಿರುದ್ಧ ಭಾರತಕ್ಕೆ ಕಠಿಣ ಸವಾಲು ಎದುರಾಗಬಹುದು.

ಢಾಕಾ ಮೈದಾನದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, 13 ಇನಿಂಗ್ಸ್‌ಗಳನ್ನಾಡಿ 4 ಶತಕ ಹಾಗೂ ಮೂರು ಅರ್ಧಶತಕ ಸಹಿತ 786 ರನ್‌ ಬಾರಿಸಿ ಮಿಂಚಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಜರುಗಿದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 

Ind vs Ban: ಭಾರತ-ಬಾಂಗ್ಲಾದೇಶ ಸರಣಿ ಎಲ್ಲಿ? ಯಾವಾಗ? ನೇರ ಪ್ರಸಾರವೆಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಇನ್ನು ತೊಡೆಸಂದು ನೋವಿಗೆ ಒಳಗಾಗಿ ಭಾರತ ಎದುರಿನ ಏಕದಿನ ಸರಣಿಯಿಂದ ನಾಯಕ ತಮೀಮ್ ಇಕ್ಬಾಲ್ ಹೊರಬಿದ್ದಿರುವುದರಿಂದ, ಲಿಟನ್ ದಾಸ್ ನಾಯಕನಾಗಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿಗಳಾದ ಎಬೊದತ್ ಹೊಸೈನ್ ಹಾಗೂ ಮುಷ್ತಾಫಿಜುರ್ ರೆಹಮಾನ್ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಶಕೀಬ್ ಅಲ್ ಹಸನ್, ಮುಷ್ಫಿಕುರ್ ರೆಹಮಾನ್, ಲಿಟನ್ ದಾಸ್, ಅನ್ಮೊಲ್ ಹಕ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ರಿಷಭ್ ಪಂತ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೋ, ಲಿಟನ್ ದಾಸ್(ನಾಯಕ), ಅನಮುಲ್ ಹಕ್, ಶಕೀಬ್ ಅಲ್ ಹಸನ್, ಮುಷ್ತಾಫಿಜುರ್ ರೆಹಮಾನ್(ವಿಕೆಟ್ ಕೀಪರ್), ಮೊಹಮದುಲ್ಲಾ, ಅಫಿಫ್ ಹೊಸೈನ್, ಮೆಹದಿ ಹಸನ್, ಹಸನ್ ಮಹಮೂದ್, ಎಬೊದತ್ ಹೊಸೈನ್, ಮುಷ್ತಾಫಿಜುರ್ ರೆಹಮಾನ್.

ಪಂದ್ಯ: ಬೆಳಗ್ಗೆ 11.30ಕ್ಕೆ
ಪ್ರಸಾರ: ಸೋನಿ ಸ್ಪೋರ್ಟ್ಸ್

Follow Us:
Download App:
  • android
  • ios