ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ಮೇಲುಗೈಶತಕದ ಹೊಸ್ತಿಲಲ್ಲಿ ಮತ್ತೊಮ್ಮೆ ಎಡವಿದ ರಿಷಭ್ ಪಂತ್ಮೊದಲ ಇನಿಂಗ್ಸ್‌ನಲ್ಲಿ 87 ರನ್‌ಗಳ ಮುನ್ನಡೆ ಪಡೆದ ಟೀಂ ಇಂಡಿಯಾ

ಮೀರ್‌ಪುರ(ಡಿ.24): ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಹೋರಾಟದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಆರಂಭಿಕ ಕುಸಿತದ ಹೊರತಾಗಿಯೂ ಭಾರತ 314 ರನ್‌ ಕಲೆಹಾಕಲು ಯಶಸ್ವಿಯಾಯಿತು. 87 ರನ್‌ ಮುನ್ನಡೆ ಪಡೆದ ಭಾರತ, 2ನೇ ಇನ್ನಿಂಗ್ಸಲ್ಲಿ ಬಾಂಗ್ಲಾವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವ ನಿರೀಕ್ಷೆಯಲ್ಲಿದೆ. 2ನೇ ಇನ್ನಿಂಗ್‌್ಸ ಆರಂಭಿಸಿರುವ ಬಾಂಗ್ಲಾ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 7 ರನ್‌ ಗಳಿಸಿದೆ.

ಬಾಂಗ್ಲಾದ 227 ರನ್‌ಗೆ ಉತ್ತರವಾಗಿ ಮೊದಲ ದಿನ ವಿಕೆಟ್‌ ನಷ್ಟವಿಲ್ಲದೆ 19 ರನ್‌ ಗಳಿಸಿದ್ದ ಭಾರತವನ್ನು ಶುಕ್ರವಾರ ಬಾಂಗ್ಲಾ ಬೌಲರ್‌ಗಳು ಕಾಡಿದರು. ನಾಯಕ ರಾಹುಲ್‌(10), ಗಿಲ್‌(20), ಕೊಹ್ಲಿ(24), ಪೂಜಾರಾ(24) ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಭೋಜನ ವಿರಾಮದ ವೇಳೆಗೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಪಂತ್‌-ಶ್ರೇಯಸ್‌ 5ನೇ ವಿಕೆಟ್‌ಗೆ 159 ರನ್‌ ಜೊತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. 80+ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಈ ಇಬ್ಬರೂ ಶತಕದ ಅಂಚಿನಲ್ಲಿ ಎಡವಿದರು. ಪಂತ್‌ 105 ಎಸೆತಗಳಲ್ಲಿ 93 ರನ್‌ ಗಳಿಸಿ ಔಟಾದರೆ, ಶ್ರೇಯಸ್‌ 105 ಎಸೆತದಲ್ಲಿ 87 ರನ್‌ ಗಳಿಸಿದರು. ಇವರ ನಿರ್ಗಮನದ ಬಳಿಕ ಭಾರತ 43 ರನ್‌ ಗಳಿಸಿತು.

Scroll to load tweet…

ರಿಷಭ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್, ಅಯ್ಯರ್ ಆಕರ್ಷಕ ಫಿಫ್ಟಿ, ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್‌..!

ಬಾಂಗ್ಲಾದೇಶ ಪರ ಮಾರಕ ದಾಳಿ ನಡೆಸಿದ ಸ್ಪಿನ್ನರ್‌ಗಳಾದ ತೈಜುಲ್ ಇಸ್ಲಾಂ ಹಾಗೂ ನಾಯಕ ಶಕೀಬ್ ಅಲ್ ಹಸನ್ ತಲಾ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಮತ್ತೋರ್ವ ಸ್ಪಿನ್ನರ್ ಮೆಹದಿ ಹಸನ್ ಮಿರಜ್ ಒಂದು ವಿಕೆಟ್ ತನ್ನ ಖಾತೆಗೆ ಸೇರ್ಪಡೆ ಮಾಡಿಕೊಂಡರೇ, ಮತ್ತೋರ್ವ ವೇಗಿ ಟಸ್ಕಿನ್ ಅಹಮದ್ ಒಂದು ವಿಕೆಟ್ ಪಡೆದರು.

ಸ್ಕೋರ್‌: ಬಾಂಗ್ಲಾ 227/10 ಮತ್ತು 7/0, 
ಭಾರತ 314/10 (ಪಂತ್‌ 93, ರಿಷಭ್‌ 87, ತೈಜುಲ್‌ 4-74, ಶಕೀಬ್‌ 4-79)

ನರ್ವಸ್‌ 90: 6ನೇ ಬಾರಿ 90ರಲ್ಲಿ ಔಟಾದ ಪಂತ್‌!

33ನೇ ಟೆಸ್ಟ್‌ ಪಂದ್ಯವಾಡುತ್ತಿರುವ ರಿಷಭ್‌ ಪಂತ್‌ 6 ಬಾರಿ 90ರ ಆಸುಪಾಸಿನಲ್ಲಿ ಔಟಾಗಿ ಶತಕ ವಂಚಿತರಾದರು. ಅವರು ಈ ಮೊದಲು ವೆಸ್ಟ್‌ಇಂಡೀಸ್‌(2 ಬಾರಿ), ಆಸ್ಪ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ ವಿರುದ್ಧ ನರ್ವಸ್‌ 90ಗೆ ಬಲಿಯಾಗಿದ್ದರು. ಇದರ ಹೊರತಾಗಿಯೂ ಪಂತ್‌ ಟೆಸ್ಟ್‌ನಲ್ಲಿ 5 ಶತಕ ಸಿಡಿಸಿದ್ದಾರೆ.