ಐಪಿಎಲ್‌ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ರನ್‌ ಎನ್ನುವ ದಾಖಲೆ ಬರೆದ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಗೆಲುವು ದಾಖಲಿಸಿದೆ. 

ಹೈದರಾಬಾದ್‌ (ಮಾ.27): ಬರೋಬ್ಬರಿ 523 ರನ್‌ಗಳು ದಾಖಲಾದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 31 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿದೆ. ಐಪಿಎಲ್‌ ಇತಿಹಾಸದಲ್ಲಿಯೇ ತಂಡವೊಂದು ಬಾರಿಸಿದ ಗರಿಷ್ಠ ಮೊತ್ತ ಎನ್ನುವ ದಾಖಲೆ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗೆ 246 ರನ್‌ಗಳಿಗೆ ನಿಯಂತ್ರಿಸುವ ಮೂಲಕ ತನ್ನ ಮೊದಲ ಗೆಲುವು ಕಂಡಿತು.ಇಡೀ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ಗಳು ದಾಖಲಾದವು. ಇದು ಕೂಡ ವಿಶ್ವದಾಖಲೆ ಎನಿಸಿದೆ. ಒಂದೇ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್‌ನ ದಾಖಲೆ ಇದಾಗಿದೆ. ಮುಂಬೈ ಇಂಡಿಯನ್ಸ್‌ ತಂಡ 20 ಸಿಕ್ಸರ್‌ಗಳನ್ನು ಸಿಡಿಸಿದರೆ, ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 18 ಸಿಕ್ಸರ್‌ಗಳನ್ನು ಸಿಡಿಸಿತು. ಮುಂಬೈ ಇಂಡಿಯನ್ಸ್ ಪರ ಬ್ಯಾಟಿಂಗ್‌ನಲ್ಲಿ ತಿಲಕ್‌ ವರ್ಮ, ನಮನ್‌ ಧಿರ್‌, ಟಿಮ್‌ ಡೇವಿಡ್‌ ಸ್ಫೋಟಕ ಆಟವಾಡಿ ಗಮನಸೆಳೆದರು. ಮುಂಬೈ ಪರವಾಗಿ ಎಲ್ಲಾ ಬ್ಯಾಟ್ಸ್‌ಮನ್‌ಗಳು 200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್‌ ನಡೆಸಿದರೆ, ನಾಯಕ ಹಾರ್ದಿಕ್‌ ಪಾಂಡ್ಯ ಮಾತ್ರ 150ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ್ದು ಕುತೂಹಲಕ್ಕೆ ಕಾರಣವಾಯಿತು.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌, ಐಪಿಎಲ್‌ ದಾಖಲೆಯ 277 ರನ್‌ಗಳನ್ನು ಪೇರಿಸಿತ್ತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್‌ ಕೂಡ ತೀವ್ರ ಹೋರಾಟ ನೀಡುವ ಮೂಲಕ 5 ವಿಕೆಟ್‌ಗೆ 246 ರನ್‌ ಬಾರಿಸಿ ಕೇವಲ 31 ರನ್‌ಗಳಿಂದ ಸೋಲು ಕಂಡಿತು. ಹಾರ್ದಿಕ್‌ ಪಾಂಡ್ಯ 20 ಎಸೆತಗಳ್ಲಿ 24 ರನ್‌ ಬಾರಿಸಿದ್ದೇ ಕೊನೆಗೆ ಮುಂಬೈ ಸೋಲಿನಲ್ಲಿ ಬಹಳ ಪ್ರಮುಖವಾಗಿ ಕಂಡಿತು.

ಮುಂಬೈ ಇಂಡಿಯನ್ಸ್‌ ಬಾರಿಸಿದ 5 ವಿಕೆಟ್‌ಗೆ 246 ರನ್‌, ಐಪಿಎಲ್‌ನಲ್ಲಿ ತಂಡವೊಂದರ 2ನೇ ಇನ್ನಿಂಗ್ಸ್‌ನ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ 2020ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಪಂಜಾಬ್‌ ವಿರುದ್ಧ 6 ವಿಕೆಟ್‌ಗೆ 226 ರನ್‌ ಚೇಸ್‌ ಮಾಡಿ ಗೆಲುವು ಕಂಡಿತ್ತು. ಇಂದು ಮುಂಬೈ ತಂಡದ ಎಲ್ಲಾ 6 ಬ್ಯಾಟ್ಸ್‌ಮನ್‌ಗಳು 20ಕ್ಕಿಂತ ಅಧಿಕ ಮೊತ್ತ ಬಾರಿಸಿದರು. ಇದು ಐಪಿಎಲ್‌ ತಂಡವೊಂದರಲ್ಲಿಮೊದಲ 6 ಬ್ಯಾಟ್ಸ್‌ಮನ್‌ಗಳು 20ಕ್ಕಿಂತ ಅಧಿಕ ರನ್ ಬಾರಿಸಿದ್ದು ಇದೇ ಮೊದಲ ಬಾರಿಯಾಗಿದೆ.

Breaking: ಆರ್‌ಸಿಬಿಯ 11 ವರ್ಷದ ಹಿಂದಿನ ಐಪಿಎಲ್‌ ದಾಖಲೆ ಮುರಿದ ಸನ್‌ರೈಸರ್ಸ್, ಮುಂಬೈ ವಿರುದ್ಧ 3 ವಿಕೆಟ್‌ಗೆ 277 ರನ್‌!

ಚೇಸಿಂಗ್‌ ಮಾಡಿದ ಮುಂಬೈ ತಂಡ ಮೊದಲ 3 ಓವರ್‌ಗಳ ಅಂತ್ಯಕ್ಕೆ 50 ರನ್‌ ಸಿಡಿಸಿದರೆ, 4-6 ಓವರ್‌ಗಳ ನಡುವೆ 2 ವಿಕೆಟ್‌ಗೆ 26 ರನ್‌ ಪೇರಿಸಿತು. ಇನ್ನು 7-12 ಓವರ್‌ಗಳ ನಡುವೆ 1 ವಿಕೆಟ್‌ಗೆ 89 ರನ್‌ ಸಿಡಿಸಿದರೆ, 13-16 ಓವರ್‌ ನಡುವೆ 1 ವಿಕೆಟ್‌ಗೆ 25 ರನ್ ಪೇರಿಸಿತು.ಕೊನೆಗೆ 17-20 ಓವರ್‌ ನಡುವೆ 1 ವಿಕೆಟ್‌ಗೆ 56 ರನ್‌ ಸಿಡಿಸಿತು.

ಆರಂಭದಲ್ಲೇ ಧೋನಿಗೆ ಗಾಳ ಹಾಕಿದ CSK ಮಾಲೀಕ ಎನ್ ಶ್ರೀನಿವಾಸನ್ ಯಾರು..? ಅವರ ನೆಟ್ ವರ್ತ್ ಎಷ್ಟು ಗೊತ್ತಾ?

ಇಂದಿನ ಪಂದ್ಯದಲ್ಲಿ ಒಟ್ಟು 523 ರನ್‌ ಸಿಡಿಯಿತು. ಇದು ವಿಶ್ವ ದಾಖಲೆಯಾಗಿದೆ. ಇದಕ್ಕೂ ಮುನ್ನ 2023ರಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ 517 ರನ್‌ ಸಿಡಿದಿದ್ದು ವಿಶ್ವದಾಖಲೆ ಎನಿಸಿತ್ತು. ಇನ್ನು ಐಪಿಎಲ್‌ನಲ್ಲಿ 2010ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವೆ 469 ರನ್‌ ಸಿಡಿದಿದ್ದು ಹಿಂದಿನ ದಾಖಲೆಯಾಗಿತ್ತು.