* ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ* ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲು ಸಜ್ಜಾದ ಮಿಥಾಲಿ ರಾಜ್ ಪಡೆ* 2009, 2017ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿರುವ ಭಾರತ
ಮೌಂಟ್ ಮಾಂಗನುಯಿ(ಮಾ.05): 12ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ಭಾರತ, ಭಾನುವಾರ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಕಳೆದ ಬಾರಿ ರನ್ನರ್-ಅಪ್ ಭಾರತ ಶುಭಾರಂಭದ ನಿರೀಕ್ಷೆಯಲ್ಲಿದ್ದು, ಪಾಕ್ ಕೂಡಾ ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ಎದುರು ನೋಡುತ್ತಿದೆ.
ಏಕದಿನದಲ್ಲಿ ಉಭಯ ತಂಡಗಳು ಈವರೆಗೆ 10 ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ 10 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿದೆ. 2009, 2017ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿರುವ ಭಾರತ ಅಜೇಯ ಓಟ ಮುಂದುವರಿಸುವ ತವಕದಲ್ಲಿದೆ. ಭಾರತ ತಂಡದ ಆರಂಭಿಕರಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಸ್ಪೋಟಕ ಆರಂಭ ಒದಗಿಸಿಕೊಡಲು ಎದುರು ನೋಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಮಿಥಾಲಿ ರಾಜ್ (Mithali Raj), ದೀಪ್ತಿ ಶರ್ಮಾ, ಸ್ನೆಹ್ ರಾಣಾ ರಿಚಾ ಘೋಷ್ ಅವರಂತಹ ಯುವ ಹಾಗೂ ಅನುಭವಿ ಬ್ಯಾಟರ್‌ಗಳ ಬಲ ತಂಡಕ್ಕಿದೆ. ಇನ್ನು ಬೌಲಿಂಗ್‌ನಲ್ಲಿ ಜೂಲನ್ ಗೋಸ್ವಾಮಿ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ , ಪೂನಂ ಯಾದವ್ ಪಾಕ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡವು ಉಳಿದ 7 ತಂಡಗಳ ವಿರುದ್ದ ಸೆಣಸಾಟ ನಡೆಸಲಿವೆ. ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. ಹೀಗಾಗಿ ಅಗ್ರ 4 ಸ್ಥಾನ ಪಡೆಯಲು ಎಲ್ಲಾ ತಂಡಗಳು ಪೈಪೋಟಿ ನಡೆಸಲಿವೆ.
ಪಂದ್ಯ ಆರಂಭ: ಬೆಳಗ್ಗೆ 6.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
2022ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ ನೋಡಿ
ಭಾರತ vs ಪಾಕಿಸ್ತಾನ – 6ನೇ ಮಾರ್ಚ್ – 6:30 am
ಭಾರತ vs ನ್ಯೂಜಿಲೆಂಡ್ – 10ನೇ ಮಾರ್ಚ್ – 6:30 am
ಭಾರತ vs ವೆಸ್ಟ್ ಇಂಡೀಸ್ – 12ನೇ ಮಾರ್ಚ್ – 6:30 am
ಭಾರತ vs ಇಂಗ್ಲೆಂಡ್ – 16ನೇ ಮಾರ್ಚ್ – 6:30 am
ಭಾರತ vs ಆಸ್ಟ್ರೇಲಿಯಾ – 19ನೇ ಮಾರ್ಚ್ – 6:30 am
ಭಾರತ vs ಬಾಂಗ್ಲಾದೇಶ – 22ನೇ ಮಾರ್ಚ್ – 6:30 am
ಭಾರತ vs ದಕ್ಷಿಣ ಆಫ್ರಿಕಾ – 27ನೇ ಮಾರ್ಚ್ – 6:30 am
ಮಹಿಳಾ ಏಕದಿನ ವಿಶ್ವಕಪ್: ವಿಂಡೀಸ್‌ಗೆ ರೋಚಕ ಜಯ
ಮೌಂಟ್ ಮಾಂಗನುಯಿ: ದಿಯಾಂಡ್ರ ಡಾಟಿನ್ ಕೊನೆ ಓವರಲ್ಲಿ ಪಡೆದ 3 ವಿಕೆಟ್ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್‌ಇಂಡೀಸ್, ಆತಿಥೇಯ ನ್ಯೂಜಿಲೆಂಡ್ ವಿರುದ್ಧ 3 ರನ್ ಗೆಲುವು ಸಾಧಿಸಿದೆ.
ICC Women's World Cup: ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕಿವೀಸ್‌ಗೆ ಶಾಕ್ ನೀಡಿದ ವೆಸ್ಟ್ ಇಂಡೀಸ್
ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಹೇಲಿ ಮ್ಯಾಥ್ಯೂಸ್ (119) ಶತಕದ ನೆರವಿನಿಂದ 9 ಕಳೆದುಕೊಂಡು 259 ರನ್ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಕೊನೆ ಓವರಲ್ಲಿ 6 ರನ್ ಬೇಕಿತ್ತು. ಡಾಟಿನ್ ಕೇವಲ 2 ರನ್‌ಗೆ 2 ವಿಕೆಟ್, 1 ರನೌಟ್ ಮಾಡಿ ವಿಂಡೀಸ್‌ಗೆ ಜಯ ತಂದುಕೊಟ್ಟರು. ಕಿವೀಸ್ ನಾಯಕಿ ಸೋಫಿ ಡಿವೈನ್(108)ರ ಶತಕ ವ್ಯರ್ಥವಾಯಿತು.
ಟೆಸ್ಟ್: ಪಾಕ್ ಮೊದಲ ದಿನ 245ಕ್ಕೆ 1
ರಾವಲ್ಪಿಂಡಿ: ಆಸ್ಪ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಪಾಕ್ ಮೊದಲ ದಿನದಂತ್ಯಕ್ಕೆ ಕೇವಲ 1 ವಿಕೆಟ್ ಕಳೆದುಕೊಂಡು 245 ರನ್ ಕಲೆ ಹಾಕಿದೆ. ಅಬ್ದುಲ್ಲಾ ಶಫೀಕ್ 44 ರನ್‌ಗೆ ಔಟಾದರು. ಚೊಚ್ಚಲ ಶತಕ ಸಿಡಿಸಿದ ಇಮಾಮ್ ಉಲ್ ಹಕ್(132) ಹಾಗೂ ಅಝರ್ ಅಲಿ(64) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
