Asianet Suvarna News Asianet Suvarna News

ICC Women's World Cup: ಪಾಕಿಸ್ತಾನ ಬಗ್ಗುಬಡಿದು ಇತಿಹಾಸ ಬರೆದ ಬಾಂಗ್ಲಾದೇಶ..!

* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಬಾಂಗ್ಲಾದೇಶ

* ಪಾಕಿಸ್ತಾನ ಎದುರು 9 ರನ್‌ಗಳ ರೋಚಕ ಜಯ ಸಾಧಿಸಿದ ಬಾಂಗ್ಲಾದೇಶ

* ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಗೆಲುವು ದಾಖಲಿಸಿದ ಬಾಂಗ್ಲಾದೇಶ

ICC Womens World Cup Bangladesh Make History To Thrash Pakistan Cricket Team World Cup Hopes kvn
Author
Bengaluru, First Published Mar 14, 2022, 2:14 PM IST | Last Updated Mar 14, 2022, 2:14 PM IST

ಹ್ಯಾಮಿಲ್ಟನ್‌(ಮಾ.14): ಸಿದ್ರಾ ಆಮಿನ್ (Sidra Ameen) ಬಾರಿಸಿದ ಆಕರ್ಷಕ ಶತಕದ ಹೊರತಾಗಿಯೂ ಕೊನೆಯ ಕ್ಷಣದಲ್ಲಿ ನಾಟಕೀಯ ಕುಸಿತ ಕಂಡ ಪಾಕಿಸ್ತಾನ ತಂಡವು ಬಾಂಗ್ಲಾದೇಶ ಎದುರು 9 ರನ್‌ಗಳ ರೋಚಕ ಸೋಲು ಕಂಡಿದೆ. ಇದರೊಂದಿಗೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's World Cup) ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವು ಮೊದಲ ಗೆಲುವು  ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸುವುದರ ಜತೆಗೆ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ಬಾಂಗ್ಲಾದೇಶ ನೀಡಿದ್ದ 235 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು (Pakistan Women's Cricket Team) ಸುಲಭವಾಗಿ ಗೆಲುವು ದಾಖಲಿಸುವತ್ತ ದಿಟ್ಟ ಹೆಜ್ಜೆಹಾಕಿತ್ತು. ಐಸಿಸಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಪರ ಸಿದ್ರಾ ಆಮಿನ್ ಮೊದಲ ಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ಕೊನೆಯ ಓವರ್‌ಗಳಲ್ಲಿ ಕೇವಲ 26 ರನ್‌ಗಳ ಅಂತರದಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಳ್ಳುವ ,ಮೂಲಕ 9 ರನ್‌ಗಳ ರೋಚಕ ಸೋಲು ಕಂಡಿತು. ಇದರೊಂದಿಗೆ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಸತತ ನಾಲ್ಕನೇ ಸೋಲು ಕಾಣುವ ಮೂಲಕ ಬಹುತೇಕ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಂತೆ ಆಗಿದೆ.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್‌ (Bismah Maroof), ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಈ ಪಂದ್ಯವನ್ನು ಗೆಲ್ಲುವ ಹೊಸ್ತಿಲಲ್ಲಿದ್ದೆವು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೆಲವು ಕೆಟ್ಟ ಹೊಡೆತಗಳನ್ನು ಆಡುವ ಮೂಲಕ ಬೆಲೆ ತೆರಬೇಕಾಗಿ ಬಂದು ಎಂದಿದ್ದಾರೆ. ಇನ್ನು ಬಾಂಗ್ಲಾದೇಶ ತಂಡದ ನಾಯಕಿ ನಿಗಾರ್ ಸುಲ್ತಾನಾ, ಈ ಗೆಲುವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾದೇಶ ತಂಡಕ್ಕಿದು ಮೊದಲ ಗೆಲುವು. ನಾವಿಂದು ಇತಿಹಾಸವನ್ನು ನಿರ್ಮಿಸಿದ್ದೇವೆ. ಇದೀಗ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ತಂಡವು, ಫರ್ಗಾನಾ ಹಕ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಮದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಬಾರಿಸಿತ್ತು. ಬಾಂಗ್ಲಾದೇಶ ಪರ ಫರ್ಗಾನಾ ಹಕ್ 71 ರನ್‌ ಬಾರಿಸಿದರೆ, ನಾಯಕಿ ಸುಲ್ತಾನಾ 46 ಹಾಗೂ ಶರ್ಮಿನ್ ಅಖ್ತರ್ 44 ರನ್‌ಗಳನ್ನು ಬಾರಿಸುವ ಮೂಲಕ ಬಾಂಗ್ಲಾದೇಶ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ICC Women's World Cup: ಬಲಿಷ್ಠ ಆಸೀಸ್‌ಗೆ ಹ್ಯಾಟ್ರಿಕ್‌ ಜಯ

ಬಾಂಗ್ಲಾದೇಶ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಆಮೀನ್ ಹಾಗೂ ನಾಹಿದಾ ಖಾನ್ 91 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟರು. 42 ಓವರ್‌ಗಳ ಅಂತ್ಯದ ವೇಳೆಗೆ ಪಾಕಿಸ್ತಾನ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು 183 ರನ್ ಬಾರಿಸಿತ್ತು. ಅಂತಿಮ 8 ಓವರ್‌ಗಳಲ್ಲಿ ಪಾಕಿಸ್ತಾನ ತಂಡವು 48 ಎಸೆತಗಳಲ್ಲಿ ಕೇವಲ 52 ರನ್‌ಗಳ ಅಗತ್ಯವಿತ್ತು. ಜತಗೆ 8 ವಿಕೆಟ್‌ಗಳು ಕೈನಲ್ಲಿದ್ದವು. ಆದರೆ ಇದಾದ ಬಳಿಕ ನಾಟಕೀಯ ಕುಸಿತ ಕಾಣುವ ಮೂಲಕ ಪಾಕಿಸ್ತಾನ ತಂಡವು ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಅದರಲ್ಲೂ 104 ರನ್ ಬಾರಿಸಿದ್ದ ಸಿದ್ರಾ ಆಮಿನ್ ರನೌಟ್ ಆಗುವುದರೊಂದಿಗೆ ಪಾಕ್ ಗೆಲುವಿನ ಕನಸು ಕಮರಿಹೋಯಿತು.

Latest Videos
Follow Us:
Download App:
  • android
  • ios