Asianet Suvarna News Asianet Suvarna News

ICC Women's World Cup 2022: ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ

* ಮಿಥಾಲಿ ರಾಜ್ ನೇತೃತ್ವದ ತಂಡಕ್ಕೆ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ಎದುರಾಳಿ

* ಮಾರ್ಚ್‌ 04ರಿಂದ ಏಪ್ರಿಲ್‌ 03ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿ

 

ICC Womens World Cup 2022 Mithali Raj to lead India Squad no Place for Jemimah Rodrigues and Shikha Pandey kvn
Author
Bengaluru, First Published Jan 6, 2022, 1:46 PM IST

ನವದೆಹಲಿ(ಜ.06): ಮುಂಬರುವ ಮಾರ್ಚ್‌ 04ರಿಂದ ಏಪ್ರಿಲ್‌ 03ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ (ICC Women's World Cup 2022) ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ (Indian Women's Cricket Team) ಪ್ರಕಟವಾಗಿದ್ದು, ಮಿಥಾಲಿ ರಾಜ್‌ (Mithali Raj) ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಹರ್ಮನ್‌ಪ್ರೀತ್ ಕೌರ್ (Harmanpreett Kaur) ಉಪನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ ಮುಂಬರುವ ನ್ಯೂಜಿಲೆಂಡ್ ವಿರುದ್ದದ ಸರಣಿಗೂ ಭಾರತ ಮಹಿಳಾ ಕ್ರಿಕೆಟ್‌ ತಂಡವನ್ನು ಬಿಸಿಸಿಐ(BCCI) ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ

ಅಚ್ಚರಿ ಎನ್ನುವಂತೆ ಭಾರತ ಮಹಿಳಾ ತಂಡದ ವೇಗದ ಬೌಲರ್ ಶಿಖಾ ಪಾಂಡೆ (Shikha Pandey) ಹಾಗೂ ಫಾರ್ಮ್‌ನಲ್ಲಿದ್ದಂತಹ ಜೆಮಿಯಾ ರೋಡ್ರಿಗಸ್‌ (Jemimah Rodrigues) ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಭಾರತ ಮಹಿಳಾ ತಂಡವು ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ದ 5 ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟಿ20 ಪಂದ್ಯವನ್ನಾಡಲಿದೆ. 

ಭಾರತ ಮಹಿಳಾ ಕ್ರಿಕೆಟ್‌ ತಂಡವು ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮಾರ್ಚ್‌ 06ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಮೌಂಟ್‌ ಮ್ಯಾಂಗ್ಯುಯಿನಿನ ಬೇ ಓವಲ್ ಮೈದಾನ ಆತಿಥ್ಯವನ್ನು ವಹಿಸಲಿದೆ. ಭಾರತ ತಂಡವು ನಾಕೌಟ್‌ ಹಂತ ಪ್ರವೇಶಿಸುವ ಮುನ್ನ ರೌಂಡ್ ರಾಬಿನ್ ಮಾದರಿಯಲ್ಲಿ 7 ಪಂದ್ಯಗಳನ್ನಾಡಲಿದೆ.

2017ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡವು ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ರೋಚಕ ಸೋಲು ಕಾಣುವ ಮೂಲಕ ಚೊಚ್ಚಲ ಕಪ್‌ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. 

Glenn Maxwell Test Positive: ಆಸೀಸ್‌ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್ಸ್‌ಗೆ ಕೋವಿಡ್ ಪಾಸಿಟಿವ್ ..!

ಕೊರೋನಾ ಕಾರಣದಿಂದಾಗಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಹೀಗಿದ್ದು ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಅನುಭವಿ ಆಟಗಾರ್ತಿಯರಾದ ಜೂಲನ್ ಗೊಸ್ವಾಮಿ ಹಾಗೂ ಮಿಥಾಲಿ ರಾಜ್ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರು ಆಟಗಾರ್ತಿಯರ ಪಾಲಿಗೆ ಈ ಏಕದಿನ ವಿಶ್ವಕಪ್‌ ಟೂರ್ನಿಯು ಕೊನೆಯ ವಿಶ್ವಕಪ್ ಟೂರ್ನಿಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌(Rajeshwari Gayakwad) ಕೂಡಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ನ್ಯೂಜಿಲೆಂಡ್ ಹಾಗೂ ವಿಶ್ವಕಪ್‌ ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಹೀಗಿದೆ ನೋಡಿ:

ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್(ಉಪನಾಯಕಿ), ಸ್ಮೃತಿ ಮಂಧನಾ, ಶೆಫಾಲಿ ವರ್ಮಾ, ಯಾಶಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್‌(ವಿಕೆಟ್ ಕೀಪರ್), ಸ್ನೆಹ್ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೆಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್.

ನ್ಯೂಜಿಲೆಂಡ್ ಎದುರಿನ ಏಕೈಕ ಟಿ20 ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಶೆಫಾಲಿ ವರ್ಮಾ, ಯಾಶಿಕ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್‌(ವಿಕೆಟ್ ಕೀಪರ್), ಸ್ನೆಹ್ ರಾಣಾ, ಪೂಜಾ ವಸ್ತ್ರಾಕರ್, ಮೆಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಏಕ್ತಾ ಬಿಶ್ತ್, ಎಸ್‌. ಮೆಘನಾ, ಸಿಮ್ರಾನ್‌ ದಿಲ್‌ ಬಹುದ್ದೂರ್.
 

Follow Us:
Download App:
  • android
  • ios