Asianet Suvarna News Asianet Suvarna News

ICC Women's T20 World Cup: ಟಿ20 ವಿಶ್ವಕಪ್‌ ಕಿರೀಟಕ್ಕೆ ಆಸೀಸ್‌ vs ಆಫ್ರಿಕಾ ಫೈಟ್‌

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕಿಂದು ಕ್ಷಣಗಣನೆ
ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಆತಿಥೇಯ ದಕ್ಷಿಣ ಆಫ್ರಿಕಾ ಫೈಟ್
ಮೊದಲ ಬಾರಿಗೆ ಐಸಿಸಿ ಟ್ರೋಫಿ ಜಯಿಸಿವ ಕನವರಿಕೆಯಲ್ಲಿದೆ ದಕ್ಷಿಣ ಆಫ್ರಿಕಾ ತಂಡ

ICC Womens T20 World Cup Final Defending Champion Australia take on South Africa Challenge kvn
Author
First Published Feb 26, 2023, 9:52 AM IST

ಕೇಪ್‌​ಟೌನ್‌(ಫೆ.26): ಯಾವುದೇ ಐಸಿಸಿ ಟೂರ್ನಿ​ಯ ಇತಿ​ಹಾ​ಸ​ದಲ್ಲೇ ಮೊತ್ತ ಮೊದಲ ಬಾರಿ ಚಾಂಪಿ​ಯನ್‌ ಎನಿ​ಸಿ​ಕೊ​ಳ್ಳುವ ಕಾತ​ರ​ದ​ಲ್ಲಿ​ರುವ ದಕ್ಷಿಣ ಆಫ್ರಿಕಾ ತಂಡ ಮಹಿಳಾ ಟಿ20 ವಿಶ್ವ​ಕ​ಪ್‌ನ ಫೈನ​ಲ್‌​ನಲ್ಲಿ ಭಾನು​ವಾರ ಆಸ್ಪ್ರೇ​ಲಿಯಾ ವಿರುದ್ಧ ಸೆಣ​ಸಾ​ಡ​ಲಿದೆ. ದಕ್ಷಿಣ ಆ​ಫ್ರಿಕಾ ಪುರು​ಷರ ತಂಡ ಐಸಿಸಿ ಟೂರ್ನಿ​ಗಳ ನಾಕೌ​ಟ್‌​ನಲ್ಲಿ ಆಘಾ​ತ​ಕಾರಿ ಸೋಲುಂಡು ಹೊರ​ಬೀ​ಳು​ವುದು ಸಾಮಾನ್ಯ ಎಂಬಂತಾ​ಗಿದೆ. ಈ ನಡುವೆ ಮಹಿ​ಳೆ​ಯರು ಮೊದಲ ಬಾರಿ ವಿಶ್ವ​ಕಪ್‌ ಫೈನಲ್‌ ತಲು​ಪಿದ್ದು, ಪ್ರಶಸ್ತಿ ಬರ ನೀಗಿ​ಸಲು ಎದುರು ನೋಡು​ತ್ತಿ​ದ್ದಾರೆ. ಅತ್ತ ಸತತ 7ನೇ ಬಾರಿ ಫೈನ​ಲ್‌ಗೆ ಲಗ್ಗೆ ಇಟ್ಟಿ​ರುವ ಆಸ್ಪ್ರೇ​ಲಿಯಾ 6ನೇ ಪ್ರಶಸ್ತಿ ಮೇಲೆ ಕಣ್ಣಿ​ಟ್ಟಿದೆ.

ಗುಂಪು ಹಂತ​ದಲ್ಲಿ ಉಭಯ ತಂಡ​ಗಳೂ ‘ಎ’ ಗುಂಪಿ​ನಲ್ಲಿ ಸ್ಥಾನ ಪಡೆ​ದಿತ್ತು. ಎಲ್ಲಾ 4 ಪಂದ್ಯ​ಗ​ಳಲ್ಲಿ ಗೆದ್ದು ಅಜೇ​ಯ​ವಾ​ಗಿದ್ದ ಆಸೀಸ್‌, ಸೆಮೀ​ಸ್‌​ನಲ್ಲಿ ಭಾರತ ವಿರುದ್ಧ ಜಯ ತನ್ನ​ದಾ​ಗಿ​ಸಿ​ಕೊಂಡಿತ್ತು. ಅತ್ತ ದಕ್ಷಿಣ ಆ​ಫ್ರಿಕಾ ತಂಡ ಆಸೀಸ್‌ ಹಾಗೂ ಶ್ರೀಲಂಕಾ ವಿರುದ್ಧ ಸೋತ ಹೊರ​ತಾ​ಗಿಯೂ ನೆಟ್‌ ರನ್‌​ರೇಟ್‌ ಆಧಾ​ರ​ದಲ್ಲಿ ಸೆಮಿ​ಫೈ​ನಲ್‌ ತಲು​ಪಿತ್ತು. ಸೆಮೀ​ಸ್‌​ನಲ್ಲಿ ಚೊಚ್ಚಲ ಆವೃತ್ತಿ ಚಾಂಪಿ​ಯನ್‌ ಇಂಗ್ಲೆಂಡ್‌ಗೆ ಸೋಲು​ಣಿ​ಸಿ​ತ್ತು.

ದಕ್ಷಿಣ ಆ​ಫ್ರಿಕಾ ಲಾರಾ ವೊಲ್ವಾರ್ಚ್‌, ತಾಜ್ಮಿನ್‌ ಬ್ರಿಟ್ಸ್‌​ರನ್ನು ಬ್ಯಾಟಿಂಗ್‌ ವಿಭಾ​ಗ​ದಲ್ಲಿ ಹೆಚ್ಚಾಗಿ ನೆಚ್ಚಿ​ಕೊಂಡಿದ್ದು, ಬೌಲಿಂಗ್‌​ನಲ್ಲಿ ಶಬ್ನಿಮ್‌ ಇಸ್ಮಾ​ಯಿಲ್‌, ಅಯ​ಬೊಂಗಾ ಖಾಕ, ಮರಿ​ಯಾನೆ ಕಾಪ್‌ ಮಿಂಚು​ತ್ತಿ​ದ್ದಾರೆ. ಅತ್ತ ಕಡೆ ಆಸೀಸ್‌ ಎಲ್ಲಾ ವಿಭಾ​ಗ​ದಲ್ಲೂ ಬಲಿ​ಷ್ಠ​ವಾ​ಗಿದ್ದು, ಏಕಾಂಗಿ​ಯಾಗಿ ಪಂದ್ಯ ಗೆಲ್ಲಿ​ಸ​ಬಲ್ಲ ಸಾಮರ್ಥ್ಯವಿರುವ ಆಟ​ಗಾ​ರ್ತಿ​ಯರು ಹೆಚ್ಚಿ​ದ್ದಾರೆ. ಹೀಗಾಗಿ ಆಸೀಸ್‌ ವಿರುದ್ಧ ಗೆಲು​ವಿಗೆ ದ.ಆ​ಫ್ರಿಕಾ ಅಸಾ​ಧಾ​ರಣ ಪ್ರದ​ರ್ಶನ ತೋರ​ಬೇ​ಕಾದ ಅಗ​ತ್ಯ​ವಿದೆ.

ಧೋನಿಯ ಮಾತನ್ನು ತಾವು ನಂಬುವುದೇಕೆ ಎನ್ನುವ ಸತ್ಯ ಬಹಿರಂಗ ಮಾಡಿದ ವಿರಾಟ್ ಕೊಹ್ಲಿ..!

ಪಂದ್ಯ: ಸಂಜೆ 6.30ಕ್ಕೆ
ನೇರ​ ಪ್ರ​ಸಾ​ರ: ಸ್ಟಾರ್‌​ಸ್ಪೋ​ರ್ಟ್ಸ್

ಒಟ್ಟು ಮುಖಾ​ಮುಖಿ 06

ಆಸೀಸ್‌: 06

ದ.ಆ​ಫ್ರಿಕಾ: 00

ಆಸೀಸ್‌ ವಿರು​ದ್ಧ ಗೆದ್ದಿಲ್ಲ ದಕ್ಷಿಣ ಆ​ಫ್ರಿ​ಕಾ!

ಆಸ್ಪ್ರೇಲಿಯಾ ವಿರುದ್ಧ ದಕ್ಷಿಣ ಆ​ಫ್ರಿಕಾ ತಂಡ ಈವ​ರೆಗೆ ಟಿ20, ಏಕ​ದಿನ ಪಂದ್ಯ​ಗ​ಳಲ್ಲಿ ಒಂದೂ ಗೆಲುವು ಸಾಧಿ​ಸಿಲ್ಲ. ಉಭಯ ತಂಡ​ಗಳು ಈವ​ರೆಗೆ ಟಿ20ಯಲ್ಲಿ 6 ಬಾರಿ ಮುಖಾ​ಮುಖಿ​ಯಾ​ಗಿದ್ದು ಎಲ್ಲಾ ಪಂದ್ಯ​ಗ​ಳಲ್ಲೂ ಆಸೀಸ್‌ ಜಯ​ಗ​ಳಿ​ಸಿದೆ. 15 ಏಕದಿನ ಪಂದ್ಯ​ಗ​ಳಲ್ಲಿ ಆಸೀಸ್‌ 14ರಲ್ಲಿ ಜಯ​ಭೇರಿ ಬಾರಿ​ಸಿದ್ದು, 1 ಪಂದ್ಯ ಟೈ ಆಗಿದೆ.

ಟೆಸ್ಟ್‌: ಇಂಗ್ಲೆಂಡ್‌ 435/8, ಕಿವೀಸ್‌ 7 ವಿಕೆ​ಟ್‌ಗೆ 138

ವೆಲ್ಲಿಂಗ್ಟ​ನ್‌: ನ್ಯೂಜಿ​ಲೆಂಡ್‌ ವಿರು​ದ್ಧದ 2ನೇ ಟೆಸ್ಟ್‌​ನಲ್ಲಿ ಇಂಗ್ಲೆಂಡ್‌ ಬೃಹತ್‌ ಮೊತ್ತ ಕಲೆ​ಹಾ​ಕಿದ್ದು, ಬಳಿಕ ಆತಿ​ಥೇಯ ತಂಡ​ವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿ​ಸಿದೆ. ಹ್ಯಾರಿ ಬ್ರೂಕ್‌(186), ಜೋ ರೂಟ್‌(​ಔ​ಟಾ​ಗದೆ 153) ಅಬ್ಬ​ರ​ದಿಂದಾಗಿ ಇಂಗ್ಲೆಂಡ್‌ ಮೊದಲ ಇನ್ನಿಂಗ್‌್ಸ​ನಲ್ಲಿ 8 ವಿಕೆ​ಟ್‌ಗೆ 435 ರನ್‌ ಗಳಿಸಿ ಡಿಕ್ಲೇರ್‌ ಮಾಡಿ​ಕೊಂಡಿ​ತು. ಹೆನ್ರಿ 4 ವಿಕೆಟ್‌ ಕಿತ್ತ​ರು. ಬಳಿಕ ಇನ್ನಿಂಗ್‌್ಸ ಆರಂಭಿ​ಸಿದ ಕಿವೀಸ್‌ 2ನೇ ದಿನ​ದಂತ್ಯಕ್ಕೆ 7 ವಿಕೆ​ಟ್‌ಗೆ 138 ರನ್‌ ಗಳಿ​ಸಿದ್ದು, ಇನ್ನೂ 297 ರನ್‌ ಹಿನ್ನ​ಡೆ​ಯ​ಲ್ಲಿದೆ. ಬ್ಲಂಡೆ​ಲ್‌​(25), ಸೌಥಿ​(23) ಫಾಲೋ-ಆನ್‌ ತಪ್ಪಿ​ಸಲು ಹೋರಾ​ಡು​ತ್ತಿ​ದ್ದಾರೆ. ಆ್ಯಂಡ​ರ್‌​ಸನ್‌, ಲೀಚ್‌ ತಲಾ 3 ವಿಕೆಟ್‌ ಕಿತ್ತ​ರು.

Follow Us:
Download App:
  • android
  • ios