U19 World Cup 2024: ಇಂದಿನಿಂದ ಅಂಡರ್ 19 ವಿಶ್ವಕಪ್ ಹಬ್ಬ..!

ಈ ಬಾರಿ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ದ.ಆಫ್ರಿಕಾದ 5 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಅಮೆರಿಕ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಆತಿಥೇಯ ದ.ಆಫ್ರಿಕಾ ಜೊತೆ ವೆಸ್ಟ್‌ಇಂಡೀಸ್ ಸೆಣಸಾಡಲಿದೆ.

ICC U19 World Cup 2024 begins in South Africa kvn

ಬ್ಲೂಮ್‌ಫಂಟೀನ್(ದ.ಆಫ್ರಿಕಾ): ನಿರೀಕ್ಷೆಗಳ ಭಾರಗಳನ್ನು ಹೊತ್ತುಕೊಂಡು ವಿಶ್ವದೆಲ್ಲೆಡೆಯ ಯುವ ಕ್ರಿಕೆಟ್ ತಾರೆಗಳು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದು, ಶುಕ್ರವಾರದಿಂದ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಅಂಡರ್-19 ಏಕದಿನ ವಿಶ್ವಕಪ್ ನಲ್ಲಿ ತಮ್ಮ ಸಾಮರ್ಥ್ಯ ಪರೀಕ್ಷೆಗೆ ಇಳಿಯಲಿದ್ದಾರೆ. 15ನೇ ಆವೃತ್ತಿ ಕಿರಿಯರ ಏಕದಿನ ವಿಶ್ವಕಪ್‌ಗೆ ಶುಕ್ರವಾರ ಬ್ಲೂಮ್ ಫಂಟೀನ್ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

ಈ ಬಾರಿ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ದ.ಆಫ್ರಿಕಾದ 5 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಅಮೆರಿಕ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಆತಿಥೇಯ ದ.ಆಫ್ರಿಕಾ ಜೊತೆ ವೆಸ್ಟ್‌ಇಂಡೀಸ್ ಸೆಣಸಾಡಲಿದೆ. 5 ಬಾರಿ ಚಾಂಪಿಯನ್ ಭಾರತ ತಂಡ ಅಮೆರಿಕ, ಬಾಂಗ್ಲಾದೇಶ, ಐರ್ಲೆಂಡ್ ಜೊತೆ ‘ಎ’ ಗುಂಪಿನಲ್ಲಿದ್ದು, ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶನಿವಾರ ಕಣಕ್ಕಿಳಿಯಲಿದೆ. ಫೆ.11ರಂದು ಫೈನಲ್ ಪಂದ್ಯ ನಿಗದಿಯಾಗಿದೆ.

ಧರ್ಮಸ್ಥಳ, ಸೌತಡ್ಕ, ಕುಕ್ಕೆ ದೇವಾಸ್ಥಾನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಭೇಟಿ!

ಟೂರ್ನಿ ಮಾದರಿ: 16 ತಂಡಗಳನ್ನು ತಲಾ 4 ತಂಡಗಳು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನ ಪ್ರತಿ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 1 ಬಾರಿ ಮುಖಾಮುಖಿಯಾಗಲಿದ್ದು, ಅಗ್ರ-3 ತಂಡಗಳು ಸೂಪರ್-6 ಹಂತ ಪ್ರವೇಶಿಸಲಿವೆ. ಸೂಪರ್-6 ಹಂತದಲ್ಲಿ ತಲಾ 6 ತಂಡಗಳ 2 ಗುಂಪುಗಳಿರಲಿದ್ದು, ಅಗ್ರ-2 ತಂಡಗಳು ಸೆಮಿಫೈನಲ್ ಪ್ರವೇಶೀಸಲಿವೆ. 

ಭಾರತಕ್ಕೆ  ಆರನೇ ಪ್ರಶಸ್ತಿ ಮೇಲೆ ಕಣ್ಣು:

ಟೂರ್ನಿಯ ಈ ವರೆಗಿನ ಇತಿಹಾಸ ಗಮನಿಸಿದರೆ ಭಾರತಹೆಚ್ಚಿನ ಯಶಸ್ಸು ಸಾಧಿಸಿದ್ದು, ಈ ವರೆಗೆ 5 ಬಾರಿ (2000, 2008, 2012, 2018, 2022) ಚಾಂಪಿಯನ್ ಆಗಿವೆ. ಈ ಬಾರಿ 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಉಳಿದಂತೆ ಆಸ್ಟ್ರೇಲಿಯಾ 3, ಪಾಕಿಸ್ತಾನ 2, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ದ.ಆಫ್ರಿಕಾ, ಬಾಂಗ್ಲಾದೇಶ ತಲಾ 1 ಬಾರಿ ಪ್ರಶಸ್ತಿ ಗೆದ್ದಿವೆ. 

ಭಾರತದ ವೇಳಾಪಟ್ಟಿ

ಎದುರಾಳಿ ದಿನಾಂಕ ಸಮಯ

ಬಾಂಗ್ಲಾದೇಶ ಜ.20 ಮಧ್ಯಾಹ್ನ 1.30

ಐರ್ಲೆಂಡ್ ಜ.25 ಮಧ್ಯಾಹ್ನ 1.30

ಅಮೆರಿಕ ಜ.28 ಮಧ್ಯಾಹ್ನ 1.30

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭ. ಡಿಸ್ನಿ+ಹಾಟ್‌ಸ್ಟಾರ್, ಸ್ಟಾರ್‌ಸ್ಪೋರ್ಟ್ ನಲ್ಲಿ ಪಂದ್ಯಗಳ ನೇರ ಪ್ರಸಾರವಾಗಲಿದೆ.

Latest Videos
Follow Us:
Download App:
  • android
  • ios