ಬಾಂಗ್ಲಾದೇಶ-ಭಾರತ ನಡುವಿನ ಪೈಪೋಟಿಗೆ ಅಡಿಲೇಡ್ ಆತಿಥ್ಯಸೆಮೀಸ್‌ಗೆ ಮತ್ತಷ್ಟು ಹತ್ತಿರವಾಗುವ ನಿರೀಕ್ಷೆಯಲ್ಲಿ ಭಾರತಈಗಾಗಲೇ ಸೆಮೀಸ್‌ ರೇಸ್‌ನಿಂದ ದೂರವಾಗಿರುವ ಬಾಂಗ್ಲಾದೇಶ

ಅಡಿಲೇಡ್‌(ನ.02): ಬಾಂಗ್ಲಾದೇಶ ವಿರುದ್ಧದ ಪಂದ್ಯಗಳು ಬಾಲೆ ಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟಂತೆ, ಜಾರಿ ಬೀಳುವ ಸಾಧ್ಯತೆ ಇದ್ದೇ ಇರುತ್ತದೆ. ಬುಧವಾರ ಭಾರತ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಜೋಪಾನವಾಗಿ ಹೆಜ್ಜೆ ಇಡಬೇಕಿದೆ. ಸ್ವಲ್ಪ ಮೈಮರೆತರೂ ಸೆಮಿಫೈನಲ್‌ ಹಾದಿ ಕಠಿಣಗೊಳ್ಳಲಿದೆ.

ಮೇಲ್ನೋಟಕ್ಕೆ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿದರೂ, ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಭಾರತ ತಾನೆದುರಿಸುತ್ತಿರುವ ಕೆಲ ಪ್ರಮುಖ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಕೆ.ಎಲ್‌.ರಾಹುಲ್‌ ಲಯಕ್ಕೆ ಮರಳಲು ತಿಣುಕಾಡುತ್ತಿದ್ದಾರೆ. ರೋಹಿತ್‌ ಶರ್ಮಾ ಸ್ಥಿರತೆ ಕಂಡುಕೊಂಡಿಲ್ಲ. ಪವರ್‌-ಪ್ಲೇನಲ್ಲಿ ಭಾರತದ ಆಟ ಪಂದ್ಯದಿಂದ ಪಂದ್ಯಕ್ಕೆ ಸಪ್ಪೆಯಾಗುತ್ತಿದೆ.

ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದನ್ನು ತಪ್ಪಿಸಬೇಕಿದ್ದರೆ ಆರಂಭಿಕರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕು. ಹಾರ್ದಿಕ್‌ ಪಾಂಡ್ಯ ಆಲ್ರೌಂಡರ್‌ ಆಗಿ ಇನ್ನೂ ಮಿಂಚಿಲ್ಲ. ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಆಯ್ಕೆ ಸಮರ್ಥಿಸಿಕೊಳ್ಳುವಂತಹ ಆಟವಾಡಿಲ್ಲ. ಜೊತೆಗೆ ಗಾಯಗೊಂಡಿರುವ ಕಾರಣ ಅವರನ್ನು ಹೊರಗಿಟ್ಟು ರಿಷಭ್‌ ಪಂತ್‌ರನ್ನು ಆಡಿಸುವ ಧೈರ್ಯವನ್ನು ತಂಡದ ಆಡಳಿತ ಮಾಡಬಹುದು. ಒಂದು ವೇಳೆ ಕಾರ್ತಿಕ್‌ರನ್ನು ಉಳಿಸಿಕೊಂಡರೂ ದೀಪಕ್‌ ಹೂಡಾ ಬದಲಿಗೆ ಪಂತ್‌ರನ್ನು ಆಡಿಸಬಹುದು. ಇನು ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಕಣಕ್ಕಿಳಿಯುವ ನಿರೀಕ್ಷೆ ಇದೆ. ಉಳಿದಂತೆ ಬೌಲಿಂಗ್‌ ವಿಭಾಗದಲ್ಲಿ ಬೇರಾರ‍ಯವ ಬದಲಾವಣೆ ಆಗುವ ಸಾಧ್ಯತೆ ಕಡಿಮೆ.

T20 World Cup ಭಾರತ ಬಾಂಗ್ಲಾ ಪಂದ್ಯಕ್ಕೆ ಮಳೆ ಭೀತಿ, ರೋಹಿತ್ ಸೈನ್ಯದ ಸೆಮಿಫೈನಲ್ ಹಾದಿ ಕಠಿಣ!

ಬಾಂಗ್ಲಾದೇಶ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದು, ಸಂಘಟಿತ ಪ್ರದರ್ಶನ ತೋರಬೇಕಿದೆ. ತಂಡ ತನ್ನ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತಗೊಂಡಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ ಎಲ್ ರಾಹುಲ್‌, ರೋಹಿತ್‌ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್‌, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್‌, ರವಿಚಂದ್ರನ್ ಅಶ್ವಿನ್‌, ಮೊಹಮ್ಮದ್ ಶಮಿ, ಭುವನೇಶ್ವರ್‌ ಕುಮಾರ್, ಅಶ್‌ರ್‍ದೀಪ್‌ ಸಿಂಗ್.

ಬಾಂಗ್ಲಾ: ಸೌಮ್ಯ ಸರ್ಕಾರ್‌, ನಜ್ಮುಲ್‌ ಹುಸೈನ್ ಶಾಂಟೋ, ಲಿಟ್ಟನ್‌ ದಾಸ್‌, ಶಕೀಬ್‌ ಅಲ್ ಹಸನ್(ನಾಯಕ), ಅಫೀಫ್‌ ಹೊಸೈನ್, ನುರುಲ್‌ ಹಸನ್, ಮೊಸಾದೆಕ್‌, ಯಾಸಿರ್‌, ಟಸ್ಕಿನ್‌ ಅಹಮ್ಮದ್, ಮುಸ್ತಾಫಿಜುರ್‌, ಹಸನ್‌.

ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪಿಚ್‌ ರಿಪೋರ್ಚ್‌

ಅಡಿಲೇಡ್‌ ಪಿಚ್‌ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚು ಸಹಕಾರಿಯಾಗಿರಲಿದೆ. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 170 ರನ್‌. ಚೇಸ್‌ ಮಾಡುವ ತಂಡಕ್ಕೆ ಅನುಕೂಲ ಹೆಚ್ಚು.

ಪಂದ್ಯಕ್ಕೆ ಮಳೆ ಕಾಟ?

ಬುಧವಾರ ಸಂಜೆ ಅಡಿಲೇಡ್‌ನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ಒಂದು ಅಂಕ ಪಡೆದು 2ನೇ ಸ್ಥಾನದಲ್ಲೇ ಉಳಿಯಲಿದೆ. ಆಗ ಜಿಂಬಾಬ್ವೆ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.