Asianet Suvarna News Asianet Suvarna News

T20 World Cup ಆಸ್ಟ್ರೇಲಿಯಾ ಎದುರು ಟಾಸ್ ಗೆದ್ದ ಐರ್ಲೆಂಡ್ ಬೌಲಿಂಗ್ ಆಯ್ಕೆ

ಗಾಬಾ ಮೈದಾನದಲ್ಲಿಂದು ಆಸ್ಟ್ರೇಲಿಯಾ-ಐರ್ಲೆಂಡ್ ಮುಖಾಮುಖಿ
ಟಾಸ್ ಗೆದ್ದ ಐರ್ಲೆಂಡ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ
ಆಸ್ಟ್ರೇಲಿಯಾ ತಂಡದಲ್ಲಿ ಒಂದು ಮಹತ್ವದ ಬದಲಾವಣೆ

ICC T20 World Cup Ireland win the toss and elected to bowl first against Australia kvn
Author
First Published Oct 31, 2022, 1:19 PM IST

ಬ್ರಿಸ್ಬೇನ್(ಅ.31):  ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 31ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಲ್ಬ್ರೈನ್‌ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ಸೆಮೀಸ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಅನಿವಾರ್ಯ ಎನಿಸಿಕೊಂಡಿದೆ.

ಆಸ್ಟ್ರೇಲಿಯಾ ಹಾಗೂ ಐರ್ಲೆಂಡ್ ತಂಡಗಳ ನಡುವಿನ ಕಾದಾಟಕ್ಕೆ ಇಲ್ಲಿನ ದ ಗಾಬಾ ಮೈದಾನ ಆತಿಥ್ಯವನ್ನು ವಹಿಸಿದೆ. ಐರ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದರೆ ಆತಿಥೇಯ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಆಸ್ಟನ್ ಏಗರ್‌ ಬದಲಿಗೆ ಅನುಭವಿ ಲೆಗ್‌ಸ್ಪಿನ್ನರ್ ಆಡಂ ಜಂಪಾ ಕಾಂಗರೂ ಪಡೆ ಕೂಡಿಕೊಂಡಿದ್ದಾರೆ.

ಆಸ್ಟ್ರೇಲಿಯಾಗಿದು ಮಹತ್ವದ ಪಂದ್ಯ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಸೂಪರ್ 12 ಹಂತದ ಗ್ರೂಪ್ 1ನಲ್ಲಿ ಸ್ಥಾನ ಪಡೆದಿದ್ದು, ಸದ್ಯ ಮೂರು ಪಂದ್ಯಗಳನ್ನಾಡಿ ಒಂದು ಗೆಲುವು, ಒಂದು ಸೋಲು ಹಾಗೂ ಒಂದು ಪಂದ್ಯ ಮಳೆಯಿದ್ದ ರದ್ದಾಗಿದ್ದು, ಒಟ್ಟು 3 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿದರೆ, ಬಹುತೇಕ ಸೆಮೀಸ್‌ ರೇಸ್‌ನಿಂದ ಹೊರಬೀಳಲಿದೆ. ಹೀಗಾಗಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಲು ಈ ಪಂದ್ಯವು ಆಸ್ಟ್ರೇಲಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.

T20 World Cup ಹಾಲಿ ಚಾಂಪಿಯನ್ ಅಸ್ಟ್ರೇಲಿಯಾಗಿಂದು ಐರ್ಲೆಂಡ್ ಸವಾಲು..!

ಇನ್ನೊಂದೆಡೆ ಅಚ್ಚರಿ ಫಲಿತಾಂಶದ ಮೂಲಕವೇ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿರುವ ಐರ್ಲೆಂಡ್ ತಂಡವು ಕೂಡಾ 12 ಹಂತದ ಗ್ರೂಪ್ 1ನಲ್ಲಿ ಸ್ಥಾನ ಪಡೆದಿದ್ದು, ಸದ್ಯ ಮೂರು ಪಂದ್ಯಗಳನ್ನಾಡಿ ಒಂದು ಗೆಲುವು, ಒಂದು ಸೋಲು ಹಾಗೂ ಒಂದು ಪಂದ್ಯ ಮಳೆಯಿದ್ದ ರದ್ದಾಗಿದ್ದು, ಒಟ್ಟು 3 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಮತ್ತೊಮ್ಮೆ ಅಚ್ಚರಿಯ ಫಲಿತಾಂಶವನ್ನು ನಿರೀಕ್ಷಿಸುತ್ತಿದೆ. ಬಲಿಷ್ಠ ಇಂಗ್ಲೆಂಡ್‌ ವಿರುದ್ದ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಐರ್ಲೆಂಡ್ ತಂಡವು ಬ್ಯಾಟಿಂಗ್‌ನಲ್ಲಿ ಪೌಲ್ ಸ್ಟರ್ಲಿಂಗ್, ಆಂಡಿ ಬಲ್ಬ್ರೈನ್, ಲಾರ್ಕನ್ ಟಕ್ಕರ್, ಹ್ಯಾರಿ ಟೆಕ್ಟರ್ ಹಾಗೂ ಕುರ್ಟಿಸ್ ಕಾಂಪರ್ ಅವರನ್ನು ನೆಚ್ಚಿಕೊಂಡಿದೆ.

ತಂಡಗಳು ಹೀಗಿವೆ ನೋಡಿ:

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್‌, ಆಡಂ ಜಂಪಾ, ಜೋಶ್ ಹೇಜಲ್‌ವುಡ್.

ಐರ್ಲೆಂಡ್: ಪೌಲ್ ಸ್ಟರ್ಲಿಂಗ್, ಆಂಡಿ ಬಲ್ಬ್ರೈನ್, ಲಾರ್ನ್ ಟಕ್ಕರ್, ಹ್ಯಾರಿ ಟೆಕ್ಟರ್, ಕುರ್ಟಿಸ್ ಕ್ಯಾಂಪರ್, ಜಾರ್ಜ್ ಡಾಕ್ರೆಲ್‌, ಗೆರಾತ್ ಡೆನ್ಲಿ, ಮಾರ್ಕ್ ಅಡೈರ್, ಫಿನ್ ಹ್ಯಾಡ್, ಬ್ಯಾರಿ ಮೆಕ್ಯಾಥಿ, ಜೋಶ್ ಲಿಟ್ಲ್.

ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios