T20 World Cup ಹಾಲಿ ಚಾಂಪಿಯನ್ ಆಸೀಸ್‌ಗೆ ಆಫ್ಘನ್‌ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆ

ಅಡಿಲೇಡ್ ಮೈದಾನದಲ್ಲಿಂದು ಆಸ್ಟ್ರೇಲಿಯಾ-ಆಫ್ಘಾನಿಸ್ತಾನ ತಂಡ ಮುಖಾಮುಖಿ
ಆಫ್ಘಾನ್ ಎದುರು ದೊಡ್ಡ ಗೆಲುವಿನ ಕನವರಿಕೆಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ
ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ ಆಫ್ಘಾನಿಸ್ತಾನ ತಂಡ

ICC T20 World Cup Defending Champion Australia eyes on big margin over Afghanistan kvn

ಅಡಿಲೇಡ್‌(ನ.04): ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರಲು ಹರಸಾಹಸ ಪಡುತ್ತಿರುವ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ, ಗುಂಪು ಹಂತದ ನಿರ್ಣಾಯಕ ಕೊನೆ ಪಂದ್ಯದಲ್ಲಿ ಶುಕ್ರವಾರ ಆಫ್ಘಾನಿಸ್ತಾನ ವಿರುದ್ಧ ಸೆಣಸಾಡಲಿದೆ. ಸದ್ಯ ಗುಂಪು 1ರಲ್ಲಿ ಕಿವೀಸ್‌, ಇಂಗ್ಲೆಂಡ್‌, ಆಸೀಸ್‌ ತಲಾ 5 ಅಂಕಗಳೊಂದಿಗೆ ಅಗ್ರ 3 ಸ್ಥಾನಗಳಲ್ಲಿವೆ. ಈ ಪಂದ್ಯದಲ್ಲಿ ಆಸೀಸ್‌ ಗೆದ್ದರೆ ಸೆಮೀಸ್‌ ರೇಸ್‌ನಲ್ಲಿ ಉಳಿಯಲಿದ್ದು, ಸೋತರೆ ನಾಕೌಟ್‌ ಬಾಗಿಲು ಬಹುತೇಕ ಬಂದ್‌ ಆಗಲಿದೆ.

ಆಸೀಸ್‌ ನೆಟ್‌ ರನ್‌ರೇಟ್‌ನಲ್ಲಿ ಕಿವೀಸ್‌ ಹಾಗೂ ಇಂಗ್ಲೆಂಡ್‌ಗಿಂತ ಹಿಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದರೂ ಸೆಮೀಸ್‌ಗೇರಲು ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಿದೆ. ಇಲ್ಲಿ ಆಸೀಸ್‌ ಗೆದ್ದು, ಅತ್ತ ಇಂಗ್ಲೆಂಡನ್ನು ಶ್ರೀಲಂಕಾ ಸೋಲಿಸಿದರೆ ಆಸೀಸ್‌ ಸೆಮೀಸ್‌ಗೇರಲಿದೆ. ಇಂಗ್ಲೆಂಡ್‌ ಗೆದ್ದರೆ ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ ತಂಡಕ್ಕೆ ಸೆಮೀಸ್‌ ಟಿಕೆಟ್‌ ಸಿಗಲಿದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯದಲ್ಲಿ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವು ದೊಡ್ಡ ಅಂತರದ ಗೆಲುವನ್ನು ಎದುರು ನೋಡುತ್ತಿದೆ.

ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಬ್ಯಾಟಿಂದ ನಿರೀಕ್ಷಿತ ಪ್ರಮಾಣದ ರನ್ ಬರದೇ ಇರುವುದು ತಲೆನೋವು ಹೆಚ್ಚುವಂತೆ ಮಾಡಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಡೇವಿಡ್ ವಾರ್ನರ್, ಈ ಬಾರಿ ನಾಲ್ಕು ಪಂದ್ಯಗಳಿಂದ ಕೇವಲ 23 ರನ್ ಗಳನ್ನಷ್ಟೇ ಬಾರಿಸಿದ್ದು, 11 ರನ್ ಈ ಬಾರಿಯ ಟೂರ್ನಿಯಲ್ಲಿ ವಾರ್ನರ್ ಗಳಿಸಿದ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ. ಇನ್ನು ನಾಯಕ ಫಿಂಚ್, ಟಿಮ್ ಡೇವಿಡ್ ಹಾಗೂ ಮಾರ್ಕಸ್ ಸ್ಟೋನಿಸ್ ಕೂಡಾ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಇದೀಗ ಸೆಮೀಸ್ ಪ್ರವೇಶಿಸಬೇಕಿದ್ದರೇ, ದೊಡ್ಡ ಅಂತರದ ಗೆಲುವಿನ ಜತೆಗೆ ಅದೃಷ್ಟ ಕೂಡಾ ಸಾಥ್ ನೀಡಬೇಕಿದೆ. 

T20 World Cup: "ಕೊಹ್ಲಿ ಕಳ್ಳಾಟ": 5 ಪೆನಾಲ್ಟಿ ರನ್‌ ನೀಡದ್ದಕ್ಕೆ ಬಾಂಗ್ಲಾ ಆಟಗಾರರು ಕೆಂಡಾಮಂಡಲ

ಮತ್ತೊಂದೆಡೆ ಸೆಮೀಸ್‌ ರೇಸ್‌ನಿಂದ ಈಗಾಗಲೇ ಹೊರಬಿದ್ದಿರುವ ಆಫ್ಘಾನಿಸ್ತಾನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಏಕೈಕ ತಂಡ ಎನ್ನುವ ಕುಖ್ಯಾತಿಗೆ ಒಳಗಾಗಿರುವ ಆಫ್ಘಾನಿಸ್ತಾನ ತಂಡವು, ಇದೀಗ ಆತಿಥೇಯರಿಗೆ ಶಾಕ್ ನೀಡಿ, ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸುವ ಲೆಕ್ಕಾಚಾರದಲ್ಲಿದೆ. ಇನ್ನು ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಅಡಿಲೇಡ್‌ ಪಿಚ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲೆಗ್‌ ಸ್ಪಿನ್ನರ್ ರಶೀದ್ ಖಾನ್, ಕಾಂಗರೂ ಪಡೆಗೆ ಶಾಕ್ ನೀಡಲು ಎದುರು ನೋಡುತ್ತಿದ್ದಾರೆ. ಮೊದಲೇ ದೊಡ್ಡ ಅಂತರದ ಗೆಲುವಿನ ಒತ್ತಡದಲ್ಲಿರುವ ಆಸ್ಟ್ರೇಲಿಯಾ ತಂಡವು, ಯುವ ಆಟಗಾರರನ್ನೊಳಗೊಂಡ ಆಫ್ಘಾನಿಸ್ತಾನ ಎದುರಿನ ಸವಾಲನ್ನು ಮೆಟ್ಟಿ ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್‌, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್‌, ಆಡಂ ಜಂಪಾ, ಜೋಶ್ ಹೇಜಲ್‌ವುಡ್.

ಆಫ್ಘಾನಿಸ್ತಾನ: ಗುಲ್ಬದ್ದೀನ್ ನೈಬ್, ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಉಸ್ಮಾನ್ ಘನಿ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹಮ್ಮದ್, ಫಜಲ್‌ಹಕ್ ಪಾರೂಕಿ.
 
ಪಂದ್ಯ ಆರಂಭ: ಮಧ್ಯಾಹ್ನ 1:30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್

Latest Videos
Follow Us:
Download App:
  • android
  • ios