* ಅಬುಧಾಬಿಯಲ್ಲಿಂದು ಬಾಂಗ್ಲಾ-ಇಂಗ್ಲೆಂಡ್ ಮುಖಾಮುಖಿ* ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ ಬಾಂಗ್ಲಾ* ಗೆಲುವಿನ ಲಯ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದೆ ಇಂಗ್ಲೆಂಡ್

ಅಬುಧಾಬಿ(ಅ.27): ಐಸಿಸಿ ವಿಶ್ವಕಪ್ ಟೂರ್ನಿಯ (ICC T20 World Cup) 20ನೇ ಪಂದ್ಯದಲ್ಲಿಂದು ಬಲಿಷ್ಠ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳು (Bangladesh Cricket Team) ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದೆ. 

ಇಂಗ್ಲೆಂಡ್(England Cricket Team) ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಕಾದಾಟಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಟಸ್ಕಿನ್ ಅಹಮ್ಮದ್ ಬದಲಿಗೆ ಶರೀಫುಲ್ ಇಸ್ಲಾಂ ತಂಡ ಕೂಡಿಕೊಂಡಿದ್ದಾರೆ.

Scroll to load tweet…

T20 world Cup 2021: ಇಂದು ಇಂಗ್ಲೆಂಡ್‌-ಬಾಂಗ್ಲಾದೇಶ ಮೊದಲ ಮುಖಾಮುಖಿ!

ಟಿ20 ಕ್ರಿಕೆಟ್‌ (T20 Cricket) ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಮೇಲ್ನೋಟಕ್ಕೆ ಇಂಗ್ಲೆಂಡ್ ಬಲಿಷ್ಠವಾಗಿ ಕಾಣಿಸುತ್ತಿದ್ದರೂ, ಬಹುತೇಕ ಇದೇ ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ಕ್ರಿಕೆಟ್‌ ತಂಡವು 2015ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಶಾಕ್ ನೀಡಿ ಟೂರ್ನಿಯಿಂದ ಹೊರದಬ್ಬಿತ್ತು. ಲಂಕಾ ವಿರುದ್ದದ ಪಂದ್ಯದಲ್ಲಿ ಕೆಲವು ಕ್ಯಾಚ್ ಕೈಚೆಲ್ಲಿದ್ದು, ಬಾಂಗ್ಲಾದೇಶ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಉಭಯ ತಂಡಗಳು ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿವೆ. ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ದ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇನ್ನೊಂದೆಡೆ ಮೊಹಮದುಲ್ಲಾ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ದ ವಿರೋಚಿತ ಸೋಲು ಕಂಡಿತ್ತು. 

ಬಾಂಗ್ಲಾದೇಶ ಕ್ರಿಕೆಟ್ ತಂಡವು ಹೆಚ್ಚಾಗಿ ಶಕೀಬ್ ಅಲ್‌ ಹಸನ್ (Shakib Al Hasan) ಅವರನ್ನು ನೆಚ್ಚಿಕೊಂಡಿದೆ. ಕಳೆದ 6 ಐಸಿಸಿ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಗೆಲುವಿನಲ್ಲಿ ಶಕೀಬ್ ಅಲ್‌ ಹಸನ್ ಮಹತ್ವದ ಪಾತ್ರವಹಿಸಿದ್ದಾರೆ. ಇನ್ನು ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿರುವ ಶಕೀಬ್ ಅವರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ಬಾಂಗ್ಲಾದೇಶ ಎದುರು ನೋಡುತ್ತಿದೆ.

ಇನ್ನೊಂದೆಡೆ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ (West Indies Cricket) ವಿರುದ್ದ ಅನಾಯಾಸವಾಗಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಇಂಗ್ಲೆಂಡ್ ತಂಡವು ತನ್ನ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ. ಜೋಸ್ ಬಟ್ಲರ್ (Jos Buttler), ಜಾನಿ ಬೇರ್‌ಸ್ಟೋವ್, ಜೇಸನ್ ರಾಯ್, ಮೋಯಿನ್ ಅಲಿ (Moeen Ali) ಸೇರಿದಂತೆ ಎಲ್ಲರೂ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್‌ ಪಾಯಿಂಟ್. ಇನ್ನು ಸ್ಪಿನ್ ಅಸ್ತ್ರಗಳಾಗಿರುವ ಮೋಯಿನ್ ಅಲಿ ಹಾಗೂ ಆದಿಲ್ ರಶೀದ್‌ ತಮ್ಮ ಜಾಲದಲ್ಲಿ ಬಾಂಗ್ಲಾದೇಶ ಬ್ಯಾಟರ್‌ಗಳನ್ನು ಕೆಡವಲು ರಣತಂತ್ರ ಹೆಣೆದಿದ್ದಾರೆ. 

ತಂಡಗಳು ಹೀಗಿವೆ ನೋಡಿ

Scroll to load tweet…