ಬಾಂಗ್ಲಾ ಎದುರು ಟಾಸ್ ಗೆದ್ದ ನೆದರ್‌ಲೆಂಡ್ಸ್‌ ಬೌಲಿಂಗ್ ಆಯ್ಕೆಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ಬಾಂಗ್ಲಾದೇಶಸೂಪರ್ 12ಗೆ ನೇರ ಅರ್ಹತೆ ಪಡೆದಿರುವ ಬಾಂಗ್ಲಾದೇಶ

ಹೋಬರ್ಟ್‌(ಅ.24): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 17ನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ನೆದರ್‌ಲೆಂಡ್ಸ್‌ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನೆದರ್‌ಲೆಂಡ್ಸ್‌ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. 

ಅರ್ಹತಾ ಸುತ್ತಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಹಾಗೂ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ನೆದರ್‌ಲೆಂಡ್ಸ್ ತಂಡವು ಇದೀಗ ಸೂಪರ್ 12 ಹಂತದಲ್ಲಿ ತಮ್ಮ ಪಾಲಿನ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಇನ್ನು ಬಾಂಗ್ಲಾದೇಶ ತಂಡ ನೇರವಾಗಿ ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನ್ಯೂಜಿಲೆಂಡ್‌ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿರುವ ಬಾಂಗ್ಲಾದೇಶ ತಂಡವು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

T20 World Cup ಟೀಕೆಗೆ ಬೆಂಕಿ ಬೌಲಿಂಗ್‌ನಿಂದಲೇ ಉತ್ತರಿಸಿದ ಆರ್ಶದೀಪ್ ಸಿಂಗ್!

ಸೂಪರ್ 12 ಹಂತದ ಗ್ರೂಪ್ 2 ಹಂತದಲ್ಲಿ ಸಾಕಷ್ಟು ಬಲಿಷ್ಠ ತಂಡಗಳನ್ನು ಹೊಂದಿದ್ದು, ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡಕ್ಕೆ ಉಭಯ ತಂಡಗಳು ಸಿಲುಕಿವೆ. 

Scroll to load tweet…

ಉಭಯ ತಂಡಗಳು ಹೀಗಿವೆ ನೋಡಿ

ಬಾಂಗ್ಲಾದೇಶ: ನಜಮುಲ್‌ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಅಫಿಫ್ ಹೊಸೈನ್, ಯಾಸಿರ್ ಅಲಿ, ನೂರಲ್ ಹಸನ್(ವಿಕೆಟ್ ಕೀಪರ್), ಮೊಸದಕ್ ಹೊಸೈನ್, ಟಸ್ಕಿನ್ ಅಹಮ್ಮದ್, ಮುಷ್ಥಾಫಿಜುರ್ ರೆಹಮಾನ್, ಹಸನ್ ಮಹಮದ್.

ನೆದರ್‌ಲೆಂಡ್ಸ್‌: ಮಾಕ್ಸ್‌ ಒ ಡೌಡ್, ವಿಕ್ರಂಜಿತ್ ಸಿಂಗ್, ಬಾಸ್ ಡೆ ಲೀಡೆ, ಕಾಲಿನ್ ಅಕ್ರೆಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್‌, ಟಿಮ್ ಪ್ರಿಂಗಲ್‌, ಲೋಗನ್ ವ್ಯಾನ್ ಬೀಕ್, ಶಾರಿಜ್ ಅಹಮ್ಮದ್, ಫ್ರೆಡ್‌ ಕ್ಲಾಸೇನ್, ಪೌಲ್‌ ವ್ಯಾನ್ ಮೀಕ್ರೇನ್.