* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭ* ಈಗಾಗಲೇ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಜಸ್ಪ್ರೀತ್ ಬುಮ್ರಾ* ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆ

ಇಂದೋರ್‌(ಅ.06): ಬೆನ್ನು ನೋವಿನ ಸಮಸ್ಯೆಯಿಂದಾಗಿ ಐಸಿಸಿ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವ ವೇಗಿ ಜಸ್‌ಪ್ರೀತ್‌ ಬುಮ್ರಾ ಜಾಗವನ್ನು ಮೊಹಮ್ಮದ್ ಶಮಿ ತುಂಬುವ ಸಾಧ್ಯತೆ ಇದೆ. ಕೋವಿಡ್‌ನಿಂದ ಚೇತರಿಸಿಕೊಂಡು ಫಿಟ್ನೆಸ್‌ ಪರೀಕ್ಷೆ ಪಾಸಾದರೆ ಶಮಿಯನ್ನು ಆಯ್ಕೆ ಮಾಡುವ ಬಗ್ಗೆ ಭಾರತ ತಂಡದ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ನಾಯಕ ರೋಹಿತ್‌ ಶರ್ಮಾ ಸುಳಿವು ನೀಡಿದ್ದಾರೆ. ಈಗಾಗಲೇ ಪ್ರಕಟಿಸಿರುವ ತಂಡದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್‌ 15ರ ವರೆಗೂ ಅವಕಾಶವಿದೆ.

ಈಗಾಗಲೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದಾಗಲೇ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ದೀಪಕ್ ಚಹರ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಇಬ್ಬರ ಪೈಕಿ ಒಬ್ಬರು ಟೀಂ ಇಂಡಿಯಾ 15 ಆಟಗಾರರನ್ನೊಳಗೊಂಡ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. 

ಸದ್ಯ ತಂಡದಲ್ಲಿರುವ ಕೇವಲ 7-8 ಆಟಗಾರರು ಮಾತ್ರ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವಿದೆ. ಹೀಗಾಗಿ ನಾವು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ. ಸರಿಯಾದ ಬೌಲಿಂಗ್ ಸಂಯೋಜನೆಯಿಂದ ಕಣಕ್ಕಿಳಿಯುವ ಉದ್ದೇಶದಿಂದ ಆಸ್ಟ್ರೇಲಿಯಾದಲ್ಲಿನ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ನಾವು ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಟಿ20 ವಿಶ್ವಕಪ್‌: ಭಾರತದ ನಿತಿನ್‌ ಮೆನನ್‌ ಅಂಪೈರ್‌

ದುಬೈ: ಮುಂದಿನ ವಾರ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ನಲ್ಲಿ ಕಾರ‍್ಯನಿರ್ವಹಿಸಲಿರುವ 16 ಮಂದಿ ಅಂಪೈರ್‌ಗಳ ಪಟ್ಟಿಯನ್ನು ಐಸಿಸಿ ಬುಧವಾದ ಪ್ರಕಟಿಸಿದ್ದು, ಭಾರತದ ನಿತಿನ್‌ ಮೆನನ್‌ ಸಹ ಇದ್ದಾರೆ. 16 ಅಂಪೈರ್‌ಗಳ ಜೊತೆ ನಾಲ್ವರು ಮ್ಯಾಚ್‌ ರೆಫ್ರಿಗಳನ್ನೂ ಐಸಿಸಿ ನೇಮಕ ಮಾಡಿದೆ. ಜಿಂಬಾಬ್ವೆಯ ಆ್ಯಂಡಿ ಪೈಕ್ರಾಫ್‌್ಟ, ಇಂಗ್ಲೆಂಡ್‌ನ ಕ್ರಿಸ್‌ ಬ್ರಾಡ್‌, ಆಸ್ಪ್ರೇಲಿಯಾದ ಡೇವಿಡ್‌ ಬೂನ್‌ ಹಾಗೂ ಶ್ರೀಲಂಕಾದ ರಂಜನ್‌ ಮದುಗಲೆ ಕಾರ‍್ಯನಿರ್ವಹಿಸಲಿದ್ದಾರೆ.

Irani Trophy: ಶೇಷ ಭಾರತಕ್ಕೆ ಇರಾನಿ ಟ್ರೋಫಿ

ರಾಜ್‌ಕೋಟ್‌: 2ನೇ ಇನ್ನಿಂಗ್ಸಲ್ಲಿ ಸೌರಾಷ್ಟ್ರದಿಂದ ಪ್ರತಿರೋಧ ಎದುರಾದರೂ ಶೇಷ ಭಾರತ(ರೆಸ್ಟ್‌ ಆಫ್‌ ಇಂಡಿಯಾ) ತಂಡ ಇರಾನಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 8 ವಿಕೆಟ್‌ಗಳಿಂದ ಗೆದ್ದ ಶೇಷ ಭಾರತ 29ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

T20 World Cup ಟೂರ್ನಿಯಲ್ಲಿ ಅಬ್ಬರಿಸಲು ಎದುರು ನೋಡುತ್ತಿದ್ದೇನೆಂದ ಸೂರ್ಯಕುಮಾರ್ ಯಾದವ್..!

ಜಯ್‌ದೇವ್‌ ಉನಾದ್ಕತ್‌ರ ನೇತೃತ್ವದಲ್ಲಿ ಹೋರಾಟ ನಡೆಸಿದ 2019-20ರ ರಣಜಿ ಚಾಂಪಿಯನ್‌ ಸೌರಾಷ್ಟ್ರ 2ನೇ ಇನ್ನಿಂಗ್ಸಲ್ಲಿ 380 ರನ್‌ ಕಲೆಹಾಕಿತು. ಆದರೆ ಮೊದಲ ಇನ್ನಿಂಗ್ಸಲ್ಲಿ 276 ರನ್‌ ಮುನ್ನಡೆ ಬಿಟ್ಟುಕೊಟ್ಟಿದ್ದ ಕಾರಣ, ಶೇಷ ಭಾರತಕ್ಕೆ ಗೆಲ್ಲಲು 105 ರನ್‌ ಗುರಿಯನ್ನಷ್ಟೇ ನಿಗದಿ ಮಾಡಲು ಸಾಧ್ಯವಾಯಿತು. 2ನೇ ಇನ್ನಿಂಗ್ಸಲ್ಲಿ ಶೇಷ ಭಾರತ 31.2 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು. ಆರಂಭಿಕ ಬ್ಯಾಟರ್‌ ಅಭಿಮನ್ಯು ಈಶ್ವರನ್‌ ಔಟಾಗದೆ 63, ಕೆ.ಎಸ್‌.ಭರತ್‌ ಔಟಾಗದೆ 27 ರನ್‌ ಗಳಿಸಿದರು.

ಸ್ಕೋರ್‌: ಸೌರಾಷ್ಟ್ರ 98 ಹಾಗೂ 380(ಉನಾದ್ಕತ್‌ 89, ಕುಲ್ದೀಪ್‌ 5-94, ಸೌರಭ್‌ 3-80), ಶೇಷ ಭಾರತ 374 ಹಾಗೂ 105/2(ಅಭಿಮನ್ಯು 63*, ಉನಾದ್ಕತ್‌ 2-37)

ಟಿ20: ವಿಂಡೀಸ್‌ ವಿರುದ್ಧ ಆಸೀಸ್‌ಗೆ 3 ವಿಕೆಟ್‌ ಜಯ

ಕರಾರ: ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಸಲುವಾಗಿ ನಡೆಯುತ್ತಿರುವ 2 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಆತಿಥೇಯ ಆಸ್ಪ್ರೇಲಿಯಾ 3 ವಿಕೆಟ್‌ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 20 ಓವರಲ್ಲಿ 9 ವಿಕೆಟ್‌ಗೆ 145 ರನ್‌ ಗಳಿಸಿತು. ಕೈಲ್‌ ಮೇಯ​ರ್‍ಸ್ 39 ರನ್‌ ಗಳಿಸಿದರು. ಹೇಜಲ್‌ವುಡ್‌ 3, ಕಮಿನ್ಸ್‌ ಹಾಗೂ ಸ್ಟಾರ್ಕ್ ತಲಾ 2 ವಿಕೆಟ್‌ ಕಿತ್ತರು. ಆಸೀಸ್‌ 19.5 ಓವರಲ್ಲಿ 7 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಆ್ಯರೋನ್‌ ಫಿಂಚ್‌ 58, ಮ್ಯಾಥ್ಯೂ ವೇಡ್‌ 39 ರನ್‌ ಗಳಿಸಿದರು.