ಲಂಡನ್(ಜ.14): 2023-31ರ ಅವಧಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಳಲ್ಲಿ 16ರ ಬದಲು 20 ತಂಡಗಳನ್ನು ಕಣಕ್ಕಿಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಚಿಂತನೆ ನಡೆಸುತ್ತಿದೆ ಎಂದು ಪ್ರತಿಷ್ಠಿತ ಟೆಲಿ ಗ್ರಾಫ್ ಪತ್ರಿಕೆ ವರದಿ ಮಾಡಿದೆ. 

ಟಿ20 ವಿಶ್ವಕಪ್ ತಂಡದಲ್ಲಿ ಧೋನಿ ಯಾಕಿರಬೇಕು? ಇಲ್ಲಿದೆ 3 ಕಾರಣ!

ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸಲು ಇದು ಸುಲಭ ವಿಧಾನ ಎಂದು ನಂಬಿರುವ ಐಸಿಸಿ, 2024ರ ವಿಶ್ವಕಪ್‌ನಲ್ಲಿ ಈ ಪ್ರಯೋಗ ನಡೆಸುವ ಬಗ್ಗೆ ಮುಂಬರುವ ಸಭೆಯಲ್ಲಿ ಚರ್ಚಿಸಲಿದೆ ಎನ್ನಲಾಗಿದೆ. ಅಮೆರಿಕ, ಕೆನಡಾ, ಜರ್ಮನಿ ಹಾಗೂ ನೈಜೀರಿಯಾ ತಂಡ ಗಳಿಗೆ ಪ್ರವೇಶ ಸಿಗುವ ನಿರೀಕ್ಷೆ ಇದೆ. ಟೂರ್ನಿಯಲ್ಲಿ 20 ತಂಡಗಳನ್ನು ಕಣಕ್ಕಿಳಿಸಲು 2 ಮಾದರಿಯನ್ನು ಐಸಿಸಿ ಪ್ರಸ್ತಾಪಿಸಿದೆ.

’ಟೀಂ ಇಂಡಿಯಾವೇ ಈ ಸಲ ಟಿ20 ವಿಶ್ವಕಪ್ ಗೆಲ್ಲೋದು‘

ಶ್ರೇಯಾಂಕ ಪಟ್ಟಿಯಲ್ಲಿ ಕೆಳಗಿರುವ ತಂಡ ಗಳನ್ನು ಅರ್ಹತಾ ಟೂರ್ನಿಯಲ್ಲಿ ಆಡಿಸಿ, ಅಲ್ಲಿ ಗೆಲ್ಲುವ ತಂಡಗಳನ್ನು ಪ್ರಧಾನ ಸುತ್ತಿಗೆ ಕರೆತರುವುದು ಒಂದು ಮಾದರಿಯಾದರೆ, ತಲಾ 5 ತಂಡಗಳಂತೆ 4 ಗುಂಪುಗಳ ನ್ನಾಗಿ ವಿಂಗಡಿಸಿ, ಅಗ್ರ 2 ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸುವಂತೆ ಮಾಡುವುದು ಮತ್ತೊಂದು ಮಾದರಿ ಎಂದು ವರದಿಯಲ್ಲಿ ಹೇಳಲಾಗಿದೆ.

2020ರ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಿದೆ. ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಟಿ20 ಕ್ರಿಕೆಟ್ ವಿಶ್ವಕಪ್ ಜರುಗಲಿದೆ.