ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್‌(ಐಬಿಎಸ್‌ಎ) ವಿಶ್ವ ಗೇಮ್ಸ್‌ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡ ಭಾರತ ಅಂಧರ ಕ್ರಿಕೆಟ್ ತಂಡಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 8 ವಿಕೆಟ್‌ ಸೋಲು

ಬರ್ಮಿಂಗ್‌ಹ್ಯಾಮ್‌(ಆ.28): ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್‌(ಐಬಿಎಸ್‌ಎ) ವಿಶ್ವ ಗೇಮ್ಸ್‌ನ ಪುರುಷರ ಕ್ರಿಕೆಟ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಶನಿವಾರ ರಾತ್ರಿ ನಡೆದ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 8 ವಿಕೆಟ್‌ ಸೋಲನುಭವಿಸಿತು.

ಭಾರತ ತಂಡ ಮೊದಲು ಬ್ಯಾಟ್‌ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 184 ರನ್‌ ಕಲೆಹಾಕಿತು. ಗುರಿ ಬೆನ್ನತ್ತಿದ ಪಾಕ್‌ 15 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಲೀಗ್ ಹಂತದಲ್ಲೂ ಭಾರತ ತಂಡ, ಪಾಕ್‌ಗೆ ಶರಣಾಗಿತ್ತು. ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು.

Scroll to load tweet…

ಅಂಧರ ಕ್ರಿಕೆಟ್‌: ಭಾರತಕ್ಕೆ ಚಿನ್ನ

ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್‌(ಐಬಿಎಸ್‌ಎ) ವಿಶ್ವ ಗೇಮ್ಸ್‌ನ ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡ ಚಿನ್ನದ ಪದಕ ಜಯಿಸಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್‌ ಜಯ ಸಾಧಿಸಿತು. ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್‌ ಸೇರ್ಪಡೆಗೊಳಿಸಲಾಗಿತ್ತು.

Scroll to load tweet…

ನಾನ್‌ಸ್ಟ್ರೈಕ್ ಬ್ಯಾಟರ್ ರನೌಟ್..! ರೊಚ್ಚಿಗೆದ್ದ ಬ್ಯಾಟರ್ ಮಾಡಿದ್ದೇನು ಗೊತ್ತಾ? ವಿಡಿಯೋ ಇದೆ ನೋಡಿ

ಏಕದಿನ: ಆಫ್ಛನ್‌ ವಿರುದ್ಧ ಪಾಕಿಸ್ತಾನ ಕ್ಲೀನ್‌ಸ್ವೀಪ್‌

ಕೊಲಂಬೊ: ಅಫ್ಘಾನಿಸ್ತಾನ ವಿರುದ್ಧ ಕೊನೆ ಏಕದಿನ ಪಂದ್ಯದಲ್ಲಿ 59 ರನ್‌ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ, 3 ಪಂದ್ಯಗಳ ಸರಣಿಯನ್ನು 3-0ಯಿಂದ ಕ್ಲೀನ್‌ಸ್ವೀಪ್‌ ಮಾಡಿತು. ಮೊದಲು ಬ್ಯಾಟ್‌ ಮಾಡಿದ ಪಾಕ್‌, 8 ವಿಕೆಟ್‌ಗೆ 268 ರನ್‌ ಕಲೆಹಾಕಿತು. ರಿಜ್ವಾನ್‌ 67, ಬಾಬರ್‌ ಆಜಂ 60 ರನ್‌ ಬಾರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಗುರಿ ಬೆನ್ನತ್ತಿದ ಆಫ್ಘನ್‌, 48.4 ಓವರ್‌ಗಳಲ್ಲಿ 209 ರನ್‌ಗೆ ಸರ್ವಪತನ ಕಂಡಿತು. 97 ರನ್‌ಗೆ 7 ವಿಕೆಟ್‌ ಕಳೆದುಕೊಂಡ ಬಳಿಕ ಮುಜೀಬುರ್‌ ರಹ್ಮಾನ್‌ 37 ಎಸೆತಗಳಲ್ಲಿ 64 ರನ್‌ ಸಿಡಿಸಿ ತಂಡದ ಸೋಲಿನ ಅಂತರವನ್ನು ಕಡಿತಗೊಳಿಸಿದರು.

ಏಕದಿನ ರ್‍ಯಾಂಕಿಂಗ್‌: ನಂ.1 ಸ್ಥಾನಕ್ಕೇರಿದ ಪಾಕಿಸ್ತಾನ

ಕೊಲಂಬೊ: ಅಫ್ಘಾನಿಸ್ತಾನ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಕ್ಲೀನ್​ಸ್ವೀಪ್​ ಸಾಧಿಸಿದ ಪಾಕಿಸ್ತಾನ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದೆ. ಇದರೊಂದಿಗೆ ಪಾಕ್‌ ತಂಡ ಬಹುನಿರೀಕ್ಷಿತ ಏಷ್ಯಾಕಪ್‌ಗೆ ಅಗ್ರಸ್ಥಾನಿಯಾಗಿ ಕಣಕ್ಕಿಳಿಯಲಿದೆ. ಸದ್ಯ ಪಾಕಿಸ್ತಾನ 118 ರೇಟಿಂಗ್ ಅಂಕ ಹೊಂದಿದ್ದು, ಅಷ್ಟೇ ಅಂಕ ಪಡೆದಿರುವ ಆಸ್ಟ್ರೇಲಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಭಾರತ 113 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌(104), ಇಂಗ್ಲೆಂಡ್‌(101) ಹಾಗೂ ದಕ್ಷಿಣ ಆಫ್ರಿಕಾ(101) ತಂಡಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಇದೇ ವೇಳೆ ಟೆಸ್ಟ್‌ ಹಾಗೂ ಟಿ20ಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನ ಕಾಯ್ದುಕೊಂಡಿದೆ.

ಏಷ್ಯಾಕಪ್ ಟೂರ್ನಿಗೂ ಮುನ್ನ ಲಂಕಾದ 2 ಸ್ಟಾರ್ ಆಟಗಾರರಿಗೆ ಕೊರೋನಾ ಪಾಸಿಟಿವ್! ಆತಂಕದಲ್ಲಿ ಲಂಕಾ ಪಾಳಯ

ಕೀಪಿಂಗ್‌ ಅಭ್ಯಾಸ ಆರಂಭಿಸಿದ ರಾಹುಲ್‌

ಬೆಂಗಳೂರು: ಸಣ್ಣ ಪ್ರಮಾಣದ ಗಾಯದ ಸಮಸ್ಯೆಯ ನಡುವೆಯೂ ಏಷ್ಯಾಕಪ್‌ ತಂಡಕ್ಕೆ ಆಯ್ಕೆಯಾಗಿರುವ ಕೆ.ಎಲ್‌.ರಾಹುಲ್‌ ಶನಿವಾರದಿಂದ ವಿಕೆಟ್‌ ಕೀಪಿಂಗ್‌ ಅಭ್ಯಾಸ ಆರಂಭಿಸಿದ್ದು, ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಏಷ್ಯಾಕಪ್‌ ಹಾಗೂ ವಿಶ್ವಕಪ್‌ನಲ್ಲಿ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿ ಆಡುವ ನಿರೀಕ್ಷೆಯಲ್ಲಿರುವ ರಾಹುಲ್‌ರ ಫಿಟ್ನೆಸ್‌ ತಂಡದ ತಲೆಬಿಸಿಗೆ ಕಾರಣವಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ರಾಹುಲ್‌, ಕೆಲ ವಾರಗಳಿಂದ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಅವರು 50 ಓವರ್‌ ಕೀಪಿಂಗ್‌ ಮಾಡಬಲ್ಲರೇ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಅದಕ್ಕೀಗ ಉತ್ತರ ಸಿಕ್ಕಂತೆ ಕಾಣುತ್ತಿದೆ. ಇದೇ ವೇಳೆ ಶನಿವಾರ ಅಭ್ಯಾಸದ ವೇಳೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಹೆಚ್ಚು ಸಮಯ ಎಡಗೈ ವೇಗಿಗಳನ್ನು ಎದುರಿಸಿದ್ದು ಗಮನ ಸೆಳೆಯಿತು.