3ನೇ ಕಿವೀಸ್ ಟೆಸ್ಟ್: ಹರ್ಷಿತ್ ರಾಣಾ ಭಾರತ ತಂಡ ಸೇರ್ಪಡೆ, ಬುಮ್ರಾಗೆ ರೆಸ್ಟ್?

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮುಂಬೈ ಟೆಸ್ಟ್‌ಗೆ ಯುವ ವೇಗಿ ಹರ್ಷಿತ್ ರಾಣಾ ಕಣಕ್ಕಿಳಿಯುವ ಸಾಧ್ಯತೆಯಿದೆ.

Harshit Rana to join India Squad in Mumbai for 3rd Test against New Zealand Jasprit Bumrah likely to get rest kvn

ನವದೆಹಲಿ: ನ್ಯೂಜಿಲೆಂಡ್ ವಿರುದ ನ.1ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಯುವ ವೇಗಿ ಹರ್ಷಿತ್ ರಾಣಾ ಭಾರತ ತಂಡ ಸೇರ್ಪಡೆಗೊಂಡಿದ್ದಾರೆ. ಅವರು ಕಿವೀಸ್ ಸರಣಿಗೆ ಈಗಾಗಲೇ ತಂಡದ ಮೀಸಲು ಆಟಗಾರನಾಗಿದ್ದು, ಮುಂಬೈ ಟೆಸ್ಟ್‌ಗೂ ಮುನ್ನ ಮುಖ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಕಿವೀಸ್ ಸರಣಿ ಬಳಿಕ ಭಾರತ ಆಸ್ಟ್ರೇಲಿಯಾದಲ್ಲಿ ನ.22ರಿಂದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಹೀಗಾಗಿ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಕಿವೀಸ್ ವಿರುದ್ಧ 3ನೇ ಟೆಸ್ಟ್‌ಗೆ ವಿಶ್ರಾಂತಿ ನೀಡಿ, ಅವರ ಬದಲು 22 ವರ್ಷದ ಹರ್ಷಿತ್‌ರನ್ನು ಆಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹರ್ಷಿತ್ ಸದ್ಯ ರಣಜಿಯಲ್ಲಿ ಡೆಲ್ಲಿ ತಂಡದ ಜೊತೆಗಿದ್ದಾರೆ. ಬುಧವಾರ ಮುಂಬೈಗೆ ಆಗಮಿಸಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಬ್ಲಾಕ್ ಮಾಡಿದ್ದೇಕೆ? ಇಬ್ಬರ ನಡುವೆ ಆಗಿದ್ದೇನು?

ಈಗಾಗಲೇ ಸರಣಿ ಸೋತಿರುವ ಭಾರತ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸೋಲುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈ ಚೆಲ್ಲಿದೆ. ಆದರೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗಮನದಲ್ಲಿಟ್ಟುಕೊಂಡು ಇನ್ನುಳಿದ 6 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ಒತ್ತಡಕ್ಕೆ ಟೀಂ ಇಂಡಿಯಾ ಸಿಲುಕಿದೆ.

ಮುಂಬೈ ಟೆಸ್ಟ್‌ಗೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸರ್ಫರಾಜ್ ಖಾನ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ಲೀಪ್ ಯಾದವ್, ವಾಷಿಂಗ್ಟನ್ ಸುಂದರ್ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಹರ್ಷಿತ್ ರಾಣಾ

ರೀಟೈನ್‌ಗೆ ಕ್ಷಣಗಣನೆ ಬೆನ್ನಲ್ಲೇ ಸ್ಪೋಟಕ ಶತಕ ಸಿಡಿಸಿದ ಆರ್‌ಸಿಬಿ ಆಟಗಾರ! ಬೆಂಗಳೂರು ಫ್ರಾಂಚೈಸಿ ಮೇಲೆ ಎಲ್ಲರ ಕಣ್ಣು

3ನೇ ಟೆಸ್ಟ್‌ ಗೂ ಕೇನ್ ವಿಲಿಯಮ್ಸನ್ ಅಲಭ್ಯ

ಮುಂಬೈ: ತೊಡೆ ಸಂಧು ನೋವಿನಿಂದ ಬಳಲುತ್ತಿರುವ ನ್ಯೂಜಿಲೆಂಡ್‌ನ ಪ್ರಮುಖ ಬ್ಯಾಟರ್ ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ 3ನೇ ಪಂದ್ಯಕ್ಕೂ ಗೈರಾಗಲಿದ್ದಾರೆ. 34 ವರ್ಷದ ಕೇನ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಅವರು ಅಲ್ಪ ಚೇತರಿಸಿಕೊಂಡಿದ್ದರೂ ಸಂಪೂರ್ಣ ಫಿಟ್ ಆಗದ ಕಾರಣ 3ನೇ ಪಂದ್ಯದಿಂದ ಹೊರಬಿದ್ದಿದ್ದಾರೆ.
 

Latest Videos
Follow Us:
Download App:
  • android
  • ios