ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಂದೆಯಾದ ಸಂಭ್ರಮದಲ್ಲಿದ್ದಾರೆ. ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇದರ ಜೊತೆಗೆ ಪತ್ನಿ ನತಾಶ ಸ್ಟಾಂಕೋವಿಚ್‌ಗೆ ಬೆಲೆ ಕಟ್ಟಲಾಗದ ಉಡುಗೊರೆ ನೀಡಿದ್ದ ಧನ್ಯವಾದ ಹೇಳಿದ್ದಾರೆ.

ಸೂರತ್(ಆ.03): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ನಟಿ ನತಾಶ ಸ್ಟಾಂಕೋವಿಚ್ ಸಂಭ್ರಮ ಇಮ್ಮಡಿಯಾಗಿದೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ನತಾಶ ಇದೀಗ ಸುಂದರ ಕುಟಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಾಂಡ್ಯ ಮಗುವಿನ್ನು ಎತ್ತಿಕೊಂಡಿದ್ದರೆ, ನತಾಶ ಹೂಗುಚ್ಚ ಹಿಡಿದಿರುವ ಫೋಟೋ ವೈರಲ್ ಆಗಿದೆ.

View post on Instagram

ತಂದೆಯಾದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ!

ನತಾಶ ಫೋಟೋ ಹಂಚಿಕೊಂಡ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಪ್ರತಿಯಾಗಿ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಬೆಲೆ ಕಟ್ಟಲಾಗದ ಉಡುಗೊರೆ ನೀಡಿದ್ದ ಧನ್ಯವಾದ ಹೇಳಿದ್ದಾರೆ. 

View post on Instagram

ಜುಲೈ 30 ರಂದು ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಮ್ಮ ಬುದುಕಿನ ಪಯಣದಲ್ಲಿ ಮುದ್ದಾದ ಗಂಡು ಮಗುವಿನ ಆಗಮನವಾಗಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದರು. 

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಮೇ ತಿಂಗಳಲ್ಲಿ ಪಾಂಡ್ಯ ನಮ್ಮ ಕುಟುಂಬದ ಕುಡಿಯನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ ಎಂದಿದ್ದರು. ಬಳಿಕ ಪ್ರೆಗ್ನೆಸಿ ಫೋಟೋ ಶೂಟ್ ಸೇರಿದಂತೆ ಹಲವು ಫೋಟೋಗಳನ್ನು ಪಾಂಡ್ಯ ರಿವೀಲ್ ಮಾಡಿದ್ದರು.

2020ರ ಹೊಸ ವರ್ಷದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಅಚ್ಚರಿ ನೀಡಿದ್ದರು. ದುಬೈನಲ್ಲಿ ಇವರಿಬ್ಬರು ನಿಶ್ಚಿತಾರ್ಥ್ ಮಾಡಿಕೊಂಡಿದ್ದರು.