Asianet Suvarna News Asianet Suvarna News

Happy Birthday Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗಿಂದು 35ನೇ ಹುಟ್ಟುಹಬ್ಬದ ಸಂಭ್ರಮ

* 35ನೇ ವಸಂತಕ್ಕೆ ಕಾಲಿರಿಸಿದ ರೋಹಿತ್ ಶರ್ಮಾ

* ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂತು ಅಭಿನಂದನೆಗಳ ಮಹಾಪೂರ

* ಟೀಂ ಇಂಡಿಯಾ ನಾಯಕನಿಗೆ ಕೊಹ್ಲಿ ವಿನೂತನವಾಗಿ ಶುಭ ಹಾರೈಸಿದ್ದಾರೆ

Happy Birthday Rohit Sharma Twitter erupts as Team India Skipper Rohit turns 35 kvn
Author
Bengaluru, First Published Apr 30, 2022, 12:37 PM IST | Last Updated Apr 30, 2022, 12:37 PM IST

ಬೆಂಗಳೂರು(ಏ.30): ಟೀಂ ಇಂಡಿಯಾ ನಾಯಕ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Team India Skipper Rohit Sharma turns 35) ಶನಿವಾರ(ಏ.30-2022)ವಾದ ಇಂದು ತಮ್ಮ 35ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಆಧುನಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿರುವ ರೋಹಿತ್ ಶರ್ಮಾ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಸದ್ಯ ರೋಹಿತ್ ಶರ್ಮಾ, 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಬಯೋಬಬಲ್‌ನೊಳಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ರೋಹಿತ್ ಶರ್ಮಾ ಅವರಿಗೆ ವಿನೂತನವಾಗಿ ಶುಭ ಕೋರಿದೆ. ರೋಹಿತ್ ಶರ್ಮಾ ಆಡಿದ ಬೆಸ್ಟ್ ಇನಿಂಗ್ಸ್‌ಗಳ ವಿಡಿಯೋದೊಂದಿಗೆ ವಿನೂತನವಾಗಿ ಹಿಟ್‌ಮ್ಯಾನ್‌ಗೆ ಶುಭ ಕೋರಿದೆ.

ರೋಹಿತ್ ಶರ್ಮಾ ಹುಟ್ಟುಹಬ್ಬಕ್ಕೆ ಐಸಿಸಿ, ಬಿಸಿಸಿಐ ಮಾತ್ರವಲ್ಲದೇ ಹಲವು ಹಿರಿ-ಕಿರಿಯ ಕ್ರಿಕೆಟಿಗರು, ಅಪಾರ ಅಭಿಮಾನಿಗಳು ಕೂಡಾ ವಿನೂತನವಾಗಿ ಶುಭ ಹಾರೈಸಿದ್ದಾರೆ. 

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಅವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ನಿಧಾನವಾಗಿ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ರೋಹಿತ್ ಶರ್ಮಾ, ಸದ್ಯ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ವೈಟ್‌ ಬಾಲ್ ಓಪನರ್ ಎನಿಸಿಕೊಂಡಿದ್ದಾರೆ. ಇದುವರೆಗೂ ರೋಹಿತ್ ಶರ್ಮಾ 227 ಏಕದಿನ ಪಂದ್ಯಗಳನ್ನಾಡಿ 29 ಶತಕ, 43 ಅರ್ಧಶತಕ ಸಹಿತ 9,205 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ 3 ದ್ವಿಶತಕ ಬಾರಿಸಿದ ಏಕೈಕ ಬ್ಯಾಟರ್ ಎನ್ನುವ ಶ್ರೇಯ ಕೂಡಾ ರೋಹಿತ್ ಶರ್ಮಾ ಹೆಸರಿನಲ್ಲಿದೆ.

IPL 2022: ಮೊದಲ ಗೆಲುವು ಕಾಣುತ್ತಾ ಮುಂಬೈ ಇಂಡಿಯನ್ಸ್‌?

ಇನ್ನು ಭಾರತ ಪರ 111 ಟಿ20 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ, 4 ಶತಕ ಹಾಗೂ 22 ಅರ್ಧಶತಕ ಸಹಿತ 2,615 ರನ್‌ ಬಾರಿಸಿದ್ದಾರೆ. ಇನ್ನು 38 ಟೆಸ್ಟ್ ಪಂದ್ಯಗಳನ್ನಾಡಿ 7 ಶತಕ ಹಾಗೂ 12 ಅರ್ಧಶತಕ ಸಹಿತ 2,615 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೇ, ಉತ್ತಮ ನಾಯಕನಾಗಿಯೂ ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಪಡೆ ಕೊಂಚ ವಿಫಲವಾಗಿದ್ದರೂ ಸಹಾ, ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಚಾಂಪಿಯನ್ ಆದ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. 

Latest Videos
Follow Us:
Download App:
  • android
  • ios