Asianet Suvarna News Asianet Suvarna News

WPL 2023: ಟೂರ್ನಿಯಿಂದಲೇ ಹೊರಬಿದ್ದ ಗುಜರಾತ್ ಜೈಂಟ್ಸ್‌ ನಾಯಕಿ ಬೆಥ್ ಮೂನಿ..! ಭಾವನಾತ್ಮಕ ಸಂದೇಶ ರವಾನೆ

WPL ಟೂರ್ನಿಯಿಂದ ಆಸ್ಟ್ರೇಲಿಯಾದ ಬೆಥ್ ಮೂನಿ ಔಟ್
ಬೆಥ್ ಮೂನಿ ಗುಜರಾತ್ ಜೈಂಟ್ಸ್ ತಂಡದ ನಾಯಕಿ
ಉದ್ಘಾಟನಾ ಪಂದ್ಯದ ವೇಳೆ ಮೀನಖಂಡ ನೋವಿಗೆ ಒಳಗಾಗಿದ್ದ ಮೂನಿ

Gujarat Giants Skipper Beth Mooney Ruled Out Of WPL 2023 Due To Calf Injury kvn
Author
First Published Mar 9, 2023, 3:16 PM IST | Last Updated Mar 9, 2023, 3:16 PM IST

ಮುಂಬೈ(ಮಾ.09): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದ್ದು, ರನ್ ಮಳೆ ಹರಿಯುತ್ತಿದೆ. ಇದೆಲ್ಲದರ ನಡುವೆ ಅದಾನಿ ಗುಜರಾತ್ ಜೈಂಟ್ಸ್‌ ಪಾಳಯದಲ್ಲಿ ಬಿಕ್ ಶಾಕ್ ಎದುರಾಗಿದ್ದು, ಚಾಂಪಿಯನ್ ನಾಯಕಿ ಬೆಥ್ ಮೂನಿ, ಇದೀಗ ಸಂಪೂರ್ಣ ಸಂಪೂರ್ಣ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 

ಹೌದು, ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈ ನೀಡಿದ್ದ ಸವಾಲಿನ ಗುರಿ ಬೆನ್ನತ್ತಲು ಕ್ರೀಸ್‌ಗಿಳಿದ ಬೆಥ್‌ ಮೂನಿ,  ಮೀನ ಖಂಡದ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದರು. ಇದಾದ ಬಳಿಕ ಬೆಥ್ ಮೂನಿ ಟ್ರೈನಿಂಗ್ ಶಿಬಿರದಲ್ಲಿ ಪಾಲ್ಗೊಂಡರಾದರೂ, ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಾಲ್ಕರಿಂದ ಆರು ವಾರಗಳ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಬೆಥ್ ಮೂನಿ ಸಂಪೂರ್ಣ ಫಿಟ್ನೆಸ್ ಸಾಧಿಸಲು ಅವರು ಪುನಶ್ಚೇತನ ಶಿಬಿರದಲ್ಲಿ

"ನಾನು ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದಾನಿ ಗುಜರಾತ್ ಜೈಂಟ್ಸ್‌ ಜತೆಗಿರಲು ಎದುರು ನೋಡುತ್ತಿದ್ದೆ. ಆದರೆ ಕ್ರೀಡೆಯಲ್ಲಿ ಗಾಯಗೊಳ್ಳುವುದು ಸಹಜ. ಗಾಯದಿಂದಾಗಿ ಈ ಟೂರ್ನಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ತುಂಬಾ ನಿರಾಸೆಯಾಗುತ್ತಿದೆ. ನಾನು ಟೂರ್ನಿಯಿಂದ ಹೊರಬಿದ್ದರೂ, ನಮ್ಮ ತಂಡದ ಪ್ರದರ್ಶನದ ಮೇಲೆ ಒಂದು ಕಣ್ಣಿಟ್ಟಿರುತ್ತೇನೆ. ಈ ಬಾರಿ ನಾನು ಮೈದಾನದಿಂದ ಹೊರಬಿದ್ದರೂ ಸಹಾ, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿಯೇ ಕಮ್‌ಬ್ಯಾಕ್ ಮಾಡುತ್ತೇನೆ. ಮುಂದಿನ ಆವೃತ್ತಿಯ ಡಬ್ಲ್ಯೂಪಿಎಲ್‌ ಆಡಲು ತುದಿಗಾಲಿನಲ್ಲಿ ನಿಂತಿರುತ್ತೇನೆ. ಇನ್ನುಳಿದ ಪಂದ್ಯಗಳಿಗೆ ಅದಾನಿ ಗುಜರಾತ್ ಜೈಂಟ್ಸ್‌ ತಂಡಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಬೆಥ್ ಮೂನಿ ಸಂದೇಶ ರವಾನಿಸಿದ್ದಾರೆ.

ಆಸ್ಟ್ರೇಲಿಯಾದ ಬೆಥ್ ಮೂನಿ, ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಅದಾನಿ ಗುಜರಾತ್ ಜೈಂಟ್ಸ್ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾ ಮೂಲದ ಲೌರಾ ವೋಲ್ವರ್ಥ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಲೌರಾ ವೋಲ್ವರ್ಥ್‌ ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರಿಣಗಳ ಪಡೆ ಫೈನಲ್‌ಗೇರುವಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸಿದ್ದರು.

WPL 2023 ಗೆಲುವು ಹುಡುಕುತ್ತಿರುವ ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು, ಕೊನೆಯ ಸ್ಥಾನಕ್ಕೆ ಜಾರಿದ ಬೆಂಗಳೂರು!

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೌರಾ ವೋಲ್ವರ್ಥ್‌ ಆಡಿದ ಆರು ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ, ದಕ್ಷಿಣ ಆಫ್ರಿಕಾ ಪರ ಗರಿಷ್ಠ ರನ್ ಬಾರಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. ತಮ್ಮ ಸ್ಥಿರಪ್ರದರ್ಶನದ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್‌ಗೇರಿಸಿದ್ದರು. ಆದರೆ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿತ್ತು.

ಬೆಥ್ ಮೂನಿ ಟೂರ್ನಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಸ್ನೆಹ್ ರಾಣಾಗೆ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಪಟ್ಟ ಕಟ್ಟಲಾಗಿದ್ದು, ಆಸ್ಟ್ರೇಲಿಯಾದ ಆಲ್ರೌಂಡರ್ ಆಶ್ಲೆ ಗಾರ್ಡ್ನರ್ ಉಪನಾಯಕಿಯಾಗಿ ನೇಮಕವಾಗಿದ್ದಾರೆ.

Latest Videos
Follow Us:
Download App:
  • android
  • ios