ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜರಾದ ಕಪಿಲ್‌ ದೇವ್‌, ರವಿಶಾಸ್ತ್ರಿ ಸೇರಿದಂತೆ ಹಲವು ಮಂದಿ ಮೊದಲ ಕೋವಿಡ್‌ 19 ಲಸಿಕೆ ಪಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ/ರಿಯೋ(ಮಾ.04): ಭಾರತದ ವಿಶ್ವಕಪ್‌ ವಿಜೇತ ನಾಯಕ, ದಿಗ್ಗಜ ಕ್ರಿಕೆಟಿಗ ಕಪಿಲ್‌ ದೇವ್‌ ಹಾಗೂ ಫುಟ್ಬಾಲ್‌ ದಂತಕಥೆ ಪೀಲೆ ಬುಧವಾರ ಕೋವಿಡ್‌ ಲಸಿಕೆ ಪಡೆದರು. 

62 ವರ್ಷದ ಕ್ರಿಕೆಟ್ ದಿಗ್ಗಜ ಕಪಿಲ್‌ ದೇವ್ ದೆಹಲಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದರು. ಈ ಮೊದಲು ಟೀಂ ಇಂಡಿಯಾ ಹೆಡ್‌ ಕೋಚ್‌ ರವಿಶಾಸ್ತ್ರಿ ಕೂಡಾ ಕೋವಿಡ್‌ ಲಸಿಕೆ ಪಡೆದಿದ್ದರು. 58 ವರ್ಷದ ರವಿಶಾಸ್ತ್ರಿ ಅಹಮದಾಬಾದ್‌ನಲ್ಲಿ ಕೋವಿಡ್ ಲಸಿಕೆ ಪಡೆದಿದ್ದರು. 

ಕೊರೋನಾ ಲಸಿಕೆ ಪಡೆದ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ!

Scroll to load tweet…
Scroll to load tweet…

ಇನ್ನು 80 ವರ್ಷದ ಫುಟ್ಬಾಲ್ ದಂತಕಥೆ ಪೀಲೆ ಬ್ರೆಜಿಲ್‌ನ ರಾಜಧಾನಿ ರಿಯೋ ಡಿ ಜನೈರೋದಲ್ಲಿ ಮೊದಲ ಡೋಸ್‌ ಲಸಿಕೆ ಪಡೆದು, ಮಾಸ್ಕ್‌ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.