ಯುವರಾಜ್ ಸಿಂಗ್ ವಿದಾಯದ ಹೇಳಿದ  5 ತಿಂಗಳ ಬಳಿಕ ಇದೀಗ ಟೀಂ ಇಂಡಿಯಾದಲ್ಲಿ ಜ್ಯೂನಿಯರ್ ಯುವರಾಜ್ ಸಿಂಗ್ ಸ್ಥಾನ ಪಡೆದಿದ್ದಾನೆ. ಈತನ ಸ್ಫೋಟಕ ಬ್ಯಾಟಿಂಗ್ ವಿಡಿಯೋ ನೋಡಿದ ಅಭಿಮಾನಿಗಳು ಹೊಸ ಬಿರುದು ನೀಡಿದ್ದಾರೆ. ಟೀಂ ಇಂಡಿಯಾದ ಜ್ಯೂ.ಯುವಿ ವಿಡಿಯೋ ಹಾಗೂ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ. 

ನವದೆಹಲಿ(ನ.03): ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕ್ರಿಕೆಟ್‌ಗೆ ವಿದಾಯ ಹೇಳಿ 5 ತಿಂಗಳು ಕಳೆದಿದೆ. ಯುವರಾಜ್ ಸಿಂಗ್ ಟೀಂ ಇಂಡಿಯಾದಿಂದ ದೂರ ಉಳಿದು ಹಲವು ವರ್ಷಗಳೇ ಆಗಿದೆ. ಇದುವರೆಗೂ ಯುವಿ ಸ್ಥಾನ ತುಂಬಬಲ್ಲ ಆಟಗಾರ ತಂಡಕ್ಕೆ ಸಿಕ್ಕಿರಲಿಲ್ಲ. ಇದೀಗ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯಕ್ಕೆ ಯುವರಾಜ್ ಸಿಂಗ್ ರೀತಿಯಲ್ಲೇ ಸಿಕ್ಸರ್ ಬಾರಿಸೋ, ಯುವಿ ರೀತಿಯ ಬ್ಯಾಟಿಂಗ್ ಶೈಲಿ ಹಾಗೂ ಆಕ್ರಮಣಕಾರಿ ಮನೋಭಾವ ಹೊಂದಿರುವ ಯುವ ಕ್ರಿಕೆಟಿಗ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಈತ ಬೇರೆ ಯಾರು ಅಲ್ಲ, ಮುಂಬೈ ಯುವ ಬ್ಯಾಟ್ಸ್‌ಮನ್ ಶಿವಂ ದುಬೆ.

Scroll to load tweet…

ಇದನ್ನೂ ಓದಿ: INDvBAN ದೆಹಲಿ ಟಿ20: ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್, RCB ಕ್ರಿಕೆಟಿಗನಿಗೆ ಸ್ಥಾನ!

ಬಾಂಗ್ಲಾದೇಶ ವಿರುದ್ದದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಶಿವಂ ದುಬೆ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿತ್ತು. ಈ ವಿಡಿಯೋ ನೋಡಿದ ಅಭಿಮಾನಿಗಳು, ಭಾರತ ತಂಡದ ಜ್ಯೂನಿಯರ್ ಯುವರಾಜ್ ಎಂದು ಬಿರುದು ನೀಡಿದ್ದಾರೆ. ಯುವಿ ರೀತಿಯಲ್ಲಿ ಸಿಕ್ಸರ್ ಸಿಡಿಸೋ ಶಿವಂ ದುಬೆ ಮೇಲೆ ಇದೀಗ ನಿರೀಕ್ಷೆಗಳು ಹೆಚ್ಚಾಗಿದೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಶಿವಂ ದುಬೆ ಇದೀಗ ಬಾಂಗ್ಲಾ ವಿರುದ್ದ ಮಿಂಚಲು ರೆಡಿಯಾಗಿದ್ದಾರೆ. ಶಿವಂ ದುಬೆ ಕುರಿತು ಅಭಿಮಾನಿಳು ನೀಡಿದ ಪ್ರತಿಕ್ರಿಯೆ ಇಲ್ಲಿದೆ.


Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…