* ಟೀಂ ಇಂಡಿಯಾ ಮಾಜಿ ನಾಯಕ ಧೋನಿಯ ಕಾಲೆಳೆದ ಯುವರಾಜ್ ಸಿಂಗ್* ಎಂ ಎಸ್ ಧೋನಿಗೆ ಸಿಕ್ಕಷ್ಟು ಬೆಂಬಲ ಮತ್ಯಾವ ಆಟಗಾರನಿಗೂ ಸಿಕ್ಕಿಲ್ಲ* 2011 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಸಿಂಗ್
ಬೆಂಗಳೂರು(ಮೇ.05): ಯುವರಾಜ್ ಸಿಂಗ್ (yuvraj Singh) ಟಿ20 ಕ್ರಿಕೆಟ್ನಲ್ಲಿ ಆರು ಬಾಲ್ಗೆ ಆರು ಸಿಕ್ಸ್ ಸಿಡಿಸಿ ವಿಶ್ವದಾಖಲೆ ಬರೆದ ಆಟಗಾರ. ಧೋನಿ ನಾಯಕತ್ವದಲ್ಲಿ ಗೆದ್ದ ಎರಡು ವಿಶ್ವಕಪ್ಗಳ ಹೀರೋ. ಹಾಗೆ ಧೋನಿ ನಾಯಕತ್ವದಲ್ಲಿ ಎರಡು ವಿಶ್ವಕಪ್ ಸೋಲಲು ಈತನೇ ಕಾರಣ ಅನ್ನೋದನ್ನು ಯಾರೂ ಹೇಳಲ್ಲ. ಹೇಳೋ ಧೈರ್ಯವನ್ನೂ ಮಾಡಲ್ಲ. ಯಾಕಂದ್ರೆ ಸೋತ ವಿಶ್ವಕಪ್ಗಳಿಗಿಂತ ಗೆದ್ದ ವಿಶ್ವಕಪ್ಗಳು ಎಲ್ಲವನ್ನೂ ಮರೆ ಮಾಚುತ್ತೆ.
ಈಗ ಇದೇ ಯುವರಾಜ್ ಸಿಂಗ್ ಒಂದು ಬಿಗ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ನಿವೃತ್ತಿ ಸಮಯದಲ್ಲಿ ಎಂ ಎಸ್ ಧೋನಿಗೆ ಸಿಕ್ಕಷ್ಟು ಬೆಂಬಲ ಮತ್ಯಾವ ಆಟಗಾರನಿಗೂ ಸಿಕ್ಕಿಲ್ಲ ಅಂತ ಹೇಳಿದ್ದಾರೆ. ಅಂದರೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಸಮಯದಲ್ಲಿ ಕೋಚ್ ರವಿಶಾಸ್ತ್ರಿ(Ravi Shastri) ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಬೆಂಬಲಿಸಿದ್ರು. ಹಾಗಾಗಿ ಅವರು ಅಭದ್ರತೆಯಲ್ಲಿ ಟೀಂ ಇಂಡಿಯಾ (Team India) ಪರ ಆಡಲಿಲ್ಲ. ಅವರು ಆಡುವಷ್ಟು ಕಾಲ ಆಡಿ ರಿಟೈರ್ಡ್ ಆದ್ರು ಅನ್ನೋದು ಯುವಿ ಮಾತಿನ ಒಳ ಮರ್ಮಾ.
ಯುವರಾಜ್ ಈ ರೀತಿ ಹೇಳೋ ಮೂಲಕ ಒಂದು ಬಿಗ್ ಸಿಕ್ರೇಟ್ ಅನ್ನ ಕ್ರಿಕೆಟ್ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಅದೇ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ. ಹೌದು, ಈ ಸಂಬಂಧ ಎಷ್ಟು ಗಟ್ಟಿಯಾಗಿದೆ ಅನ್ನೋದು ಅದೆಷ್ಟೋ ಮಂದಿಗೆ ಗೊತ್ತಿಲ್ಲ ಕಂಡ್ರಿ. ಯುವಿಯ ಈ ಒಂದು ಸ್ಟೇಟ್ಮೆಂಟ್ ಎಲ್ಲವನ್ನೂ ಬಟ ಬಯಲು ಮಾಡಿದೆ.
ಸ್ಟಾರ್ ಆಟಗಾರರು ಡ್ರಾಪ್, ವಿಶ್ವಕಪ್ ಟೀಂನಲ್ಲಿ ಕೊಹ್ಲಿಗೆ ಸ್ಥಾನ:
2011ರ ಏಕದಿನ ವಿಶ್ವಕಪ್ ಆಡಲು ಅದೆಷ್ಟೋ ಆಟಗಾರರು ಕಾಯುತ್ತಿದ್ದರು. ಮೂರು ಟಿ20 ವಿಶ್ವಕಪ್ಗಳನ್ನಾಡಿದ್ದ ರೋಹಿತ್ ಶರ್ಮಾ ಸಹ ಒನ್ಡೇ ವರ್ಲ್ಡ್ಕಪ್ ಆಡಲು ಕಾಯ್ತಾ ಕುಳಿತಿದ್ದರು. ಆದ್ರೆ ವರ್ಲ್ಡ್ಕಪ್ ಟೀಮ್ನಲ್ಲಿ ಸ್ಥಾನ ಪಡೆದಿದ್ದು ಮಾತ್ರ ಕಿಂಗ್ ಕೊಹ್ಲಿ. ಕಾರಣ ಧೋನಿ ಕೃಪಕಟಾಕ್ಷ. 2008ರ ಅಂಡರ್-19 ವಿಶ್ವಕಪ್ ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ, ಟೀಂ ಇಂಡಿಯಾಗೆ ಎಂಟ್ರಿಯಾಗಿದ್ದು ಧೋನಿ ನಾಯಕತ್ವದಲ್ಲೇ. ಕೊಹ್ಲಿಯನ್ನ ಬೆಳೆಸಿದ್ದು ಧೋನಿಯೇ ಅನ್ನೋದ್ರಲ್ಲಿ ಡೌಟೇ ಬೇಡ.
ಧೋನಿಗೆ ಬೇಡವಾಗಿತ್ತು, ಕೊಹ್ಲಿಗೆ ಬೇಕಿತ್ತು:
2016ರ ಟಿ20 ವಿಶ್ವಕಪ್ ಬಳಿಕ ಎಂಎಸ್ ಧೋನಿ ನಿಧಾನವಾಗಿ ತೆರೆಮರೆಗೆ ಸರಿಯುತ್ತಾ ಬಂದ್ರು. ಟೆಸ್ಟ್, ಒನ್ಡೇ, ಟಿ20 ಹೀಗೆ ಒಂದೊಂದಾಗಿ ಎಲ್ಲಾ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ರು. 2018ರಲ್ಲಿ ನಿವೃತ್ತಿಯಾಗೋ ಮನಸ್ಸು ಮಾಡಿದ್ದರು. ಆದ್ರೆ ಕಿಂಗ್ ಕೊಹ್ಲಿಗೆ ಧೋನಿ ಬೇಕಿತ್ತು. 2019ರ ಏಕದಿನ ವಿಶ್ವಕಪ್ ಗೆಲ್ಲಬೇಕು ಅಂದ್ರೆ ಮಾಸ್ಟರ್ ಮೈಂಡ್ ಮಹಿ ಟೀಮ್ನಲ್ಲಿ ಇರಬೇಕು ಅನ್ನೋದು ಆಗಿನ ನಾಯಕ ಕೊಹ್ಲಿ ಮತ್ತು ಕೋಚ್ ಶಾಸ್ತ್ರಿ ಅಭಿಮತವಾಗಿತ್ತು. ಹಾಗಾಗಿ ಅವರಿಬ್ಬರು ನಿವೃತ್ತಿ ಅಂಚಿನಲ್ಲಿದ್ದ ಧೋನಿಯನ್ನ ಸದಾ ಬೆಂಬಲಿಸಿಕೊಂಡು ಬಂದರು. ಹಾಗಾಗಿಯೇ ಮಹಿಗೆ ಎಲ್ಲೂ ಅಭದ್ರತೆ ಕಾಡಲಿಲ್ಲ.
IPL 2022 ಐವರಿಗೆ ಕಂಟಕವಾಗಲಿದೆ ಈ ಬಾರಿಯ ಐಪಿಎಲ್..!
ಧೋನಿ ತಮ್ಮನ್ನ ಬೆಳೆಸಿದ್ದಕ್ಕೆ ಕೊಹ್ಲಿ ಋಣ ತೀರಿಸಿದ್ರು. ಆದರೆ ಯುವಿ, ವೀರೂ, ಗೌತಿ ಹೀಗೆ ಅನೇಕ ಆಟಗಾರರಿಗೆ ನಿವೃತ್ತಿ ಅಂಚಿನಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಿಲ್ಲ. ಹಾಗಾಗಿ ಅವರು ಬೇಗ ರಿಟೈರ್ಡ್ ಆದ್ರು. ಇದೇ ಬೇಸರದಲ್ಲಿ ಯುವರಾಜ್ ಈ ಹೇಳಿಕೆ ನೀಡಿದ್ದಾರೆ ಅನ್ನೋದು ಕ್ರಿಕೆಟ್ ಜಗತ್ತಿಗೆ ಗೊತ್ತಿಲ್ಲದ ವಿಷಯವೇನು ಅಲ್ಲ ಬಿಡಿ.
