Asianet Suvarna News Asianet Suvarna News

ಟೀಂ ಇಂಡಿಯಾ ದಾಳಿಗೆ ಇಂಗ್ಲೆಂಡ್ ತತ್ತರ, 183 ರನ್‌ಗೆ ರೂಟ್ ಸೈನ್ಯ ಆಲೌಟ್

  • ಮೊಹಮ್ಮದ್ ಶಮಿ, ಬುಮ್ರಾ ದಾಳಿಗೆ ಇಂಗ್ಲೆಂಡ್ ತಬ್ಬಿಬ್ಬು
  • ರನ್‌ಗೆ ಇಂಗ್ಲೆಂಡ್ 183 ಆಲೌಟ್,  ಟೀಂ ಇಂಡಿಯಾಗ ಮೇಲುಗೈ
  • ಏಕಾಂಗಿ ಹೋರಾಟ ನಡೆಸಿದ ನಾಯಕ ಜೋ ರೂಟ್
ENGvsIND Shami bumrah help Team India to restrict england by 183 runs in 1st test first innings ckm
Author
Bengaluru, First Published Aug 4, 2021, 9:57 PM IST
  • Facebook
  • Twitter
  • Whatsapp

ನಾಟಿಂಗ್‌ಹ್ಯಾಮ್(ಆ.04): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ದಾಳಿಗೆ ಇಂಗ್ಲೆಂಡ್ 183 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಲೆಕ್ಕಾಚಾರವನ್ನು ಟೀಂ ಇಂಡಿಯಾ ವೇಗಿಗಳು ಉಲ್ಟಾ ಮಾಡಿದರು. ರೋರಿ ಬರ್ನ್ಸ್ ಶೂನ್ಯ ಸುತ್ತಿದರೆ, ಜ್ಯಾಕ್ ಕ್ರಾವ್ಲಿ 27 ರನ್ ಸಿಡಿಸಿ ಔಟಾದರು. ಡೋಮಿನಿಕ್ ಸಿಬ್ಲಿ 18 ರನ್ ಸಿಡಿಸಿ ಔಟಾದರು. 66 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ಸ್ ಆಸರೆಯಾದರು.

ಜಾನಿ ಬೈರ್‌ಸ್ಟೋ 29 ರನ್ ಸಿಡಿಸಿ ಔಟಾದರು. ಡೆನಿಯಲ್ ಲಾರೆನ್ಸ್, ಜೋಸ್ ಬಟ್ಲರ್ ಹಾಗೂ ಒಲಿ ರಾಬಿನ್ಸನ್ ಅಬ್ಬರಿಸುವ ಮೊದಲೇ ಪೆವಿಲಿಯನ್ ಸೇರಿಕೊಂಡರು. ಏಕಾಂಗಿ ಹೋರಾಟ ನೀಡಿದ ರೂಟ್ ಅರ್ಧಶತಕ ಸಿಡಿಸಿ ಮಿಂಚಿದರು. ದಿಟ್ಟ ಹೋರಾಟ ನೀಡಿದ ರೂಟ್ 64 ರನ್ ಸಿಡಿಸಿ ಔಟಾದರು. 

ಸ್ಟುವರ್ಟ್ ಬ್ರಾಡ್ ಕೇವಲ 4 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಸ್ಯಾಮ್ ಕುರನ್ ಹಾಗೂ ಜೇಮ್ಸ್ ಆ್ಯಂಡರ್ಸ್ ಹೋರಾಟ ನೀಡಿದರು. ಕುರನ್ ಅಜೇಯ 27 ರನ್ ಸಿಡಿಸಿದರು. ಆದರೆ ಆ್ಯಂಡರ್ಸನ್  1 ರನ್ ಸಿಡಿಸಿ ಔಟಾದರು. ಈ ಮೂಲಕ ಇಂಗ್ಲೆಂಡ್ 183 ರನ್‌ಗೆ ಆಲೌಟ್ ಆಯಿತು.  

ಜಸ್ಪ್ರೀತ್ ಬುಮ್ರಾ 4, ಮೊಹಮ್ಮದ್ ಶಮಿ ವಿಕೆಟ್ ಕಬಳಿಸಿದರು. ಶಾರ್ದೂಲ್ ಠಾಕೂರ್ 2 ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಕಬಳಿಸಿದರು.

Follow Us:
Download App:
  • android
  • ios