ದಿಢೀರ್ 2 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಕೆಎಎಲ್ ರಾಹುಲ್ ಅರ್ಧಶತಕದ ಆಸರೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ 2 ಟೆಸ್ಟ್ ಪಂದ್ಯ

ಲಂಡನ್(ಆ.12): ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಿಢೀರ್ 2 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ ಬೆನ್ನಲ್ಲೇ ಚೇತೇಶ್ವರ್ ಪೂಜಾರ ವಿಕೆಟ್ ಪತನ ತಂಡಕ್ಕೆ ಕೊಂಚ ಹಿನ್ನಡೆ ತಂದಿದೆ. ಆದರೆ ಕೆಎಲ್ ರಾಹುಲ್ ಸಿಡಿಸಿದ ಅರ್ಧಶತಕದಿಂದ ಭಾರತ ಮತ್ತೆ ದಿಟ್ಟ ಹೋರಾಟ ಮುಂದುವರಿಸಿದೆ.

INDvsENG:ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ, ಶತಕ ದಾಟಿದ ಟೀಂ ಇಂಡಿಯಾ!

ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 126 ರನ್ ಜೊತೆಯಾಯ ನೀಡಿದರು. ರೋಹಿತ್ ಶರ್ಮಾ 83 ರನ್ ಕಾಣಿಕೆ ನೀಡಿದರು. ಜೇಮ್ಸ್ ಆ್ಯಂಡರ್ಸ್‌ ಎಸೆತದಲ್ಲಿ ರೋಹಿತ್ ವಿಕೆಟ್ ಕೈಚೆಲ್ಲಿದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ ಕೂಡ ಪೆವಿಲಿಯನ್ ಸೇರಿಕೊಂಡರು. ಪೂಜಾರ 9 ರನ್ ಸಿಡಿಸಿ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು. 

ಟೀಂ ಇಂಡಿಯಾ ದಿಢೀರ್ 2 ವಿಕೆಟ್ ಕಳೆದುಕೊಂಡಿತು. ಆದರೆ ಕೆಎಲ್ ರಾಹುಲ್ ದಿಟ್ಟ ಹೋರಾಟ ಟೀಂ ಇಂಡಿಯಾಗೆ ನೆರವಾಯಿತು. ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಔಟಾದರು. 150 ರನ್‌ಗೆ ಟೀಂ ಇಂಡಿಯಾ 2ನೇ ವಿಕೆಟ್ ಕಳೆದುಕೊಂಡಿತು. 

INDvsENG 2ನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್; ಟೀಂ ಇಂಡಿಯಾದಲ್ಲಿ 1 ಬದಲಾವಣೆ!

ಟೀ ಬ್ರೇಕ್ ವೇಳೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿದೆ. ಇದೀಗ ಅಂತಿಮ ಸೆಶನ್ ಟೀಂ ಇಂಡಿಯಾಗೆ ಮುಖ್ಯವಾಗಿದೆ. ಕಾರಣ ಈ ಸೆಶನ್‌ನಲ್ಲಿ ರನ್ ಜೊತೆ ವಿಕೆಟ್ ಕೂಡ ಉಳಿಸಿಕೊಳ್ಳಬೇಕಿದೆ. ಹೀಗಾದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾಗೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿದೆ