Asianet Suvarna News Asianet Suvarna News

ENGvsING:ಮೊದಲ ಓವರ್‌ನಲ್ಲೇ ಟೀಂ ಇಂಡಿಯಾ ಮೇಲುಗೈ; ಬುಮ್ರಾ ದಾಳಿಗೆ ಆರಂಭಿಕ ಔಟ್!

  • ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ
  • ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆಘಾತ
  • ಮೊದಲ ಓವರ್‌ನಲ್ಲಿ ಇಂಗ್ಲೆಂಡ್ ವಿಕೆಟ್ ಪತನ
ENGvsIND England lost first wicket in First over against team India trent bridge test ckm
Author
Bengaluru, First Published Aug 4, 2021, 3:51 PM IST
  • Facebook
  • Twitter
  • Whatsapp

ನಾಟಿಂಗ್‌ಹ್ಯಾಮ್(ಆ.04): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಆರಂಭವೇ ರೋಚಕವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿದೆ. ಜಸ್ಪ್ರೀತ್ ಬುಮ್ರಾ ದಾಳಿಗೆ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿದೆ.

INDvsENG ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಟೀಂ ಇಂಡಿಯಾದಲ್ಲಿ ನಾಲ್ವರು ವೇಗಿಗಳಿಗೆ ಸ್ಥಾನ!

ಇಂಗ್ಲೆಂಡ್ ಆರಂಭಿಕ ರೋರಿ ಬರ್ನ್ಸ್ ಖಾತೆ ತೆರೆಯುವ ಮೊದಲೇ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಮೊದಲ ಓವರ್‌ನ 5ನೇ ಎಸೆತದಲ್ಲಿ ರೋರಿ ವಿಕೆಟ್ ಕೈಚೆಲ್ಲಿದರು. ಎಲ್‌ಬಿ ಬಲೆಗೆ ಬಿದ್ದ ಬರ್ನ್ಸ್ ಪೆವಿಲಿಯನ್ ಸೇರಿಕೊಂಡಿದ್ದಾರೆ. ರನ್ ಖಾತೆ ತೆರೆಯುವ ಮೊದಲೇ ಇಂಗ್ಲೆಂಡ್ ಆರಂಭಿಕನ ಕಳೆದುಕೊಂಡು ಆಘಾತ ಅನುಭವಿಸಿದೆ.

ಇಂಗ್ಲೆಂಡ್ ತಂಂಡಕ್ಕೆ ಇದೀಗ ಜ್ಯಾಕ್ ಕ್ರಾವ್ಲೆ ಹಾಗೂ ಡೋಮಿನಿಕ್ ಸಿಬ್ಲಿ ಆಸರೆಯಾಗಿದ್ದಾರೆ. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾಗಿರುವ ಈ ಜೋಡಿಗೆ ಟೀಂ ಇಂಡಿಯಾ ಮತ್ತಷ್ಟು ಒತ್ತಡ ಹೇರುತ್ತಿದೆ.

ಇಂಗ್ಲೆಂಡ್ ತಂಡದಲ್ಲಿ ಅನುಭವಿ ಮಧ್ಯಮ ಕ್ರಮಾಂಕವಿದೆ. ನಾಯಕ ಜೋ ರೂಟ್, ಜಾನಿ ಬೈರ್‌ಸ್ಟೋ ಹಾಗೂ ಡೇನಿಯಲ್ ಲಾರೆನ್ಸ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನು ಜೋಸ್ ಬಟ್ಲರ್, ಸ್ಯಾಮ್ ಕುರನ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಬಲ್ಲರು. ಸದ್ಯ ಟೀಂ ಇಂಡಿಯಾ ಮಾರಕ ದಾಳಿಗೆ ಇಂಗ್ಲೆಂಡ್ ವಿಕೆಟ್ ಉಳಿಸುಕೊಳ್ಳುವತ್ತ ಹೆಚ್ಚು ಗಮನಹರಿಸುತ್ತಿದೆ.

Follow Us:
Download App:
  • android
  • ios