Asianet Suvarna News Asianet Suvarna News

T20 World Cup: Aus vs NZ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಸೀಸ್ ಅಪಾಯಕಾರಿಯೆಂದ ಪೀಟರ್‌ಸನ್‌..!

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ

* ದುಬೈನಲ್ಲಿ ಪ್ರಶಸ್ತಿಗಾಗಿ ನ್ಯೂಜಿಲೆಂಡ್-ಆಸೀಸ್‌ ನಡುವೆ ಕಾದಾಟ

* ಪ್ರಶಸ್ತಿ ಗೆಲ್ಲೋರು ಯಾರೆಂದು ಭವಿಷ್ಯ ನುಡಿದ ಪೀಟರ್‌ಸನ್

England Former Cricketer Kevin Pietersen Backs Australia chances to Lift T20 World Cup 2021 Trophy kvn
Author
Bengaluru, First Published Nov 13, 2021, 4:07 PM IST

ದುಬೈ(ಅ.13): ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ (ICC T20 World Cup Final) ನ್ಯೂಜಿಲೆಂಡ್ ಎದುರು ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ (Kevin Pietersen) ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಹೇಳಲು ಕಾರಣವಾದ ಅಂಶವನ್ನು ಪೀಟರ್‌ಸನ್ ಬಿಚ್ಚಿಟ್ಟಿದ್ದಾರೆ.

2010ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಕೆವಿನ್ ಪೀಟರ್‌ಸನ್, ಆಸ್ಟ್ರೇಲಿಯಾ ಏಕೆ ಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ ಎನ್ನುವುದನ್ನು ತಮ್ಮ ಬ್ಲಾಗ್‌ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೇಲ್ನೋಟಕ್ಕೆ ನ್ಯೂಜಿಲೆಂಡ್ ತಂಡವು ಎಲ್ಲಾ ವಿಭಾಗಗಳಲ್ಲಿ ಸಾಕಷ್ಟು ಸಮತೋಲನದಿಂದ ಕೂಡಿದೆ. ಹೀಗಿದ್ದೂ ಆಸ್ಟ್ರೇಲಿಯಾ ತಂಡವು ಕಪ್‌ ಗೆಲ್ಲಲಿದೆ ಎಂದು ನನಗನಿಸುತ್ತಿದೆ. ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾದಾಗ ಏನಾಗಿದೆ ಎನ್ನುವುದನ್ನು ಇತಿಹಾಸವೇ ಹೇಳುತ್ತಿದೆ. ಆಸ್ಟ್ರೇಲಿಯಾ ತಂಡವು ಫೈನಲ್‌ನಲ್ಲಿ ಕಿವೀಸ್‌ಗೆ ಪಂಚ್ ನೀಡಿದೆ. ಮೆಲ್ಬೊರ್ನ್‌ನಲ್ಲಿ ನಡೆದ 2015ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲೂ ಕಿವೀಸ್‌ಗೆ ಆಸೀಸ್ ಹೊಡೆತ ಕೊಟ್ಟಿದೆ. ಭಾನುವಾರ(ನ.14) ಆಸ್ಟ್ರೇಲಿಯಾ ಟ್ರೋಫಿ ಜಯಿಸಿದರೆ ನನಗೇನು ಆಶ್ಚರ್ಯವೆನಿಸುವುದಿಲ್ಲ ಎಂದ ಪೀಟರ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

T20 World Cup: Aus vs NZ ಆಸೀಸ್‌ vs ಕಿವೀಸ್ ನಡುವಿನ ಕಾದಾಟದಲ್ಲಿ ಗೆಲ್ಲೋರು ಯಾರು..? ಭವಿಷ್ಯ ನುಡಿದ ವಾರ್ನ್‌..!

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಪಂದ್ಯಗಳಲ್ಲಿ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದ್ದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳನ್ನು ಹೊರದಬ್ಬಿ ಕಿವೀಸ್ ಹಾಗೂ ಆಸೀಸ್‌ ತಂಡಗಳು ಫೈನಲ್‌ಗೆ ಲಗ್ಗೆಯಿಟ್ಟಿವೆ. ಅಬುಧಾಬಿಯಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ನ್ಯೂಜಿಲೆಂಡ್ ತಂಡವು (New Zealand Cricket Team) 5 ವಿಕೆಟ್‌ಗಳ ಜಯ ಸಾಧಿಸಿದರೆ, ಮತ್ತೊಂದೆಡೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಎರಡನೇ ಸೆಮೀಸ್‌ನಲ್ಲಿ ಪಾಕಿಸ್ತಾನ ವಿರುದ್ದ ಆಸ್ಟ್ರೇಲಿಯಾ (Australia Cricket Team) ಕೂಡಾ 5 ವಿಕೆಟ್‌ಗಳ ಅಂತರದ ಜಯ ದಾಖಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಸೀಸ್‌ ಮತ್ತಷ್ಟು ಅಪಾಯಕಾರಿ:

ಆಸ್ಟ್ರೇಲಿಯಾ ತಂಡವು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಆಡುತ್ತಾರೆ. ಅದರಲ್ಲೂ ಡೇವಿಡ್ ವಾರ್ನರ್ (David Warner) ಫಾರ್ಮ್‌ಗೆ ಮರಳಿರುವುದು ಕಿವೀಸ್ ಪಾಲಿಗೆ ಎಚ್ಚರಿಕೆಯ ಘಂಟೆಯಾಗಿದೆ ಎಂದು ಪೀಟರ್‌ಸನ್ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯನ್ನರು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನಾಗಿಯೇ ಆಡುತ್ತಾರೆ. ಆ ಕಾರಣಕ್ಕಾಗಿಯೇ ಸಾಕಷ್ಟು ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡವು ಎದುರಾಳಿ ತಂಡದ ಎದುರು ಪ್ರಾಬಲ್ಯ ಮರೆದಿದೆ. ಫೈನಲ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರಲು ಕಾಂಗರೂ ಪಡೆ ಎದುರು ನೋಡುತ್ತಿರುತ್ತದೆ ಎಂದು ಪೀಟರ್‌ಸನ್ ಹೇಳಿದ್ದಾರೆ.

ICC T20 World Cup Final ಗೂ ಮುನ್ನ ಕ್ರಿಕೆಟ್ ಅಭಿಮಾನಿಗಳು ತಿಳಿದಿರಲೇಬೇಕಾದ ಇಂಟ್ರೆಸ್ಟಿಂಗ್ ಮಾಹಿತಿಗಳಿವು..!

ಆಸ್ಟ್ರೇಲಿಯಾ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರುವಲ್ಲಿ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್‌ ಪಾತ್ರ ಮಹತ್ವದ್ದಾಗಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದಲೇ ಹೊರಬಿದ್ದಿದ್ದ ವಾರ್ನರ್, ಇದೀಗ ಆಸೀಸ್‌ ತಂಡದ ಪಾಲಿಗೆ ನಂಬಿಕಸ್ಥ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಆರು ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್‌ 236 ರನ್‌ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.


 

Follow Us:
Download App:
  • android
  • ios