ಲಂಡನ್(ಮೇ.07)‌: ಒಲಿಂಪಿಕ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಟಿ10 ಮಾದರಿಯ ಕ್ರಿಕೆಟನ್ನು ಪರಿಚಯಿಸಬೇಕು ಎಂದು ಇಂಗ್ಲೆಂಡ್‌ನ ವಿಶ್ವಕಪ್‌ ವಿಜೇತ ನಾಯಕ ಇಯಾನ್‌ ಮಾರ್ಗನ್‌ ಅಭಿಪ್ರಾಯಿಸಿದ್ದಾರೆ. ಅಬುದಾಬಿ ಟಿ10 ಲೀಗ್‌ನಲ್ಲಿ ಮಾರ್ಗನ್ ಡೆಲ್ಲಿ ಬುಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. 

‘2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳೆಯರ ಟಿ20 ಟೂರ್ನಿ ನಡೆಯಲಿದೆ. ಆದರೆ ಟಿ20ಗಿಂತ ಟಿ10 ಮಾದರಿ ನಡೆಸಿದರೆ ಹೆಚ್ಚು ಮನರಂಜನೆ ಸಿಗಲಿದೆ. ತಲಾ 10 ಓವರ್‌ಗಳ ಪಂದ್ಯ ಒಂದು ಫುಟ್ಬಾಲ್‌ ಪಂದ್ಯದಷ್ಟೇ ಸಮಯ ತೆಗೆದುಕೊಳ್ಳಲಿದೆ’ ಎಂದು ಮಾರ್ಗನ್‌ ಹೇಳಿದ್ದಾರೆ. 1900 ಒಲಿಂಪಿಕ್ಸ್‌, 1998ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ನಡೆಸಲಾಗಿತ್ತು.

2020ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ಟಾಪ್ 5 ಕ್ರಿಕೆಟಿಗರಿವರು

ಒಲಿಂಪಿಕ್ಸ್, ಕಾಮನ್‌ವೆಲ್ತ್‌ನಂತ ಕ್ರೀಡಾಕೂಟದಲ್ಲಿ ಅಲ್ಪಾವಧಿಯಲ್ಲಿ ಕ್ರಿಕೆಟ್ ಅಯೋಜಿಸುವುದು ಕಷ್ಟಸಾಧ್ಯ. ಕೇವಲ ಎಂಟರಿಂದ ಹತ್ತು ದಿನಗಳೊಳಗಾಗಿ ಟೂರ್ನಿ ಆಯೋಜಿಸಬೇಕು ಎಂದಾದರೆ ಟಿ10 ಪಂದ್ಯಗಳು ಬೆಸ್ಟ್ ಎಂದು ಮೊರ್ಗನ್ ತಿಳಿಸಿದ್ದಾರೆ.  

ಇಯಾನ್ ಮಾರ್ಗನ್ 2019ರಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಇನ್ನು 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿ ಮೆರೆದಾಡಿತ್ತು.