* ರೋಚಕ ಘಟ್ಟದತ್ತ ಇಂಡೋ-ಇಂಗ್ಲೆಂಡ್ ಟೆಸ್ಟ್ ಪಂದ್ಯ* ಸ್ವಾತಂತ್ರ್ಯ ದಿನಾಚರಣೆಯಂದೇ ಗೆಲುವಿನ ನಿರೀಕ್ಷೆಯಲ್ಲಿ ಟೀಂ ಇಂಡಿಯಾ* ಸಲ್ಯೂಟ್‌ ಮಾಡುತ್ತೇನೆ ಸರ್ ಎಂದ ಹಿಟ್‌ಮ್ಯಾನ್‌

ಲಂಡನ್(ಆ.14)‌: ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿರುವ ಭಾರತ ತಂಡವು ಪಂದ್ಯವನ್ನು 4ನೇ ದಿನಕ್ಕೆ, ಅಂದರೆ ಆಗಸ್ಟ್ 15ಕ್ಕೆ ಗೆದ್ದು ಸ್ಮರಣೀಯಗೊಳಿಸುವ ಹುಮ್ಮಸ್ಸಿನಲ್ಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಆರಂಭಿಕ ಆಟಗಾರ ರೋಹಿತ್‌ ಶರ್ಮಾಗೆ ಪತ್ರಕರ್ತರೊಬ್ಬರು ಸ್ವಾತಂತ್ರ್ಯ ದಿನಾಚರಣೆಯಂದೇ ಪಂದ್ಯ ಗೆಲ್ಲುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್‌, ‘ಸಲ್ಯೂಟ್‌ ಮಾಡುತ್ತೇನೆ ಸರ್‌. ಇಂಗ್ಲೆಂಡ್‌ ವಿರುದ್ಧ ಆಗಸ್ಟ್ 15ರಂದು ಗೆಲುವು ಸಾಧಿಸಿದರೆ ಅದು ಅವಿಸ್ಮರಣೀಯ ಕ್ಷಣವಾಗಿ ಉಳಿಯಲಿದೆ’ ಎಂದು ಉತ್ತರಿಸಿದರು. ರೋಹಿತ್‌ ಮೊದಲ ಇನ್ನಿಂಗ್ಸ್‌ನಲ್ಲಿ 83 ರನ್‌ ಗಳಿಸಿ ಔಟಾಗಿದ್ದರು.

Scroll to load tweet…

INDvsENG 2ನೇ ಟೆಸ್ಟ್; ಬೃಹತ್ ಮೊತ್ತ ಪೇರಿಸಿ 3 ವಿಕೆಟ್ ಕಬಳಿಸಿದ ಟೀಂ ಇಂಡಿಯಾ!

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 364 ರನ್‌ ಬಾರಿಸಿ ಆಲೌಟ್ ಆಯಿತು. ಇನ್ನು ಎರಡನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 119 ರನ್‌ ಗಳಿಸಿದೆ. ಇನ್ನೂ ಇಂಗ್ಲೆಂಡ್ 245 ರನ್‌ಗಳ ಹಿನ್ನಡೆಯಲ್ಲಿದ್ದು, ನಾಯಕ ಜೋ ರೂಟ್ 48 ರನ್‌ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.