Asianet Suvarna News Asianet Suvarna News

ಅಗ್ರ ತಂಡದ ಅಂಕ ಲಾಸ್ಟ್ 3 ತಂಡಕ್ಕೆ ಹಂಚಿದರೆ ಹೇಗೆ? ಪ್ಲೇ ಆಫ್ ಮೂಲಕ ಕಾಂಗ್ರೆಸ್ ಕುಟುಕಿದ್ರಾ ಮಾಜಿ ಕ್ರಿಕೆಟಿಗ?

ಅಂಕಪಟ್ಟಿಯಲ್ಲಿರುವ ಟಾಪ್ 3 ತಂಡದ ತಲಾ 4 ಅಂಕಗಳನ್ನು ಕೊನೆಯ ಸ್ಥಾನದಲ್ಲಿರುವ 3 ತಂಡಗಳಿಗೆ ಹಂಚಿ, ಆ ತಂಡಗಳಿಗೆ ಪ್ಲೇ ಆಫ್ ಹಂತಕ್ಕೇರುವ ಅವಕಾಶ ಮಾಡಿಕೊಟ್ಟರೆ ಹೇಗೆ? ಇದೇ ಪಾಲಿಸಿಯನ್ನು ಒಂದು ಪಕ್ಷ ಮಾಡಲು ಹೊರಟಿದೆ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಒಂದು ಪಕ್ಷವನ್ನು ಕುಟುಕಿದ್ದಾರೆ 
 

Cricketer Venkatesh Prasad slams Political party on redistribute wealth of rich to poor policy ckm
Author
First Published Apr 22, 2024, 12:25 PM IST

ಬೆಂಗಳೂರು(ಏ.22) ಆರ್‌ಸಿಬಿ ಮತ್ತೊಂದು ಸೋಲಿನ ಬಳಿಕ ಪ್ಲೇ ಆಫ್ ಲೆಕ್ಕಾಚಾರಗಳು ಜೋರಾಗಿದೆ. ಇತ್ತ ಲೋಕಸಭಾ ಚುನಾವಣೆ ಕಾವು ಹೆಚ್ಚಾಗಿದೆ. ಇದರ ನಡುವೆ ಸಂಪತ್ತನ್ನು ಬಡವರಿಗೆ ಹಂಚುವ, ಒಂದು ಸಮುದಾಯಕ್ಕೆ ಈ ಸಂಪತ್ತಿನ ಮೊದಲ ಅಧಿಕಾರ ಅನ್ನೋ ವಿಷಯ ಭಾರಿ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ ಈ ವಿಚಾರ ಚರ್ಚೆಯಾಗುತ್ತಿದೆ. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಹೇಳಿದ ಮಾತನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ ಮೋದಿ, ಮುಸ್ಲಿಮ್ ಸಮುದಾಯಕ್ಕೆ ಈ ದೇಶದ ಸಂಪತ್ತಿನ ಮೊದಲ ಅಧಿಕಾರ ಅನ್ನೋ ಮಾತಿಗೆ ಟಾಂಗ್ ನೀಡಿದ್ದರು. ಇದೀಗ ಇದೇ ವಿಚಾರವನ್ನು ಮಂದಿಟ್ಟುಕೊಂಡು ಮಾಜಿ ಕ್ರಿಕೆಟಿಗ ವಂಕಟೇಶ್ ಪ್ರಸಾದ್ ಹೊಸ ಲೆಕ್ಕಾಚಾರದೊಂದಿಗೆ  ಒಂದು ಪಕ್ಷವನ್ನು ಕುಟುಕಿದ್ದಾರೆ.

ಟ್ವೀಟ್ ಮೂಲಕ ವೆಂಕಟೇಶ್ ಪ್ರಸಾದ್ ಪರೋಕ್ಷವಾಗಿ ಕಾಂಗ್ರೆಸ್ ಕುಟುಕಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಒಂದು ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲಿ ಶ್ರೀಮಂತರ ಸಂಪತ್ತನ್ನು ಬಡವರಿಗೆ ಹಂಚುವ ಭರವಸೆ ನೀಡಲಾಗಿದೆ. ಬಡವರನ್ನು ಮೇಲಕ್ಕೆತ್ತುವ, ಅವರ ಜೀವನ ಮಟ್ಟ ಸುಧಾರಿಸುವ ಕೆಲಸಗಳಾಗಬೇಕು. ಆದರೆ ಶ್ರೀಮಂತರಿಂದ ತೆಗೆದು ಬಡವರಿಗೆ ಹಂಚುವ ಈ ಆಲೋಚನೆಯೆ ಶೋಚನೀಯ. ಇದು ಹೇಗೆ ಎಂದರೆ ಸದ್ಯ ಅಂಕಪಟ್ಟಿಯಲ್ಲಿ ಟಾಪ್ 3 ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ತಲಾ 4 ಅಂಕಗಳನ್ನು ತೆಗೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ 3 ತಂಡಗಳಿಗೆ ಹಂಚಿ, ಆ ತಂಡಗಳನ್ನು ಪ್ಲೇ ಆಫ್ ಹಂತಕ್ಕೇರುವಂತೆ ಮಾಡುವುದು ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

ಕಾಂಗ್ರೆಸ್ ಚುನಾವಣಾ ಸೋಲಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!

ಪ್ರಧಾನಿ ಮೋದಿ ಭಾಷಣದ ಬಳಿಕ ಸಂಪತ್ತಿನ ಅಧಿಕಾರದ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ತಮ್ಮ ಭಾಷಣದಲ್ಲಿ ಆಡಿದ್ದ ಮಾತನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು.  ಅಲ್ಪಸಂಖ್ಯಾತರು, ಅದರಲ್ಲಿ ಪ್ರಮುಖವಾಗಿ ಮುಸ್ಲಿಮ್ ಸಮುದಾಯ ಈ ದೇಶದ ಸಂಪತ್ತಿನ ಮೊದಲ ಅಧಿಕಾರ ಅನ್ನೋ ಮನ್‌ಮೋಹನ್ ಸಿಂಗ್ ಮಾತನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಸಮುದಾಯ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ಮುಸ್ಲಿಮ್ ಸಮುದಾಯಕ್ಕೆ ನೀಡುತ್ತಾರೆ ಎಂದು ಮೋದಿ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.

 

 

ಇದರ ಬೆನ್ನಲ್ಲೇ ಮನ್‌ಮೋಹನ್ ಸಿಂಗ್ ಹಳೇ ಭಾಷಣದ ವಿಡಿಯೋಗಳು ವೈರಲ್ ಆಗಿದೆ. ಇದೇ ವಿಚಾರವಾಗಿ ವೆಂಕಟೇಶ್ ಪ್ರಸಾದ್ ಒಂದು ಪಕ್ಷದ ಪ್ರಣಾಳಿಕೆಯಲ್ಲಿ ಶ್ರೀಮಂತರಿಗೆ ಬಡವರಿಗೆ ಹಂಚಲು ಮುಂದಾಗಿದೆ ಎಂದಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಪಕ್ಷದ ಪ್ರಣಾಳಿಕೆಯಲ್ಲಿ ಈ ವಿಚಾರ ಉಲ್ಲೇಖಿಸಿದ್ದಾರೆ, ದಾಖಲೆ ನೀಡಿ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಯಾವುದೇ ಪ್ರಣಾಳಿಕೆಯಲ್ಲಿ ಈ ರೀತಿಯ ಭರವಸೆ ನೀಡಿಲ್ಲ ಎಂದು ಕಾಂಗ್ರೆಸ್ ಬೆಂಬಲಿಗರು ಹೇಳಿದ್ದಾರೆ. 

'ಟೆರರಿಸ್ಟ್‌ಗಳು ಶಾಂತಿಯ ಮಾತನಾಡಿದಂತೆ..' ಜುಬೇರ್‌ ವಿರುದ್ಧ ಮುಗಿಬಿದ್ದ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್!

ಇತ್ತ ಕೆಲ ಕ್ರಿಕೆಟ್ ಅಭಿಮಾನಿಗಳು, ವೆಂಕಟೇಶ್ ಪ್ರಸಾದ್ ಮೇಲ್ನೋಟಕ್ಕೆ ರಾಜಕೀಯ ಪಕ್ಷವನ್ನು ಟಾರ್ಗೆಟ್ ಮಾಡಿದಂತೆ ಅನಿಸಿದರೂ ಆರ್‌ಸಿಬಿ ವಿರುದ್ಧವೂ ಹರಿಹಾಯ್ದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios