ಬೆಂಗಳೂರು(ಡಿ.07): ಕರ್ನಾಟಕ ತಂಡದ ಆಲ್ರೌಂಡರ್‌ ಕೃಷ್ಣಪ್ಪ ಗೌತಮ್‌ ಶುಕ್ರ​ವಾರ ತಮ್ಮ ಬಹುದಿನ​ಗಳ ಗೆಳ​ತಿ ಅರ್ಚನಾ ಸುಂದತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿವಾಹ ಸಮಾ​ರಂಭ​ದಲ್ಲಿ ಕುಟುಂಬ​ಸ್ಥರು ಹಾಗೂ ಆಪ್ತ ಸ್ನೇಹಿ​ತರು ಪಾಲ್ಗೊಂಡಿ​ದ್ದರು. 

ಇತ್ತೀಚೆಗೆ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌)ನ ಶಿವಮೊಗ್ಗ ಲಯನ್ಸ್‌ ವಿರುದ್ಧದ ಪಂದ್ಯ​ದಲ್ಲಿ ಬಳ್ಳಾರಿ ಟಸ್ಕರ್ಸ್‌ನ ಗೌತಮ್‌ ಅಜೇಯ 134 ರನ್‌ ಹಾಗೂ 15 ರನ್‌ಗಳಿಗೆ 8 ವಿಕೆಟ್‌ ಕಿತ್ತು ಟಿ20 ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದಿದ್ದರು. ಪಂದ್ಯದ ಬಳಿಕ ಗೌತಮ್‌, ‘ನನ್ನ ಗೆಳತಿಯ ನಗುವೇ ನನಗೆ ಸ್ಫೂರ್ತಿ’ ಎಂದಿ​ದ್ದ​ರು. 

ಹೊಸ ಬದುಕಿಗೆ ಕಾಲಿಟ್ಟ ಮನೀಶ್ ಪಾಂಡೆಗೆ ಶುಭಕೋರಿದ ವಿರಾಟ್ ಕೊಹ್ಲಿ!

ಇನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಅಂತಿಮ ಓವರ್ ಬೌಲಿಂಗ್ ಮಾಡುವ ಮೂಲಕ ತಂಡಕ್ಕೆ 1 ರನ್’ಗಳ ರೋಚಕ ಗೆಲುವು ತಂದಿತ್ತಿದ್ದರು. ಡಿ.9ರಿಂದ ಆರಂಭ​ಗೊ​ಳ್ಳ​ಲಿ​ರುವ ರಣಜಿ ಟ್ರೋಫಿ​ಯಲ್ಲಿ ಗೌತಮ್‌ ರಾಜ್ಯ ತಂಡದ ಪರ ಕಣ​ಕ್ಕಿ​ಳಿ​ಯ​ಲಿ​ದ್ದಾರೆ.