Ind vs SA 3rd ODI: ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಫೈನಲ್..!

ಕೆ.ಎಲ್.ರಾಹುಲ್ ನಾಯಕತ್ವದ ಭಾರತ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆರಂಭಿಕ ಪಂದ್ಯದಲ್ಲಿ ಮೊನಚು ದಾಳಿ ಸಂಘಟಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಹರಿಣ ಪಡೆಯ ಮಾರಕ ದಾಳಿ ಮುಂದೆ ತತ್ತರಿಸಿತ್ತು. ಭಾರತ ಪರ ಮೊದಲ ಬಾರಿ ಆಡುತ್ತಿದ್ದರೂ ಸಾಯಿ ಸುದರ್ಶನ್ 2 ಅರ್ಧಶತಕಗಳೊಂದಿಗೆ ಗಮನ ಸೆಳೆದಿದ್ದಾರೆ.

Countdown begins for India vs South Africa 3rd ODI kvn

ಪಾರ್ಲ್(ಡಿ.12): 2018ರ ಬಳಿಕ ಮತ್ತೊಮ್ಮೆ ಹರಿಣಗಳ ತವರಿನಲ್ಲಿ ಏಕದಿನ ಸರಣಿ ಗೆಲ್ಲಲು ಎದುರು ನೋಡುತ್ತಿರುವ ಟೀಂ ಇಂಡಿಯಾ, ಗುರುವಾರ ದ.ಆಫ್ರಿಕಾ ವಿರುದ್ಧದ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 1 ಗೆಲುವು ಸಾಧಿಸಿದ್ದು, ಪಾರ್ಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ‘ಫೈನಲ್’ ಎನಿಸಿಕೊಂಡಿದೆ.

ಕೆ.ಎಲ್.ರಾಹುಲ್ ನಾಯಕತ್ವದ ಭಾರತ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆರಂಭಿಕ ಪಂದ್ಯದಲ್ಲಿ ಮೊನಚು ದಾಳಿ ಸಂಘಟಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಹರಿಣ ಪಡೆಯ ಮಾರಕ ದಾಳಿ ಮುಂದೆ ತತ್ತರಿಸಿತ್ತು. ಭಾರತ ಪರ ಮೊದಲ ಬಾರಿ ಆಡುತ್ತಿದ್ದರೂ ಸಾಯಿ ಸುದರ್ಶನ್ 2 ಅರ್ಧಶತಕಗಳೊಂದಿಗೆ ಗಮನ ಸೆಳೆದಿದ್ದಾರೆ. ಆದರೆ ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶ ಬಳಸಿಕೊಳ್ಳಬೇಕಿದ್ದು, ರಾಹುಲ್ ಮೇಲೂ ಭಾರೀ ನಿರೀಕ್ಷೆ ಇಡಲಾಗಿದೆ. ರಜತ್ ಪಾಟೀದಾರ್ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದು, ಅವಕಾಶ ಸಿಕ್ಕರೆ ಅವರಿಗೆ ತಿಲಕ್ ಜಾಗ ಬಿಟ್ಟುಕೊಡಬೇಕಾಗಬಹುದು. ರಿಂಕು ಸಿಂಗ್‌ರ ಟಿ20 ಆಟ ನೋಡಿರುವ ಅಭಿಮಾನಿಗಳು ಅವರಿಂದ ಏಕದಿನದಲ್ಲೂ ಸ್ಫೋಟಕ ಆಟವನ್ನು ನಿರೀಕ್ಷಿ ಸುತ್ತಿದ್ದಾರೆ.

ಇಂದು ಭಾರತ-ಆಸೀಸ್‌ ಮಹಿಳೆಯರ ಟೆಸ್ಟ್‌ ಶುರು; ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ

ಮತ್ತೊಂದೆಡೆ ಮೊದಲ ಪಂದ್ಯದ ಆಘಾತದ ಬಳಿಕ ದ.ಆಫ್ರಿಕಾ 2ನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನದೊಂದಿಗೆ ತಿರುಗೇಟು ನೀಡಿದೆ. ಈ ಪಂದ್ಯದಲ್ಲೂ ಅಬ್ಬರಿಸುವ ಮೂಲಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಎದುರು ನೋಡುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ/ರಜತ್ ಪಾಟೀದರ್, ರಿಂಕು ಸಿಂಗ್, ಕೆ ಎಲ್ ರಾಹುಲ್(ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್.

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಡೆ ಜೊರ್ಜಿ, ವಾನ್ ಡರ್ ಡುಸ್ಸೆನ್, ಏಯ್ಡನ್ ಮಾರ್ಕ್‌ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮುಲ್ಡರ್, ಬರ್ಗರ್, ವಿಲಿಯಮ್ಸ್, ಕೇಶವ್ ಮಹರಾಜ್, ಬ್ಯೂರನ್ ಹೆಂಡ್ರಿಕ್ಸ್.

ಪಿಚ್ ರಿಪೋರ್ಟ್: ಬೊಲಾಂಡ್ ಪಾರ್ಕ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸಲಾಗಿದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಹೆಚ್ಚಿನ ಲಾಭವಾದ ಉದಾಹರಣೆಯಿದೆ. ಪಂದ್ಯಕ್ಕೆ ಮಳೆ ಭೀತಿ ಇಲ್ಲ.

ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್
 

Latest Videos
Follow Us:
Download App:
  • android
  • ios