Asianet Suvarna News Asianet Suvarna News

ಐಪಿಎಲ್‌ನಲ್ಲಿ ತಾವೆದುರಿಸಿದ ಕಷ್ಟದ ಬೌಲರ್‌ ಹೆಸರಿಸಿದ ಕ್ರಿಸ್‌ ಗೇಲ್ಸ್‌..!

ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಬ್ಯಾಟರ್ ಕ್ರಿಸ್‌ ಗೇಲ್‌
ಐಪಿಎಲ್‌ನಲ್ಲಿ ತಾವೆದುರಿಸಿದ ಕ್ಲಿಷ್ಟಕರ ಬೌಲರ್ ಹೆಸರಿಸಿದ ಯೂನಿವರ್ಸಲ್ ಬಾಸ್
ಐಪಿಎಲ್‌ನಲ್ಲಿ ಗೇಲ್‌ರನ್ನೂ ತಲಾ 5 ಬಾರಿ ಬಲಿಪಡೆದಿರುವ ಭಜ್ಜಿ, ಅಶ್ವಿನ್

Chris Gayle Picks Toughest Bowler He Has Faced In IPL kvn
Author
First Published Feb 1, 2023, 5:48 PM IST

ನವದೆಹಲಿ(ಫೆ.01): ವೆಸ್ಟ್ ಇಂಡೀಸ್ ಸ್ಪೋಟಕ ಆರಂಭಿಕ ಬ್ಯಾಟರ್ ಕ್ರಿಸ್‌ ಗೇಲ್‌, ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಬ್ಯಾಟರ್. ಯೂನಿವರ್ಸಲ್ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್‌, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಕ್ರಿಸ್‌ ಗೇಲ್‌ಗೆ ಬೌಲಿಂಗ್‌ ಮಾಡಲು ಹಲವು ಬೌಲರ್‌ಗಳು ಪರದಾಡಿದ್ದನ್ನು ಕಂಡಿದ್ದೇವೆ. ಆದರೆ ಕ್ರಿಸ್‌ ಗೇಲ್‌ ಕೂಡಾ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸಲು ಕಷ್ಟಪಟ್ಟಿದ್ದಾಗಿ ತಿಳಿಸಿದ್ದಾರೆ. " ಜಸ್ಪ್ರೀತ್ ಬುಮ್ರಾ, ನಿಜಕ್ಕೂ ಕ್ಲಿಷ್ಟಕರ ಬೌಲರ್. ನನ್ನ ಪ್ರಕಾರ ಭಜ್ಜಿ ಅಥವಾ ಅಶ್ವಿನ್ ಅವರನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅವರಲ್ಲಿ ಕೇವಲ ವೇಗ ಮಾತ್ರವಿಲ್ಲ, ಅವರ ಸ್ಲೋ ಬೌಲರ್‌ ಎದುರಿಸಲು ಕಷ್ಟವಾಗುತ್ತದೆ. ಅವರ ಬೌಲಿಂಗ್ ವೇರಿಯೇಷನ್‌ ತುಂಬ ವಿಭಿನ್ನವಾದದ್ದು ಎಂದು ಸ್ಕಾಟ್‌ ಸ್ಟೈರೀಸ್ ಜತೆ ಮಾತುಕತೆ ವೇಳೆ ತಿಳಿಸಿದ್ದಾರೆ.

ಹರ್ಭಜನ್ ಸಿಂಗ್ ಹಾಗೂ ರವಿಚಂದ್ರನ್ ಅಶ್ವಿನ್‌, ಈ ಇಬ್ಬರು ಬೌಲರ್‌ಗಳು ಕ್ರಿಸ್‌ ಗೇಲ್ ಅವರನ್ನು ಅತಿಹೆಚ್ಚು ಬಾರಿ(5 ಬಾರಿ) ಐಪಿಎಲ್ ಟೂರ್ನಿಯಲ್ಲಿ ಬಲಿಪಡೆದಿದ್ದಾರೆ. ಹೀಗಿದ್ದೂ, ತಾವೆದುರಿಸಿದ ಕ್ಲಿಷ್ಟಕರ ಬೌಲರ್ ಯಾರು ಎನ್ನುವ ಪ್ರಶ್ನೆಗೆ ಜಸ್ಪ್ರೀತ್ ಬುಮ್ರಾ ಎನ್ನುವ ಉತ್ತರ ನೀಡಿದ್ದಾರೆ.

Ind vs NZ ನಿರ್ಣಾಯಕ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಮಹತ್ತರ ಬದಲಾವಣೆ?

43 ವರ್ಷದ ಕ್ರಿಸ್‌ ಗೇಲ್‌, ಇದುವರೆಗೂ ನಡೆದ 15 ಐಪಿಎಲ್ ಆವೃತ್ತಿಯ ಪೈಕಿ 13 ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಐಪಿಎಲ್‌ನಲ್ಲಿ ಕ್ರಿಸ್‌ ಗೇಲ್‌, ಕೋಲ್ಕತಾ ನೈಟ್ ರೈಡರ್ಸ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಪರ ಒಟ್ಟಾರೆ 142 ಪಂದ್ಯಗಳನ್ನಾಡಿ 4965 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 31 ಅರ್ಧಶತಕಗಳು ಸೇರಿವೆ.  

ಜಸ್ಪ್ರೀತ್ ಬುಮ್ರಾ, 2022ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು. ಇದಾದ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ಬುಮ್ರಾ, ಏಷ್ಯಾಕಪ್ ಟೂರ್ನಿ, ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ಕೆಲ ದಿನಗಳ ಹಿಂದಷ್ಟೇ ಜಸ್ಪ್ರೀತ್ ಬುಮ್ರಾ ಲಭ್ಯತೆಯ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲ ಬಾರಿಗೆ ತುಟಿಬಿಚ್ಚಿದ್ದರು.

" ಸದ್ಯದ ಮಟ್ಟಿಗಂತೂ ಜಸ್ಪ್ರೀತ್ ಬುಮ್ರಾ, ಯಾವಾಗ ತಂಡ ಕೂಡಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border Gavaskar Trophy) ಮೊದಲೆರಡು ಪಂದ್ಯಗಳಿಗೆ ಬುಮ್ರಾ ಅಲಭ್ಯರಾಗಿದ್ದಾರೆ. ನನ್ನ ಪ್ರಕಾರ, ಕೊನೆಯ ಎರಡು ಪಂದ್ಯಗಳಿಗೆ ಬುಮ್ರಾ, ಟೀಂ ಇಂಡಿಯಾ (Team India) ಕೂಡಿಕೊಳ್ಳುವ ವಿಶ್ವಾಸವಿದೆ. ನಾವು ಅವರನ್ನೂ ಗಾಯದ ವಿಚಾರದಲ್ಲಿ ಆತಂಕಕ್ಕೆ ದೂಡುವುದಿಲ್ಲ. ಇದಾದ ಬಳಿಕವೂ ನಾವೆಲ್ಲ ಹಲವು ಮಹತ್ವದ ಕ್ರಿಕೆಟ್ ಸರಣಿಗಳನ್ನು ಆಡಬೇಕಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನಾವು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಫಿಸಿಯೋ ಹಾಗೂ ವೈದ್ಯರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಾವು ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದೇವೆ. ನಮ್ಮ ವೈದ್ಯಕೀಯ ಸಿಬ್ಬಂದಿಯು ಜಸ್ಪ್ರೀತ್ ಬುಮ್ರಾ ಅವರಿಗೆ ಎಷ್ಟು ವಿಶ್ರಾಂತಿ ಅಗತ್ಯವಿದೆಯೋ ಅಷ್ಟು ನೀಡಲು ಬಯಸಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದರು.

Follow Us:
Download App:
  • android
  • ios