Asianet Suvarna News Asianet Suvarna News

ಬ್ರಿಸ್ಬೇನ್‌ ಟೆಸ್ಟ್‌: ಉತ್ತಮ ಆರಂಭ ಪಡೆದಿದ್ದ ಆಸೀಸ್‌ಗೆ, ಭಾರತ ಶಾಕ್‌..!

ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾಗೆ ತಿರುಗೇಟು ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Brisbane Test India Fight Back With 4 Wickets on day four kvn
Author
Brisbane QLD, First Published Jan 18, 2021, 8:20 AM IST

ಬ್ರಿಸ್ಬೇನ್(ಜ.18): ಭಾರತ-ಆಸ್ಟ್ರೇಲಿಯಾ ನಡುವಿನ ಕೊನೆಯ ಹಾಗೂ ನಿರ್ಣಾಯಕ ಟೆಸ್ಟ್‌ ಪಂದ್ಯ ರೋಚಕ ಘಟ್ಟದತ್ತ ದಾವಿಸುತ್ತಿದ್ದು, ನಾಲ್ಕನೇ ದಿನದಾಟದ ಲಂಚ್‌ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 149 ರನ್‌ ಬಾರಿಸಿದ್ದು, ಒಟ್ಟಾರೆ 182 ರನ್‌ಗಳ ಮುನ್ನಡೆ ಸಾಧಿಸಿದೆ.
 
ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಸರಣಿ ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ. ಮೂರನೇ ದಿನದಾಟದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 21 ರನ್‌ ಗಳಿಸುವ ಮೂಲಕ ಒಟ್ಟಾರೆ 54 ರನ್‌ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ, ನಾಲ್ಕನೇ ದಿನದಾರಂಭವನ್ನು ಉತ್ತಮವಾಗಿಯೇ ಆರಂಭಿಸಿತು. ಮೊದಲ ವಿಕೆಟ್‌ಗೆ ಡೇವಿಡ್‌ ವಾರ್ನರ್‌ ಹಾಗೂ ಮಾರ್ಕಸ್‌ ಹ್ಯಾರಿಸ್‌ 89 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನೇ ಪಡೆಯಿತು.

32 ರನ್‌ ಅಂತರದಲ್ಲಿ 4 ವಿಕೆಟ್‌ ಪತನ: ಹೌದು, ಬೃಹತ್‌ ಮೊತ್ತದತ್ತ ದಾಪುಗಾಲಿಡುವ ಮುನ್ಸೂಚನೆ ನೀಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ವೇಗಿ ಶಾರ್ದೂಲ್ ಠಾಕೂರ್ ಆಸರೆಯಾದರು. ಹ್ಯಾರಿಸ್‌ 38 ರನ್‌ ಬಾರಿಸಿ ಪಂತ್‌ಗೆ ವಿಕೆಟ್‌ ಒಪ್ಪಿಸಿದರೆ, ವಾರ್ನರ್‌ 48 ರನ್‌ ಗಳಿಸಿ ವಾಷಿಂಗ್ಟನ್ ಸುಂದರ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಮೊಹಮ್ಮದ್ ಸಿರಾಜ್ ಒಂದೇ ಓವರ್‌ನಲ್ಲಿ ಮಾರ್ನಸ್‌ ಲಬುಶೇನ್‌(25) ಹಾಗೂ ಮ್ಯಾಥ್ಯೂ ವೇಡ್‌(0) ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಆಸೀಸ್‌ಗೆ ಆಘಾತ ನೀಡಿದರು. 

ಲಯನ್‌ಗೆ ವಿಕೆಟ್‌ ಒಪ್ಪಿಸಿ ಕುಖ್ಯಾತಿಗೆ ಪಾತ್ರವಾದ ರೋಹಿತ್ ಶರ್ಮಾ

ಇದೀಗ ಸ್ಟೀವ್ ಸ್ಮಿತ್(28) ಹಾಗೂ ಕ್ಯಾಮರೋನ್‌ ಗ್ರೀನ್‌(4) ಕ್ರೀಸ್‌ ಕಾಯ್ದುಕೊಂಡಿದ್ದು, ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಟೀಂ ಇಂಡಿಯಾ ಬೌಲರ್‌ಗಳು ಪೆವಿಲಿಯನ್ನಿಗಟ್ಟಿದರೆ, ಗಾಬಾ ಟೆಸ್ಟ್ ಪಂದ್ಯದ ಮೇಲೆ ಭಾರತ ತಂಡ ಮತ್ತಷ್ಟು ಬಿಗಿ ಹಿಡಿತ ಸಾಧಿಸಲು ಅನುಕೂಲವಾಗಲಿದೆ.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ: 369& 149/4*
ಡೇವಿಡ್‌ ವಾರ್ನರ್: 48
ಮೊಹಮ್ಮದ್ ಸಿರಾಜ್: 37/2

ಭಾರತ: 336/10
ಶಾರ್ದೂಲ್‌ ಠಾಕೂರ್: 67
ಜೋಸ್ ಹೇಜಲ್‌ವುಡ್‌: 57/5

(* ನಾಲ್ಕನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ)

Follow Us:
Download App:
  • android
  • ios