ಕೊಹ್ಲಿ ಕೆಣಕಿದ ಸ್ಯಾಮ್ ಕಾನ್‌ಸ್ಟಾಸ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಬುಮ್ರಾ! ವಿಡಿಯೋ ವೈರಲ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಯಾಮ್ ಕಾನ್‌ಸ್ಟಾಸ್‌ ನಡುವೆ ಮಾತಿನ ಚಕಮಕಿ ನಡೆದಿದ್ದು. ಕೊಹ್ಲಿ ಔಟಾದಾಗ ಕಾನ್‌ಸ್ಟಾಸ್‌ ಪ್ರೇಕ್ಷಕರತ್ತ ತಿರುಗಿ ಸೆಲೆಬ್ರೇಟ್ ಮಾಡುವಂತೆ ಸನ್ನೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬುಮ್ರಾ ಕಾನ್‌ಸ್ಟಾಸ್‌ ವಿಕೆಟ್ ಪಡೆದಾಗ ಕೊಹ್ಲಿ ಮಾದರಿಯಲ್ಲೇ ಪ್ರತಿಕ್ರಿಯಿಸಿದರು.

Boxing Day Test Jasprit Bumrah Epic Send Off To Sam Konstas After Shattering His Middle Stump kvn

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯವು ಜಿದ್ದಾಜಿದ್ದಿನ ಪೈಪೋಟಿ ಜತೆಗೆ ಆಟಗಾರರ ನಡುವಿನ ಪೈಪೋಟಿಗೂ ಕಾರಣವಾಗಿದೆ. ಮೊದಲಿಗೆ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್‌ ಭುಜಕ್ಕೆ ಭುಜತಾಗಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಅನುಚಿತ ವರ್ತನೆ ತೋರಿದ ವಿರಾಟ್ ಕೊಹ್ಲಿಗೆ ಐಸಿಸಿ ಮ್ಯಾಚ್ ರೆಫ್ರಿ ದಂಡದ ಶಿಕ್ಷೆ ವಿಧಿಸಿತ್ತು.

ಇನ್ನು ಟೀಂ ಇಂಡಿಯಾ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 36 ರನ್‌ಗಳಿಸಿ ಸ್ಕಾಟ್‌ ಬೊಲೆಂಡ್‌ಗೆ ವಿಕೆಟ್ ಒಪ್ಪಿಸಿದರು. ಆಗ ಮೈದಾನದಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಸ್ಯಾಮ್ ಕಾನ್‌ಸ್ಟಾಸ್‌, ಪ್ರೇಕ್ಷಕರೆಡೆಗೆ ತಿರುಕಿ ಈಗ ಸೆಲಿಬ್ರೇಟ್ ಮಾಡಿ ಎಂಬಂತೆ ಆಕ್ಷನ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 

ಬಾಕ್ಸಿಂಗ್ ಡೇ ಟೆಸ್ಟ್ ವಿವಾದ: ವಿರಾಟ್ ಕೊಹ್ಲಿ ಜೋಕರ್‌ ಪಟ್ಟ ಕಟ್ಟಿದ ಆಸೀಸ್‌ ಮಾಧ್ಯಮ!

ಇದೀಗ ನಾಲ್ಕನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ ಆಕರ್ಷಕ ಅರ್ಧಶತಕ ಸಿಡಿಸಿದ್ದ ಸ್ಯಾಮ್ ಕಾನ್‌ಸ್ಟಾಸ್‌, ಎರಡನೇ ಇನ್ನಿಂಗ್ಸ್‌ನಲ್ಲೂ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದರು. ಆದರೆ  ಸ್ಯಾಮ್ ಕಾನ್‌ಸ್ಟಾಸ್‌ 8 ರನ್ ಗಳಿಸಿದ್ದಾಗ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು. ಆಗ ಜಸ್ಪ್ರೀತ್ ಬುಮ್ರಾ, ಕೊಹ್ಲಿಗೆ  ಸ್ಯಾಮ್ ಕಾನ್‌ಸ್ಟಾಸ್‌ ಮಾಡಿದ ರೀತಿಯಲ್ಲೇ ರಿಯಾಕ್ಷನ್ ಮಾಡುವ ಮೂಲಕ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಹೀಗಿತ್ತು ನೋಡಿ ಆ ವಿಡಿಯೋ:

ಸದ್ಯ ಆಸ್ಟ್ರೇಲಿಯಾ ತಂಡವು ಮೆಲ್ಬರ್ನ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 60 ಓವರ್ ಅಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದ್ದು, ಒಟ್ಟಾರೆ 266 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. 

Latest Videos
Follow Us:
Download App:
  • android
  • ios